ಕಾಂಗ್ರೆಸ್ ಕಾರ್ಯವೈಖರಿ ಹೊಗಳಿದ ಯಡಿಯೂರಪ್ಪ

ಈಶ್ವರಪ್ಪ ವಿರುದ್ಧ ಮಾತಿನ ಚಾಟಿ : ಈಶ್ವರಪ್ಪ ಅವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಬಿ ಫಾರಂ ಪಡೆಯಬೇಕೆನ್ನುವವರು ತಮ್ಮ ಎದುರಿಗೆ ಕ್ಯೂ ನಿಲ್ಲಬೇಕು ಎಂದು ಧಮ್ಕಿ ಹಾಕಿ ಹೇಳುತ್ತಿದ್ದಾರೆ. ಆದರೆ, ತಮ್ಮ ಬೆಂಬಲಿಗರಾದರೂ ಬಿ ಫಾರಂಗಾಗಿ ಕ್ಯೂ ನಿಲ್ಲುವುದಿಲ್ಲ. ಅಲ್ಲದೆ, ಜೈಲಿನಲ್ಲಿರುವ ಜನಾರ್ದನ ರೆಡ್ಡಿ ಮತ್ತು ಜೈಲಿನಲ್ಲಿದ್ದ ನನ್ನನ್ನು ಹೋಲಿಸಿ, ಅಯ್ಯೋ ಪಾಪ ಎನ್ನುವಂತೆ ಮಾತನಾಡುತ್ತಿದ್ದಾರೆ. ಆದರೆ, ಇವೆಲ್ಲಕ್ಕೂ ಕೆಲವೇ ತಿಂಗಳಲ್ಲಿ ಉತ್ತರ ದೊರೆಯಲಿದೆ ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಯಡಿಯೂರಪ್ಪ ಹೇಳಿದ್ದಾರೆ.
ಮುಂದಿನ ನಡೆ ಏನು? : ಈ ಪ್ರಶ್ನೆಗೆ ಯಡಿಯೂರಪ್ಪನವರಿಂದ ಯಾವುದೇ ಸ್ಪಷ್ಟ ಉತ್ತರ ಬರಲಿಲ್ಲ. ಆದರೆ, ಅವರು ಅಕ್ಟೋಬರ್ 5ರಿಂದ ಉತ್ತರ ಕರ್ನಾಟಕ ಪ್ರವಾಸ ಕೈಗೊಳ್ಳಲಿದ್ದು, ಅದಕ್ಕೂ ಮೊದಲು ಅವರು ಬೆಂಬಲಿಗರು, ಹಿತೈಶಿಗಳು ತಾವು ಮುಂದೆ ಏನು ಮಾಡಬೇಕು? ರಾಜಕೀಯದಲ್ಲಿ ಮುಂದುವರಿಯಬೇಕಾ, ರಾಜಕೀಯದಿಂದಲೇ ರಿಟೈರ್ ಆಗಬೇಕಾ ಎಂದು ಬರೆದು ತಿಳಿಸಬೇಕು ಎಂದು ಕೋರಿದ್ದಾರೆ. ಅವರು ಮುಂದೆ ಏನು ನಿರ್ಧಾರ ತೆಗೆದುಕೊಳ್ಳಬೇಕು ಎಂಬ ನಿರ್ಧಾರವನ್ನು ಅವರ ಬೆಂಬಲಿಗರಿಗೇ ಬಿಟ್ಟಿದ್ದಾರೆ.
ಹರ್ಯಾಣಾದಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ತಾವು ಭಾಗವಹಿಸದಿರುವುದರ ಬಗ್ಗೆ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದು ಸ್ಪಷ್ಟೀಕರಣ ನೀಡುವುದಾಗಿ ಯಡಿಯೂರಪ್ಪ ತಿಳಿಸಿದರು. ತಮ್ಮನ್ನೇ ರಾಜ್ಯಾಧ್ಯಕ್ಷರನ್ನಾಗಿ ಮಾಡಿ ಎಂದು ಕೆಲ ಬೆಂಬಲಿಗರು ಪದೇಪದೇ ಹೈಕಮಾಂಡನ್ನು ಒತ್ತಾಯಿಸುತ್ತಿದ್ದಾರೆ. ಇದು ನನಗೆ ಅವರು ಮಾಡುತ್ತಿರುವ ಅವಮಾನ. ಇದರಿಂದ ಜನರು ನನ್ನ ಬಗ್ಗೆ ಅಪಾರ್ಥ ಮಾಡಿಕೊಂಡಂತಾಗುತ್ತದೆ. ನಾನು ರಾಜ್ಯಾಧ್ಯಕ್ಷ ಆಗುವ ಕಾಲ ಎಂದೋ ಮುಗಿದಿದೆ. ಗಡ್ಕರಿ ಅವರು ನನ್ನನ್ನು ಒತ್ತಾಯಸಿದರೂ ನಾನು ರಾಜ್ಯಾಧ್ಯಕ್ಷ ಆಗುವುದಿಲ್ಲ ಎಂದು ಅವರು ಸ್ಪಷ್ಟವಾಗಿ ಸಂದೇಶ ರವಾನಿಸಿದರು.












Click it and Unblock the Notifications