ಕಾವೇರಿ ಹೋರಾಟಕ್ಕೆತಮಿಳರು,ನಾಳೆ ಕೆಆರ್ಎಸ್ ಮುತ್ತಿಗೆ

ಈ ಮಧ್ಯೆ, ಕಾವೇರಿ ಕಣಿವೆ ರೈತರ ಆಕ್ರೋಶದ ಕಿಚ್ಚು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಮಂಗಳವಾರ (ಅ 2) ಸಂಜೆಯೊಳಗೆ ತಮಿಳುನಾಡಿಗೆ ಹರಿಸಲಾಗುತ್ತಿರುವ ನೀರನ್ನು ಸ್ಥಗಿತಗೊಳಿಸದಿದ್ದರೆ ಅಕ್ಟೋಬರ್ ಮೂರರಂದು ಸಾವಿರಾರು ರೈತರು ಕೆಆರ್ಎಸ್ ಗೆ ಮುತ್ತಿಗೆ ಹಾಕುತ್ತಾರೆ ಎಂದು ಹಿತರಕ್ಷಣಾ ಸಮಿತಿ ಸರಕಾರಕ್ಕೆ ಎಚ್ಚರಿಕೆ ನೀಡಿದೆ.
ಮಾದೇಗೌಡರ ನೇತೃತ್ವದಲ್ಲಿ ಕಾವೇರಿ ಜಲಾಯನ ಪ್ರದೇಶದ ಶಾಸಕರು, ಸಂಸದರು ಮತ್ತು ರೈತರ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಗಾಂಧೀ ಜಯಂತಿ ಪ್ರಯುಕ್ತ ಇಂದು (ಅ 2) ಶಾಂತಿಯುತ ಸತ್ಯಾಗ್ರಹ ನಡೆಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.
ಮಂಗಳವಾರ ಆದಿಚುಂಚನಗಿರಿ ಶ್ರೀಗಳ ನೇತೃತ್ವದಲ್ಲಿ ಸಭೆ ಕರೆಯಲಾಗಿದ್ದು, ಸಿಎಂ ಶೆಟ್ಟರ್ ಅವರ ಬಳಿ ನಿಯೋಗ ತೆರಳಿ ಇಂದು ಸಂಜೆಯೊಳಗೆ ನೀರು ನಿಲುಗಡೆಗೆ ಒತ್ತಾಯಿಸಲಾಗುವುದು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.
ಜೈಲ್ ಭರೋ ಚಳುವಳಿಗೂ ರೈತರು ಸಿದ್ದರಾಗಬೇಕು. ಎಸ್ ಎಂ ಕೃಷ್ಣ, ದೇವೇಗೌಡರ ನೇತೃತ್ವದಲ್ಲಿ ಪ್ರಧಾನಿ ಬಳಿ ನಿಯೋಗ ತೆರಳಿ ವಸ್ತುಸ್ಥಿತಿಯನ್ನು ವಿವರಿಸಿ ನೀರು ನಿಲ್ಲಿಸಲು ಒತ್ತಾಯಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಕಾವೇರಿ ವಿವಾದ ಹಿನ್ನಲೆಯಲ್ಲಿ ಚಾಮರಾಜನಗರ ಜಿಲ್ಲೆಯ ವ್ಯಾಪ್ತಿಯಲ್ಲಿರುವ ತಮಿಳುನಾಡು ಗಡಿಗಳಲ್ಲಿ ಅಂತರರಾಜ್ಯ ವಾಹನ ಸಂಚಾರವನ್ನು ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಗಿತಗೊಳಿಸಲಾಗಿದೆ.
ಕಾವೇರಿ ಹೋರಾಟದ ಬಿಸಿ ಚನ್ನಪಟ್ಟಣದ ಶಾಸಕ ಮತ್ತು ಸಚಿವ ಸಿ ಪಿ ಯೋಗೀಶ್ವರ್ ಅವರಿಗೂ ತಟ್ಟಿದೆ. ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ಯೋಗೀಶ್ವರ್ ಮನೆ ಮುಂದೆ ಭಾರೀ ಪ್ರತಿಭಟನೆ ನಡೆಸಿದ್ದಾರೆ. ಬಳಿಕ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ.












Click it and Unblock the Notifications