ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್ಥಿಕ ಬಿಕ್ಕಟ್ಟಿಗೆ ಕಿಂಗ್ ಫಿಷರ್ ಉದ್ಯೋಗಿ ಪತ್ನಿ ಬಲಿ

By Mahesh
|
Google Oneindia Kannada News

Kingfisher Airlines Claims one life
ನವದೆಹಲಿ, ಅ.3: ಇಲ್ಲಿನ ಮಂಗಳಪುರಿ ಪ್ರದೇಶದಲ್ಲಿ ಕಿಂಗ್ ಫಿಷರ್ ಪೈಲಟ್ ಯೊಬ್ಬರ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ ಪತಿಗೆ ಸಂಬಳ ಸಿಗದಿರುವುದರಿಂದ ಈ ನಿರ್ಧಾರ ಕೈಗೊಂಡೆ ಎಂದು ಡೆತ್ ನೋಟ್ ನಲ್ಲಿ ಬರೆದಿದಾರೆ. ತೀವ್ರ ಅರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವಿಜಯ್ ಮಲ್ಯ ಒಡೆತನದ ಕಿಂಗ್ ಫಿಷರ್ ಸಂಸ್ಥೆ ತನ್ನ ಉದ್ಯೋಗಿಗಳಿಗೆ ಹಲವು ತಿಂಗಳುಗಳಿಂದ ಸಂಬಳ ಕೊಡುವುದನ್ನು ನಿಲ್ಲಿಸಿದೆ.

ದೆಹಲಿಯ ಮಂಗಳಪುರಿ ಪ್ರದೇಶದ ನಿವಾಸಿ 45 ವರ್ಷದ ಸುಶ್ಮಿತಾ ಚಕ್ರವರ್ತಿ ಅವರು ತಮ್ಮ ನಿವಾಸದಲ್ಲಿ ಗುರುವಾರ (ಅ.4) ಮಧ್ಯಾಹ್ನ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಾಳಿ ಭಾಷೆಯಲ್ಲಿ ಆತ್ಮಹತ್ಯೆ ಪತ್ರವನ್ನು ಬರೆದಿರುವ ಸುಶ್ಮಿತಾ,

'ನನ್ನ ಪತಿ ಹಾಗೂ ಪುತ್ರನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಆದರೆ, ಕಳೆದ ಆರು ತಿಂಗಳಿನಿಂದ ನನ್ನ ಪತಿ ಸಂಬಳವಿಲ್ಲದೆ ಮನೆ ನಡೆಸಲು ಆಗದೆ ಪಟ್ಟ ಕಷ್ಟ ನೆನೆದಾಗ ನನ್ನ ನಿರ್ಧಾರ ಸರಿ ಎನಿಸುತ್ತದೆ. ತೀವ್ರವಾದ ಆರ್ಥಿಕ ಸಂಕಷ್ಟದಲ್ಲಿ ನರಳಿ ನರಳಿ ಬದುಕುವುದಕ್ಕಿಂತ ಸಾಯುವುದೇ ಮೇಲು ಎಂದು ಆತ್ಮಹತ್ಯೆ ನಿರ್ಧಾರ ಕೈಗೊಂಡಿದ್ದೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ.

ಸುಶ್ಮಿತಾ ಅವರ ಪತಿ ಮನಸ್ ಚಕ್ರವರ್ತಿ ಅವರು ಕಿಂಗ್ ಫಿಷಶ್ ಏರ್ ಲೈನ್ಸ್ ನಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದಾರೆ. ಆರ್ಥಿಕ ಸಂಕಷ್ಟದ ಸುಳಿಯಲ್ಲಿರುವ ಕಿಂಗ್ ಫಿಷರ್ ನ ಸುಮಾರು 270 ಇಂಜಿನಿಯರ್ ಗಳ ಜೊತೆ ಮನಸ್ ಚಕ್ರವರ್ತಿ ಕೂಡಾ ಕಳೆದ ಶನಿವಾರದಿಂದ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ಸೋಮವಾರ ಕಿಂಗ್ ಫಿಷರ್ ಪಾರ್ಶ್ವ ಲಾಕ್ ಔಟ್ ಎಂದು ಘೋಷಿಸಿದೆ. ಕಳೆದ ಮೂರು ದಿನಗಳಿಂದ ಕಿಂಗ್ ಫಿಷರ್ ವಿಮಾನಗಳು ನೆಲಕಚ್ಚಿ ನಿಂತಿದೆ.

ಕಿಂಗ್ ಫಿಷರ್ ವಿಮಾನಯಾನ ಸಂಸ್ಥೆ ತನ್ನ 4000 ಉದ್ಯೋಗಿಗಳ ಪೈಕಿ 2000 ಉದ್ಯೋಗಿಗಳಿಗೆ ಈ ವರ್ಷದ ಮಾರ್ಚ್ ತಿಂಗಳಿನ ತನಕ ಸಂಬಳ ನೀಡಿದೆ. ನಂತರ ಯಾರೊಬ್ಬರಿಗೂ ಸಂಬಳ ನೀಡುವಲ್ಲಿ ವಿಫಲವಾಗಿದೆ.

ಸುಮಾರು 7000 ಕೋಟಿ ರು.ಗೂ ಅಧಿಕ ಸಾಲವನ್ನು ಕಿಂಗ್ ಫಿಷರ್ ಸಂಸ್ಥೆ ತಲೆಮೇಲೆ ಹೊತ್ತುಕೊಂಡಿದೆ. ಉದ್ಯೋಗಿಗಳಿಗೆ ಸಂಬಳ ನೀಡದೆ, ಬ್ಯಾಂಕ್ ಸಾಲ ನೀಡದಿರುವ ಕಿಂಗ್ ಫಿಷರ್ ಸಂಸ್ಥೆ ಮತ್ತೊಮ್ಮೆ ವಿಮಾನಯಾನ ಆರಂಭಿಸುವುದು ಕಷ್ಟ ಎನಿಸಿದೆ.

ಕಿಂಗ್ ಫಿಷರ್ ಸಂಸ್ಥೆ ವಿಮಾನ ಹಾರಾಟ ಆರಂಭಿಸಲು Directorate General of Civil Aviation (DGCA) ನಿಂದ ಮತ್ತೊಮ್ಮೆ ಅನುಮತಿ ಪಡೆಯಬೇಕಾಗುತ್ತದೆ ಎಂದು ಕೇಂದ್ರ ವಿಮಾನಯಾನ ಇಲಾಖೆ ಸೂಚಿಸಿದೆ. ಈ ನಡುವೆ ಒಂದು ತಿಂಗಳ ಸಂಬಳ ನೀಡುವ ಆಫರ್ ನೊಂದಿಗೆ ಉದ್ಯೋಗಿಗಳ ಜೊತೆ ಸಂಧಾನ ನಡೆಸಲು ಯತ್ನಿಸಿದ ಕಿಂಗ್ ಫಿಷರ್ ಸೋತಿದೆ.

English summary
Vijay Mallya's Kingfisher Airlines took its first human toll. The wife of a ground duty employee of troubled private carrier committed suicide in the national capital's Dwarka area on Thursday(Oct.4).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X