ಈಶ್ವರಪ್ಪ ಅಳಿಯನ ವಿರುದ್ಧ ಲೋಕಾಯುಕ್ತ ತನಿಖೆ

ದೇವನಹಳ್ಳಿಯಲ್ಲಿ ಉಪ ವಿಭಾಗಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಶಿವಪ್ರಸಾದ್ ಅವರು 152 ಎಕರೆ ಭೂಮಿಯನ್ನು ಮೂಲ ಹೆಸರಿನ ಬದಲಿಗೆ ಬೇರೆಯವರ ಹೆಸರಿಗೆ ಖಾತೆ ವರ್ಗಾವಣೆ ಮಾಡಿಕೊಟ್ಟಿರುವ ಆರೋಪ ಹೊತ್ತಿದ್ದಾರೆ. ಶಿವಪ್ರಸಾದ್ ಸೇರಿದಂತೆ ಒಟ್ಟು 15 ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ವರದಿ ನೀಡುವಂತೆ ಪೊಲೀಸರಿಗೆ ಗ್ರಾಮಾಂತರ ಜಿಲ್ಲಾ ಲೋಕಾಯುಕ್ತ ವಿಶೇಷ ನ್ಯಾಯಾಲಯ ಆದೇಶಿಸಿದೆ.
ತೆರೆಸಮ್ಮ ಎನ್ನುವವರ ಹೆಸರಿನಲ್ಲಿದ್ದ ಭೂಮಿಯನ್ನು ಶಿವಪ್ರಸಾದ್ ಅವರು ನರಸಮ್ಮ ಅವರ ಹೆಸರಿನ ಖಾತೆಗೆ ವರ್ಗಾವಣೆ ಮಾಡಿದ್ದರು. ಇಂತಹ ಅಕ್ರಮಗಳು ದೇವನಹಳ್ಳಿಯಲ್ಲಿ ಬಹಳಷ್ಟು ನಡೆದಿವೆ. ತಹಶೀಲ್ದಾರ್‌ಗಳು, ಕಂದಾಯ ಅಧಿಕಾರಿಗಳ ವಿರುದ್ಧ ತೆರೆಸಮ್ಮ ಮತ್ತಿತ್ತರರು ಹೈಕೋರ್ಟಿನಲಿ ದಾವೆ ಹೂಡಿದ್ದರು. ಉಪ ವಿಭಾಗಾಧಿಕಾರಿ ಆದೇಶ ರದ್ದು ಪಡಿಸಿ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಮುಂದಿನ ವಿಚಾರಣೆ ನಡೆಸುವಂತೆ ಹೈಕೋರ್ಟ್ ಆದೇಶಿಸಿತ್ತು.
ತೆರೆಸಮ್ಮ ಹಾಗೂ ಇತರ ಕೆಲವರು ತಮ್ಮ ಹೆಸರಿನ ಭೂಮಿಯನ್ನು ಬೇರೆಯವರಿಗೆ ಖಾತಾ ವರ್ಗಾವಣೆ ಮಾಡಿಕೊಟ್ಟಿದ್ದಾರೆ ಎಂದು ಆಪಾದಿಸಿ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ದೂರನ್ನು ಸ್ವೀಕರಿಸಿ, ವಿಚಾರಣೆ ನಡೆಸಿದ ಲೋಕಾಯುಕ್ತ ಕೋರ್ಟ್ ಮೇಲ್ಕಂಡ ಆದೇಶ ನೀಡಿದ್ದು, ನ.30ರೊಳಗೆ ಅಂತಿಮ ವರದಿ ನೀಡುವಂತೆ ಆದೇಶಿಸಿದೆ.
ಈ ಭಾರಿ ಹಗರಣದಲ್ಲಿ ಶಿವಪ್ರಸಾದ್ ಅವರಲ್ಲದೇ ದೇವನಹಳ್ಳಿ ತಹಶೀಲ್ದಾರ್ ನಾಗರಾಜ್ ಸೇರಿದಂತೆ 15 ಮಂದಿ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಲೋಕಾಯುಕ್ತ ಕಾಯ್ದೆ 156 3ರ ಅಡಿ ತನಿಖೆ ನಡೆಸಿ ನವೆಂಬರ್ 3ರೊಳಗೆ ವರದಿ ನೀಡುವಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ. ಸುಧೀಂದ್ರ ರಾವ್ ಆದೇಶಿದ್ದಾರೆ.
ನ್ಯಾಯಾಲಯ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿಗೆ ತನಿಖೆಗೆ ಆದೇಶಿಸಿದೆ. ದೇವನಹಳ್ಳಿಯಲ್ಲಿ ಭೂಮಿಗೆ ಚಿನ್ನದ ಬೆಲೆಯಿದ್ದು, ಪ್ರತಿಯೊಂದು ಎಕರೆ ಏನಿಲ್ಲವೆಂದರೂ ಕನಿಷ್ಠ ಮೂರು ಕೋಟಿ ರೂಪಾಯಿಗೂ ಹೆಚ್ಚು ಬೆಲೆ ಬಾಳುತ್ತದೆ. ಈ ಕುರಿತ ಖಾತೆಯನ್ನು ಬದಲಾವಣೆ ಮಾಡುವಂತೆ ಇತ್ತೀಚೆಗೆ ಹೈಕೋರ್ಟ್ ಆದೇಶಿಸಿತ್ತು.
ತೆರೆಸಮ್ಮ ಎನ್ನುವವರ ಹೆಸರಿನಲ್ಲಿದ್ದ ಭೂಮಿಯನ್ನು ಶಿವಪ್ರಸಾದ್ ಅವರು ನರಸಮ್ಮ ಅವರ ಹೆಸರಿನ ಖಾತೆಗೆ ವರ್ಗಾವಣೆ ಮಾಡಿದ್ದರು. ಇಂತಹ ಅಕ್ರಮಗಳು ದೇವನಹಳ್ಳಿಯಲ್ಲಿ ಬಹಳಷ್ಟು ನಡೆದಿವೆ.












Click it and Unblock the Notifications