ಶನಿವಾರ ಕರ್ನಾಟಕ ಬಂದ್ : ಸಾರ್ವಜನಿಕರ ಗಮನಕ್ಕೆ
ಹೀಗಾಗಿ ರಾಜ್ಯದ ನಾಗರಿಕರು ಈಗಲೇ ಈ ಬಂದ್‌ಗೆ ತಯಾರಿಯಾಗಬೇಕಾಗಿದೆ. ಎಲ್ಲ ಶಾಲೆ-ಕಾಲೇಜುಗಳು, ಪೆಟ್ರೋಲ್ ಬಂಕ್‌ಗಳು, ಕೋರ್ಟ್ ಕಲಾಪಗಳು, ಅಂಗಡಿ ಮುಂಗಟ್ಟುಗಳು, ಸರಕಾರಿ ಕಚೇರಿಗಳು, ಖಾಸಗಿ ಸಂಸ್ಥೆಗಳು, ಹಾಲು ಸರಬರಾಜು, ಅಡುಗೆ ಅನಿಲ ಸಿಲಿಂಡರ್ ಸರಬರಾಜು, ಕೇಬಲ್ ಮನರಂಜನಾ ಕಾರ್ಯಕ್ರಮಗಳು, ಚಿತ್ರಮಂದಿರಗಳು ತಟಸ್ಥವಾಗಲಿವೆ.
ಕರ್ನಾಟಕ ಸರಕಾರ ಸಲ್ಲಿಸಿದ್ದ ಮರುವಿಚಾರಣೆ ಅರ್ಜಿ ಸೋಮವಾರಕ್ಕೆ ಮುಂದೂಡಿರುವುದರಿಂದ ರಾಜ್ಯದ ರೈತರು ಮತ್ತು ಸಾರ್ವಜನಿಕರು ಮತ್ತಷ್ಟು ರೊಚ್ಚಿಗೆದ್ದಿದ್ದಾರೆ. ರಾಜ್ಯಕ್ಕೆ ಕೇಂದ್ರದ ತಂಡ ಆಗಮಿಸಿದ್ದರೂ ಅವರು ಎರಡು ದಿನಗಳ ಕಾಲ ಅಧ್ಯಯನ ನಡೆಸಿ ವರದಿ ಕೊಡುವಷ್ಟರಲ್ಲಿ ಮತ್ತಷ್ಟು ಕಾವೇರಿ ನೀರು ತಮಿಳುನಾಡಿಗೆ ಕರ್ನಾಟಕದಿಂದ ಹರಿದುಹೋಗಿರುತ್ತದೆ.
ಸಾರ್ವಜನಿಕರು ಗಮನಿಸಬೇಕಾದ ಸಂಗತಿಗಳು
* ರಾಜ್ಯದ ಎಲ್ಲ ಖಾಸಗಿ ಶಾಲೆಗಳು ಶನಿವಾರ ಬೀಗ ಜಡಿಯಲಿವೆ. ಕೆಲವೆಡೆ ಪರೀಕ್ಷೆಗಳು ನಡೆಯುತ್ತಿರುವುದರಿಂದ, ಮಕ್ಕಳಿಗೆ ದಸರಾ ರಜಾ ಎರಡು ದಿನ ಖೋತಾ ಆಗಲಿದೆ. ಕಾಲೇಜುಗಳು ಕೂಡ ಬಂದ್ ಆಗಲಿವೆ.
* ಶನಿವಾರ ಇಡೀ ದಿನ ಅಡುಗೆ ಅನಿಲ ಸಿಲಿಂಡರ್ ಸರಬರಾಜು ಇರುವುದಿಲ್ಲ. ಸಿಲಿಂಡರ್ ಮನೆಗೆ ಬರದಿದ್ದರೆ ಏಜೆಂಟರನ್ನು ದೂರಬೇಡಿ.
* ಹಾಲು ಸರಬರಾಜು ಬೆಳಿಗ್ಗೆ 6 ಗಂಟೆಯೊಳಗೆ ಮಾತ್ರ ಇರುತ್ತದೆ, ನಂತರ ಎಲ್ಲೂ ಸಿಗದು. ಹಾಗಾಗಿ ಬೆಳಿಗ್ಗೆ ಬೇಗನೆ ಸೂರ್ಯ ಹುಟ್ಟುವ ಮೊದಲೇ ಬಾಸ್ಕೆಟ್ ಹಿಡಿದುಕೊಂಡು ಹಾಲಿನ ಬೂತಿಗೆ ಹೋಗುವುದು ಒಳಿತು.
* ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಪೆಟ್ರೋಲ್ ಕೂಡ ಬಂಕ್‌ಗಳಲ್ಲಿ ಲಭ್ಯವಾಗದು. ಮೊದಲೇ ಪೆಟ್ರೋಲ್ ಟ್ಯಾಂಕ್ ತುಂಬಿಟ್ಟುಕೊಂಡರೆ ಒಳಿತು. ಅಥವಾ ಸಂಜೆ 6ರವರೆಗೆ ಕಾಯಬೇಕು.
* ಕರ್ನಾಟಕದ ನ್ಯಾಯವಾದಿಗಳು ಬಂದ್‌ಗೆ ಭರಪೂರ ಬೆಂಬಲ ವ್ಯಕ್ತಪಡಿಸಿದ್ದಾರೆ. ಶನಿವಾರ ಯಾವುದೇ ಕೋರ್ಟ್ ಕಲಾಪಗಳು ಇರುವುದಿಲ್ಲ. ಕೋರ್ಟ್ ಹತ್ತಿರ ಹೆಜ್ಜೆ ಹಾಕಲೇಬೇಡಿ ಎಂಬುದು ಕಕ್ಷಿಗಾರರಿಗೆ ನೀಡಲಾಗಿರುವ ಸಂದೇಶ.
* ಬಂದ್‌ಗೆ ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿ ಕೂಡ ಬೆಂಬಲ ಸೂಚಿಸಿರುವುದರಿಂದದ ರಸ್ತೆಗಳಲ್ಲಿ ಬಸ್ ಇಳಿಯುವುದಿಲ್ಲ. ಸುಮ್ಮನೆ ಬಸ್ಸಿಗಾಗಿ ಬಂದು ನಿಲ್ದಾಣಗಳಲ್ಲಿ ಕಾಯದಿರುವುದು ಉತ್ತಮ. ಕಚೇರಿ ಇದ್ದರೆ ಖಾಸಗಿ ವಾಹನವೇ ಗತಿ.
* ಶನಿವಾರ ಚಿತ್ರಮಂದಿರಗಳು ಮತ್ತು ಚಿತ್ರೀಕರಣ ಕೂಡ ಬಂದ್ ಆಗಲಿವೆ. ಇಡೀ ಚಿತ್ರೋದ್ಯಮ ಕಾವೇರಿ ಹೋರಾಟದಲ್ಲಿ ಸಂಪೂರ್ಣವಾಗಿ ಇಳಿಯಲಿದೆ.
* ಕೇಬಲ್‌ಗಳಲ್ಲಿ ಯಾವುದೇ ಮನರಂಜನಾತ್ಮಕ ಕಾರ್ಯಕ್ರಮಗಳು ಬರುವುದಿಲ್ಲ. ರಜಾಮಜಾ ಎಂದು ಮನೆಯಲ್ಲಿ ಕುಳಿತವರಿಗೆ ನಿರಾಶೆ ಗ್ಯಾರಂಟಿ. ಆದರೆ, ನ್ಯೂಸ್ ಚಾನಲ್‌ಗಳು ಸುದ್ದಿಗಳನ್ನು ಬಿತ್ತರಿಸಲಿವೆ. ಕೆಲ ಓದುಗರು ಹೇಳುವುದೇನೆಂದರೆ, ಕನ್ನಡ ಚಾನಲ್‌ಗಳನ್ನು ಏಕೆ ಬಂದ್ ಮಾಡಬೇಕು? ಸರಿಯಾದ ಮಾತು.
* ಇನ್ನು ಆಟೋ ಚಾಲಕರು ಮತ್ತು ವರ್ತಕರು ಕೂಡ ಬೆಂಬಲ ವ್ಯಕ್ತಪಡಿಸಿರುವುದರಿಂದ ಆಟೋಗಳು ರಸ್ತೆಗಿಳಿಯಲಾರವು ಮತ್ತು ಔಷಧಾಲಯಗಳು ಸೇರಿದಂತೆ ಅಂಗಡಿ ಮುಂಗಟ್ಟುಗಳು ಕೂಡ ತೆರೆಯಲಾರವು.
* ಶನಿವಾರ ಬ್ಯಾಂಕ್‌ಗಳು ತೆರೆಯುತ್ತವಾ ಗೊತ್ತಿಲ್ಲ. ಈ ಕುರಿತಂತೆ ಯಾವುದೇ ಅಧಿಕೃತ ಪ್ರಕಟಣೆಯನ್ನು ಹೊರಡಿಸಲಾಗಿಲ್ಲ.













Click it and Unblock the Notifications