ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಬಂದ್:ಅಭೂತಪೂರ್ವ ಕಟ್ಟೆಚ್ಚರ,ಭದ್ರತೆ

|
Google Oneindia Kannada News

Karnataka bundh police security measure
ಬೆಂಗಳೂರು, ಅ 5: ವಿವಿಧ ಕನ್ನಡಪರ ಸಂಘಟನೆಗಳು ನಾಳೆ (ಅ 6) ಕರ್ನಾಟಕ ಬಂದ್ ಕರೆ ನೀಡಿರುವ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಬಿಗಿ ಪೋಲೀಸ್ ಬಂದೋಬಸ್ತ್ ನೀಡಲಾಗಿದೆ. ಸಾರ್ವಜನಿಕರು ಭಯಭೀತಿ ಪಡುವ ಅವಶ್ಯಕತೆಯಿಲ್ಲ ಎಂದು ಪೋಲೀಸ್ ಆಯುಕ್ತರು ಹೇಳಿಕೆ ನೀಡಿದ್ದಾರೆ.

ಬಂದ್ ಶಾಂತಿಯುತವಾಗಿ ನಡೆಯಲು ಪೋಲೀಸ್ ಇಲಾಖೆ ಟೊಂಕ ಕಟ್ಟಿ ನಿಂತಿದ್ದು ಬೆಂಗಳೂರು ನಗರದಲ್ಲಿ ಕಿರಿಯ ಅಧಿಕಾರಿಯಿಂದ ಹಿಡಿದು ಕಮಿಷನರ್ ವರೆಗೆ ಎಲ್ಲರೂ ಕರ್ತವ್ಯದಲ್ಲಿರುತ್ತಾರೆ ಎಂದು ಬೆಂಗಳೂರು ಪೋಲೀಸ್ ಆಯುಕ್ತ ಜ್ಯೋತಿಪ್ರಕಾಶ್ ಮಿರ್ಜಿ ಹೇಳಿದ್ದಾರೆ.

ಮುಖ್ಯವಾಗಿ ಬೆಂಗಳೂರು, ಮೈಸೂರು, ಚಾಮರಾಜನಗರ, ಹಾಸನ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಬಂದ್ ತೀವ್ರ ಸ್ವರೂಪ ಪಡೆದುಕೊಳ್ಳುವ ಎಲ್ಲಾ ಸಾಧ್ಯತೆಗಳಿರುವುದರಿಂದ BSF ನ ಎರಡು ತುಕುಡಿ ಮತ್ತು RAF ನ ಒಂದು ತುಕುಡಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ಪೋಲೀಸ್ ಮಹಾ ನಿರ್ದೇಶಕ ಬಿಪಿನ್ ಗೋಪಾಲಕೃಷ್ಣ ತಿಳಿಸಿದ್ದಾರೆ.

ಇದಲ್ಲದೆ ರಾಜ್ಯಾದ್ಯಂತ ರಾಜ್ಯ ಮೀಸಲು ಪಡೆ, ಸಶಸ್ತ್ರ ಪಡೆ, ಗೃಹರಕ್ಷಕ ದಳ, ಸಿವಿಲ್ ಪೋಲೀಸ್ ಸೇರಿ ಸುಮಾರು 90 ಸಾವಿರ ಮಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ಗೋಪಾಲಕೃಷ್ಣ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಿರ್ಜಿ ಪತ್ರಿಕಾಘೋಷ್ಠಿಯ ಆಯ್ದ ಮುಖ್ಯಾಂಶಗಳು

* ಬಂದ್ ಹಿನ್ನಲೆಯಲ್ಲಿ ಬೆಂಗಳೂರು ನಗರದಲ್ಲಿ 15 ಸಾವಿರ ಪೋಲೀಸರನ್ನು ನಿಯೋಜಿಸಲಾಗಿದೆ.
* 36 ಕೆಎಸ್ಆರ್ಪಿ ತುಕುಡಿಯನ್ನು ಹೆಚ್ಚುವರಿಯಾಗಿ ಬಳಸಿಕೊಳ್ಳಲಾಗುತ್ತದೆ.
* ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುವಂತಿಲ್ಲ
* ಪ್ರತಿಭಟನೆಯ ವಿಡಿಯೋ ಚಿತ್ರೀಕರಣ ತೆಗೆಯಲಾಗುವುದು.
* ಬಸ್ ಸಂಚಾರ ವ್ಯವಸ್ಥೆ ಸಾರಿಗೆ ಇಲಾಖೆಯ ವಿವೇಚನೆಗೆ ಬಿಟ್ಟಿದ್ದು. ಪೋಲೀಸ್ ಇಲಾಖೆ ಭದ್ರತೆ ನೀಡಲು ಸಿದ್ದ.
* ನಗರದ ಎಲ್ಲಾ ಮೂಲೆಗಳಲ್ಲೂ ಪೋಲೀಸ್ ಬಂದೋಬಸ್ತ್ ನೀಡಲಾಗುವುದು.
* ಇಂದು (ಅ 5) ರಾತ್ರಿಯಿಂದಲೇ ಪೊಲೀಸರು ಗಸ್ತು ತಿರುಗಲಿದ್ದಾರೆ.
* ಯಾವುದೇ ವದಂತಿಗಳಿಗೆ ಭಯ ಪಡಬೇಡಿ.
* ಬಂದ್ ವೇಳೆ ಹಿಂಸಾಚಾರಕ್ಕೆ ಮುಂದಾಗುವವರ ಅಥವಾ ಪ್ರಚೋದಿಸುವವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು.

English summary
Karnataka police has already taken necessary steps for tomorrow's Karnataka bundh. Nearly 95 thousand police has been deployed. 15 thousand police has been deployed in Bangalore city said Bangalore City police Commissioner Jyothi Prakash Mirji.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X