• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

60 ಭಾಷೆಗಳಲ್ಲಿ ಮೈಸೂರು ದಸರಾ ವೆಬ್ ತಾಣ

By Mahesh
|

ಮೈಸೂರು, ಸೆ.16: ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್ ಅವರು 'ದಸರಾ ಅಂತರ್ಜಾಲ ತಾಣ' ವನ್ನು ಲೋಕಾರ್ಪಣೆ ಮಾಡಿದ್ದಾರೆ. ಗೂಗಲ್ ಟ್ರಾನ್ಸ್‌ಲೇಟ್ ಮೂಲಕ 60 ಭಾಷೆಗಳಲ್ಲಿ ಈ ವೆಬ್ ತಾಣದ ಶೀರ್ಷಿಕೆಗಳನ್ನು ಓದಬಹುದಾಗಿದೆ. ಆದರೆ, ಪೂರ್ಣ ಲೇಖನಗಳು ಮಾತ್ರ ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ಮಾತ್ರ ಸದ್ಯಕ್ಕೆ ಲಭ್ಯವಿರುತ್ತದೆ.

ಶನಿವಾರ (ಸೆ.15) ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮೈಸೂರು ವೆಬ್ ತಾಣಕ್ಕೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ರಾಮದಾಸ್, 'ದಸರಾ ಉತ್ಸವದ ಪ್ರತಿಯೊಂದು ವಿಷಯವನ್ನೂ ಇಲ್ಲಿ ಪ್ರಕಟಿಸಲಾಗುವುದು ಎಂದರು.

Mysore Dasara Official Website

'ಮೈಸೂರಿನ ಇತಿಹಾಸ, ಪರಂಪರೆ, ಪಾರಂಪರಿಕ ಕಟ್ಟಡಗಳ ವಿವರಗಳು, ದಸರಾ ಹಬ್ಬದ ಇತಿಹಾಸ, ಈ ವರ್ಷದ ದಸರಾ ಉತ್ಸವದ ಸಾಂಸ್ಕೃತಿಕ, ಸಾಹಿತ್ಯಕ ಮತ್ತು ಕ್ರೀಡಾ ಚಟುವಟಿಕೆಗಳ ಕುರಿತು ಮಾಹಿತಿಗಳಿವೆ. ಜೊತೆಗೆ ಸ್ಥಳೀಯ ಪ್ರವಾಸಿ ತಾಣಗಳು, ಹೋಟೆಲ್, ಬಸ್, ರೈಲು ಸೇವೆಗಳ ವಿವರಗಳಿವೆ. ತುರ್ತು ಸೇವಾ ಸಹಾಯವಾಣಿ ಕೂಡಾ ಇದೆ' ಎಂದು ಸಚಿವ ರಾಮದಾಸ್ ಹೇಳಿದರು.

ವೆಬ್ ಚಾಟ್ ಮತ್ತು ಇ-ಮೇಲ್ ವ್ಯವಸ್ಥೆಗಳನ್ನು ಅಳವಡಿಸಲಾಗುವುದು. ಕಳೆದ ವರ್ಷದ ವೆಬ್ ತಾಣದಲ್ಲಿದ್ದ ಸೌಲಭ್ಯಗಳನ್ನು ಸಾಕಷ್ಟು ಸುಧಾರಿಸಲಾಗಿದೆ. ಅಂತರ್ಜಾಲದ ಮೂಲಕ ಡೆಸ್ಕ್ ಟಾಪ್ ಅಲ್ಲದೆ ಐಪಾಡ್, ಸ್ಮಾರ್ಟ್ ಫೋನ್ ಗಳಲ್ಲೂ ವೆಬ್‌ಸೈಟ್ ಆಕರ್ಷಕ ಫೋಟೋ ಗ್ಯಾಲರಿ ಮತ್ತು ವಿಡಿಯೊ ಗ್ಯಾಲರಿ ಜೊತೆಗೆ ದಸರಾ ಸಂಬಂಧಿತ ಮಾಧ್ಯಮ ವರದಿಗಳು ಮತ್ತು ದೃಶ್ಯ ತುಣುಕುಗಳನ್ನು ಇದರಲ್ಲಿ ಕಾಣಬಹುದಾಗಿದೆ.

ದಸರಾ ಉತ್ಸವಕ್ಕೆ ಬರುವ ಪ್ರವಾಸಿಗರು ಮೊದಲೇ ಎಲ್ಲ ಮಾಹಿತಿಗಳನ್ನು ಈ ತಾಣದ ಮೂಲಕ ಸಂಗ್ರಹಿಸಿಕೊಳ್ಳಬಹುದು. ಜೊತೆಗೆ ವಿಚಾರಣೆ ಮತ್ತು ಪ್ರಶ್ನೋತ್ತರ ಸೌಲಭ್ಯವೂ ಇರುವುದರಿಂದ ಹೆಚ್ಚಿನ ವಿವರಗಳನ್ನು ಪಡೆಯಲು ಸಾಧ್ಯವಿದೆ. ದೇಶ, ವಿದೇಶಗಳ ಎಲ್ಲ ಭಾಷಿಕರಿಗೂ ಅನುಕೂಲವಾಗುವಂತೆ 60ಕ್ಕೂ ಹೆಚ್ಚು ಭಾಷೆಗಳಲ್ಲಿ ಇದರ ಮಾಹಿತಿ ಅವಲೋಕಿಸಬಹುದು ಎಂದು ತಿಳಿಸಿದರು.
ವೆಬ್ ತಾಣದ ವಿಳಾಸ: www.mysoredasara.gov.in

ದಸರೆಗೆ ವಿಮಾನ?: ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಕಿಂಗ್ ಫಿಷರ್ ಸಂಸ್ಥೆ ಕಾಲ್ತೆಗೆದ ಮೇಲೆ ಸ್ಪೈಸ್ ಜೆಟ್ ಸೇರಿದಂತೆ ಕೆಲ ಸಂಸ್ಥೆಗಳು ವಿಮಾನ ಹಾರಾಟದಲ್ಲಿ ಆಸಕ್ತಿ ತೋರಿಸಿತ್ತು. ಆದರೆ, ಈ ಬಾರಿ ದಸರಾ ಉತ್ಸವದಲ್ಲಿ ಭಾರತೀಯ ವಾಯುಪಡೆಯ ಸಹಯೋಗದೊಂದಿಗೆ ವಿಮಾನಯಾನ ಆಯೋಜಿಸಲು ಯೋಜಿಸಲಾಗಿದೆ. ನಗರ ವೀಕ್ಷಣೆಗೆ ಮಾತ್ರ ಈ ವಿಮಾನಯಾನ ಸೀಮಿತಗೊಳ್ಳಲಿದೆ.

'ಒಂದು ವಿಮಾನದಲ್ಲಿ ಪೈಲಟ್ ಸೇರಿದಂತೆ ಮೂವರಿಗೆ ಅವಕಾಶ ಇರುತ್ತದೆ. ತಲಾ ರು 2000 ಶುಲ್ಕ ಪಡೆಯಲಾಗುವುದು. ಇನ್ನೊಂದು ವಿಮಾನದಲ್ಲಿ ಪೈಲಟ್ ಜೊತೆಗೆ ಮೂವರಿಗೆ ಅವಕಾಶವಿದ್ದು, ತಲಾ ರು 2,500 ಶುಲ್ಕ ಪಡೆಯಲಾಗುವುದು. 15 ನಿಮಿಷಗಳ ಅವಧಿಯ ಹಾರಾಟ ನಡೆಸಿ ಆಗಸದಿಂದ ಮೈಸೂರಿನ ಕೆಲವು ಪ್ರದೇಶಗಳ ಪಕ್ಷಿನೋಟ ಮಾಡಲಾಗುವುದು' ಎಂದು ಹೇಳಿದರು.

'ದಸರಾ ಉತ್ಸವಕ್ಕೆ ಭಾರತದ ಸೇನಾಪಡೆಯ ಮುಖ್ಯಸ್ಥ ಜನರಲ್ ವಿಕ್ರಂ ಸಿಂಗ್, ಲೆಫ್ಟಿನೆಂಟ್ ಜನರಲ್ ರಮೇಶ್ ಹಲಗಲಿ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಸೇನಾ ಪ್ರದರ್ಶನ, ಸೇನಾ ಸಂಗೀತ ಬ್ಯಾಂಡ್ ಪ್ರದರ್ಶನ ನಡೆಯುವುದು' ಎಂದು ರಾಮದಾಸ್ ಹೇಳಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಮೈಸೂರು ದಸರಾ ಸುದ್ದಿಗಳುView All

English summary
Now Mysore Dasara official Website is powered with Google Translate which enable viewers to read the content in 60 languages worldwide. Mysore district in charge minister SA Ramdas launched the new website which also as previous year Dasara Festival celebration memories

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more