ಅಂಕೋಲ ಬಳಿ ಭೀಕರ ಅಪಘಾತ, ಐವರು ಸಾವು

ಕಾರವಾರ ಕಡೆಯಿಂದ ಬರುತ್ತಿದ್ದ ಲಾರಿ ಹಾಗೂ ಕುಮಟಾ ಕಡೆಯಿಂದ ಬರುತ್ತಿದ್ದ ಮಾರುತಿ ಆಮ್ನಿ ಗೆ ಅಪ್ಪಳಿಸಿದ ಪರಿಣಾಮ ಆಮ್ನಿಯಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಇನ್ನೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 17 ರಲ್ಲಿ ನಡೆದ ಈ ಭೀಕರ ಅಪಘಾತದಲ್ಲಿ ಮೃತರಾದವರೆಲ್ಲರೂ ಕುಮಟಾ ಬಳಿಯ ಸುವರ್ಣಗದ್ದೆ ಗ್ರಾಮದವರು ಎಂದು ತಿಳಿದುಬಂದಿದೆ. ಮೃತರ ಪೈಕಿ ಇಬ್ಬರು ಮಹಿಳೆಯರು ಮೂವರು ಪುರುಷರು ಇದ್ದಾರೆ. ಗುರುತು ಪರಿಚಯ ಇನ್ನೂ ಲಭ್ಯವಾಗಿಲ್ಲ.
ಲಾರಿಯಲ್ಲಿ ಎಷ್ಟು ಮಂದಿ ಇದ್ದರು ಎಂಬುದು ತಿಳಿದಿಲ್ಲವಾದರೂ ಇಬ್ಬರು ಗಾಯಾಳುಗಳನ್ನು ಅಂಕೋಲದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.












Click it and Unblock the Notifications