ಪತ್ನಿಯ ಬ್ಲೂಫಿಲಂ:ಬೆಂಗ್ಳೂರಿನಲ್ಲಿ ಯುವ IRS ಅಧಿಕಾರಿ ಸೆರೆ

ಏನಾಯಿತೆಂದರೆ ಸದರಿ ಯುವ IRS ಅಧಿಕಾರಿ ತನ್ನ ಪತ್ನಿಯ ಅಶ್ಲೀಲ ವಿಡಿಯೋ ತೆಗೆದು, ಆ ಮೂಲಕ ವರದಕ್ಷಿಣೆಗಾಗಿ ಆಕೆಯನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದ ಎಂದು ಆರೋಪಿಸಿ, ನಾಗಪುರದ ಪೊಲೀಸರು ನಗರದಲ್ಲಿ ನಿನ್ನೆ ಆತನನ್ನು ಬಂಧಿಸಿದ್ದಾರೆ. ಅಮೃತಹಳ್ಳಿಯಲ್ಲಿ ತನ್ನ ಸೋದರಿ ರೂಪ ಹರೀಶ್ ಅವರ ಮನೆಯಲ್ಲಿ ವಾಸವಾಗಿದ್ದ ಸದರಿ ಅಧಿಕಾರಿಯನ್ನು ಸ್ಥಳೀಯ ಪೊಲೀಸರ ನೆರವಿನಿಂದ ಬಂಧಿಸಲಾಗಿದೆ.
ಬಹುಪತ್ನೀವಲ್ಲಭ: ಭಾರತೀಯ ಕಂದಾಯ ಸೇವೆಯ ಪ್ರೊಬೆಷನರಿ ಅಧಿಕಾರಿ, ಬೆಂಗಳೂರಿನಲ್ಲಿ ವಾಸವಾಗಿದ್ದ ನಿಶಾವಂತ್ ದೇವರಾಜನ್ ಕುಲುಲತಿಲ್ ಬಂಧಿತ ಆರೋಪಿ. ಈತ ಮೂಲತಃ ಕೇರಳದವ. ಆರೋಪಿಯ ಪತ್ನಿಯು ನಾಗಪುರದವರಾಗಿದ್ದು, ಅಲ್ಲಿನ ಆದಾಯ ತೆರಿಗೆ ಇಲಾಖೆಯಲ್ಲಿ ಅಧಿಕಾರಿಯಾಗಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ ಬ್ಯಾಚ್ ಮೇಟ್ಸ್ ಆಗಿದ್ದಾಗ ಕಳೆದ ಫೆಬ್ರವರಿಯಲ್ಲಿ ಇಬ್ಬರೂ ಲವ್ ಮಾಡಿ ಮದ್ವೆಯಾಗಿದ್ದರು.
ಈತ ಬಹುಪತ್ನೀವಲ್ಲಭನಾಗಿದ್ದು, ಈಗಾಗಲೇ ನಾಲ್ಕು ಮದುವೆಗಳಾಗಿದ್ದಾನೆ ಎನ್ನಲಾಗಿದೆ. ನಿಶಾವಂತ್ ಪತ್ನಿ ಪೋನುಕವಾಡಿ ಅವರು ಮೂಲತಃ ನೇಪಾಳದವರು.
'ನಿಶಾವಂತ ನಾಗಪುರದಲ್ಲಿರುವ ಹಾಸ್ಟೇಲ್ ರೂಮ್‌ನಲ್ಲಿ ಸೆಪ್ಟೆಂಬರ್ 3ರಂದು ನನಗೆ ಮತ್ತುಬರಿಸುವ ಪಾನೀಯ ನೀಡಿ, ಪ್ರಜ್ಞೆ ತಪ್ಪಿದಾಗ ನನ್ನ ಬೆತ್ತಲೆ ದೃಶ್ಯವನ್ನು ವಿಡಿಯೋ ಚಿತ್ರೀಕರಣ ಮಾಡಿದ್ದಾನೆ' ಎಂದು ನಿಶಾವಂತ್ ಪತ್ನಿ ದೂರು ನೀಡಿದ್ದಾರೆ. ನಿಶಾವಂತನ ತಾಯಿ ಮತ್ತು ಸಹೋದರಿಯ ವಿರುದ್ಧವೂ ಕೌಟುಂಬಿಕ ಹಿಂಸಾಚಾರ, ಲೈಂಗಿಕ ಕಿರುಕುಳ ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಯಡಿ ಕೇಸು ದಾಖಲಿಸಲಾಗಿದೆ.
ಜತೆಗೆ, 10 ಲಕ್ಷ ರೂ. ಹಣ ತಂದು ಕೊಡಬೇಕು. ಇಲ್ಲದಿದ್ದರೆ, ಅಶ್ಲೀಲ ವಿಡಿಯೋ ಚಿತ್ರಗಳನ್ನು ಇಂಟರ್‌ನೆಟ್‌ನಲ್ಲಿ ಹಾಕುವುದಾಗಿ ಬೆದರಿಕೆಯೊಡ್ಡಿದ್ದರು ಎಂದೂ ಆಕೆ ಆರೋಪಿಸಿದ್ದಾರೆ. ವರದಕ್ಷಿಣೆಗಾಗಿ ತನ್ನ ಅತ್ತೆ ಮತ್ತು ನಾದಿನಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಾರೆ ಎಂದು ಸಹ ನಿಶಾವಂತ್ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.
ನಿಶಾವಂತ್ ಕುಲುಲತಿಲ್ ಮತ್ತು ಆತನ ಕುಟುಂಬ ಸದಸ್ಯರನ್ನು ವಶಕ್ಕೆ ತೆಗೆದುಕೊಳ್ಳಲು ನಾಗಪುರದ ಗಿಟ್ಟಿಖಾಂದನ್ ಠಾಣಾ ಪೊಲೀಸರು ಬೆಂಗಳೂರಿಗೆ ಆಗಮಿಸಿದ್ದಾರೆ.












Click it and Unblock the Notifications