ಕಾವೇರಿ ಹೋರಾಟ, ಕಾನೂನು ಸಚಿವ ಸುರೇಶ್ ನಾಪತ್ತೆ?

ಜಲಮಂಡಳಿ ಹಾಗೂ ನಗರಾಭಿವೃದ್ಧಿ ಇಲಾಖೆ ಖಾತೆ ಹೊಂದಿರುವ ಸುರೇಶ್ ಕುಮಾರ್ ಅವರು ಎರಡು ದಿನಗಳಿಂದ ಬೆಂಗಳೂರಿಗರಿಗೆ ಡಿಸೆಂಬರ್ ನಂತರ ಕುಡಿಯಲು ನೀರು ಸಿಗುವುದಿಲ್ಲ ಎಂದು ಬಾಂಬ್ ಎತ್ತಿ ಹಾಕಿದ್ದು ಬಿಟ್ಟರೆ ಮತ್ತೆ ಮೌನವಾಗಿದ್ದಾರೆ.
ಹಲವಾರು ಹೋರಾಟಗಳಲ್ಲಿ ಪಾಲ್ಗೊಂಡ ಅನುಭವವಿರುವ ಸುರೇಶ್ ಕುಮಾರ್ ಅವರು ಕಾವೇರಿ ವಿವಾದ ಕಾನೂನು ಹೋರಾಟದ ಬಗ್ಗೆ ಮಾಹಿತಿ ನೀಡಲು ಹೊರಗೆ ಕಾಣಿಸಿಕೊಂಡಿಲ್ಲ. ಕಾವೇರಿ ಪರ ಹೋರಾಟದ ಪರ ಹೇಳಿಕೆಯನ್ನು ನೀಡಿಲ್ಲ.
ರಾಜಾಜಿನಗರ ವಾರ್ಡ್ ನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾದಾಗ ರಾತ್ರಿ ಇಡಿ ವಾರ್ಡ್ ಗಳಲ್ಲಿ ಸಂಚರಿಸಿ ಸಾರ್ವಜನಿಕರ ಸಮಸ್ಯೆ ಆಲಿಸಿ, ಸೂಕ್ತವಾಗಿ ಸ್ಪಂದಿಸಿದ್ದರು. ಕಾವೇರಿ 4ನೇ ಹಂತ 2ನೇ ಘಟ್ಟದ ಕಾಮಗಾರಿ ತ್ವರಿತವಾಗಿ ನಡೆಸುವಂತೆ ಕ್ರಮ ಕೈಗೊಂಡಿದ್ದರು.
ಅಸ್ಸಾಂ ನಿವಾಸಿಗಳ ವಲಸೆ ಬಗ್ಗೆ ತಲೆ ಕೆಡಿಸಿಕೊಂಡು ರೈಲ್ವೇ ನಿಲ್ದಾಣಕ್ಕೆ ತೆರಳಿ ಹಗಲು ರಾತ್ರಿ ಈಶಾನ್ಯ ರಾಜ್ಯದವರ ಮನ ಓಲೈಕೆಯಲ್ಲಿ ತೊಡಗಿದ್ದ ಸುರೇಶ್ ಕುಮಾರ್ ಅವರು ಎಲ್ಲಿ ಎಂದು ಹಲವರ ಪ್ರಶ್ನೆಯಾಗಿದೆ.
ಇದು ಸುರೇಶ್ ಕುಮಾರ್ ಅವರ ಮೇಲಿನ ಆರೋಪವಲ್ಲ. ಅಪ್ಪಟ ಆರೆಸ್ಸೆಸ್ ಮನೋಭಾವದ ಸಮಾಜಿಕ ಕಳಕಳಿ ಇರುವ ಸದಾ ಕಾಲ ಜನರಿಗಾಗಿ ಹೋರಾಟಕ್ಕಿಳಿಯುವ ಸಚಿವ ಸುರೇಶ್ ಅವರಿಗೆ ಏನಾಗಿದೆ ಎಂಬ ಪ್ರಶ್ನೆ ಮೂಡುತ್ತಿದೆ.
ಬೆಂಗಳೂರಿಗೆ ಹೊರಗಿನಿಂದ ಪೂರೈಕೆಯಾಗುವ ನೀರು ಸಿಗದಿರುವುದು ಆತಂಕಕಾರಿಯಾದಂತೆ ಅಂತರ್ಜಲ ಬತ್ತಿ ಹೋಗಿರುವುದು. ಕೆರೆಗಳು ನಾಶವಾಗಿರುವುದು ಸಮಸ್ಯೆಯನ್ನು ಇನ್ನಷ್ಟು ಉಲ್ಬಣಗೊಳಿಸಿದೆ. ಕುಡಿಯುವ ನೀರಿನ ಏಕೈಕ ಆಧಾರವಾಗಿರುವ ಕಾವೇರಿ ನೀರು ಸಿಗದಿದ್ದರೆ ಮುಂದೆ ಗತಿ ಏನು? ಎಂಬ ಪ್ರಶ್ನೆಗೆ ಪರ್ಯಾಯ ವ್ಯವಸ್ಥೆ ಬಗ್ಗೆ ಯೋಚಿಸಲಾಗುವುದು ಎಂದಿದ್ದ ಸುರೇಶ್ ಕುಮಾರ್ ಎಲ್ಲಿದ್ದಾರೆ?












Click it and Unblock the Notifications