ಕನ್ನಡದ ಬ್ರಾಹ್ಮಣ ವರರಿಗೆ ಕಾಶ್ಮೀರದ ವಧುಗಳು

ಕಾಶ್ಮೀರ ಮತ್ತು ಉತ್ತರಭಾರತದ ಕಡೆಯ ಬ್ರಾಹ್ಮಣ ವಧುಗಳೊಂದಿಗೆ ವೈವಾಹಿಕ ಸಂಬಂಧ ಏರ್ಪಡಿಸುವ ನಿಟ್ಟಿನಲ್ಲಿ ವೇದಿಕೆ ಹೊಸ ಚಟುವಟಿಕೆ ಆರಂಭಿಸಿದೆ. ಈ ಬಗ್ಗೆ ಚರ್ಚಿಸಲು ಸಮಾಲೋಚನಾ ಸಭೆ ಇಲ್ಲಿನ ಚನ್ನಕೇಶವ ದೇವಾಲಯದಲ್ಲಿ ಭಾನುವಾರ (ಸೆ 30) ನಡೆದಿತ್ತು.
ವೇದಿಕೆಯ ಪ್ರಯತ್ನಕ್ಕೆ ಉತ್ತರಭಾರತದ ಹಿಂದೂ ಆಶ್ರಮಗಳೂ ಸ್ಪಂದಿಸಿವೆ. ವಾರಣಾಸಿ, ದೆಹಲಿ, ಡೆಹ್ರಾಡೂನ್, ಹರಿದ್ವಾರಗಳಲ್ಲಿನ ಆಶ್ರಮದ ಪ್ರತಿನಿಧಿಗಳು ಇದೇ ಅಕ್ಟೋಬರ್ ಆರರ ನಂತರ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ.
ಈ ಭಾಗದ ಬಹಳಷ್ಟು ಬ್ರಾಹ್ಮಣ ಕುಟುಂಬದವರ ಜೊತೆ ಸಂಪರ್ಕ ಸಾಧಿಸಿ ಸಮಾಲೋಚನೆ ನಡೆಸಲಾಗಿದೆ. ವರದಕ್ಷಿಣೆ ಅಧಿಕವಿರುವ ಕಾರಣ ನಮ್ಮ ಕಡೆಯವರ ಜೊತೆ ವಿವಾಹ ಮಾಡಿಕೊಳ್ಳಲು ಆಸಕ್ತಿ ತೋರಿಸುತ್ತಿದ್ದಾರೆ.
ಹರಿದ್ವಾರ ಮತ್ತು ಡೆಹ್ರಾಡೂನ್ ನಲ್ಲಿರುವ ಕೆಲವು ಹಿಂದೂ ಆಶ್ರಮಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ತುಂಬಾ ದೂರವಿರುವ ಕಾರಣದಿಂದ ಹೆಣ್ಣು ಮಕ್ಕಳನನ್ನು ಮದುವೆ ಮಾಡಿ ಕೊಡುವ ಬಗ್ಗೆ ಕೆಲವು ಕುಟುಂಬಗಳಲ್ಲಿ ಅಸುರಕ್ಷಿತೆ ಕಾಡುತ್ತಿದೆ.
ಇವರ ಆತಂಕವನ್ನು ನಿವಾರಿಸುವ ಕಾರ್ಯ ನಡೆಯುತ್ತಿದೆ ಎಂದು ವೇದಿಕೆಯ ಸಂಚಾಲಕ ಸತ್ಯನಾರಾಯಣ ಹೇಳಿದ್ದಾರೆ.
ಮುಂದಿನ ಒಂದು ವರ್ಷದಲ್ಲಿ ನೂರಾರು ವಿವಾಹಗಳನ್ನು ಮಾಡುವ ಯೋಜನೆಯಿದೆ. ನವೆಂಬರ್ ನಾಲ್ಕರಂದು ಗಾಜಿಯಾಬಾದ್ ನಲ್ಲಿ ನಡೆಯಲಿರುವ ಬ್ರಾಹ್ಮಣ ವಧೂವರರ ಸಮಾವೇಶಕ್ಕೆ ಕಶ್ಯಪ ವೇದಿಕೆಯಲ್ಲಿ ನೋಂದಣಿ ಮಾಡಿಕೊಂಡಿರುವ ಕೆಲವು ಯುವಕರನ್ನು ಸಮಾವೇಶದಲ್ಲಿ ಭಾಗವಹಿಸುವಂತೆ ಆಹ್ವಾನಿಸಲಾಗಿದೆ ಎಂದು ಸತ್ಯನಾರಾಯಣ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಕಳೆದ ಆಗಸ್ಟ್ 18 ರಂದು ಸುಳ್ಯದಲ್ಲಿ ನಡೆದ ಸಭೆಯಲ್ಲಿ ನೂರಾರು ಮಂದಿ ಯುವಕರು ಭಾಗವಹಿಸಿ ಕಶ್ಯಪ ಯುವ ಬ್ರಾಹ್ಮಣ ವೇದಿಕೆಯಡಿ ನೊಂದಣಿ ಮಾಡಿಸಿಕೊಂಡಿದ್ದರು.












Click it and Unblock the Notifications