ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನಕ್ಷೇತ್ರ FDI: ಕಿಂಗ್ ಮಲ್ಯ ಆನಂದವೋ ಆನಂದ

By Srinath
|
Google Oneindia Kannada News

india-govt-allows-fdi-aviation-kingfisher-mallya-happy
ಮಂಗಳೂರು, ಸೆ.15: ವಿಮಾನಯಾನ ಕ್ಷೇತ್ರದಲ್ಲಿ ನೇರ FDIಗೆ ಅವಕಾಶ ಕಲ್ಪಿಸಿರುವುದರಿಂದ 'ಕಿಂಗ್' ಮಲ್ಯ ಆನಂದತುಂದಿಲಿತರಾಗಿದ್ದಾರೆ. ಆ ಕುಕ್ಕೆ ಸುಬ್ರಮಣ್ಯ ಸ್ವಾಮಿಗೆ ಚಿನ್ನದ ಬಾಗಿಲು ಮಾಡಿಸಿದ್ದಕ್ಕೂ ಆ ಭಗವಂತ ನನ್ನತ್ತ ಕಣ್ಣುಬಿಟ್ಟ ಎಂದು ಆರ್ಥಿಕ ಸಂಕಷ್ಟದಲ್ಲಿ ಮುಳುಗಿಹೋಗಿರುವ ಕಿಂಗ್ ಫಿಶರ್ ವಿಮಾನಯಾನ ಸಂಸ್ಥೆಯ ಒಡೆಯ ವಿಜಯ್ ಮಲ್ಯ ಅವರು ಗಾಳಿಯಲ್ಲಿ ತೇಲಿ ಹಗುರವಾಗಿದ್ದಾರೆ.

ನಿನ್ನೆ ಭಾರತ ಸರ್ಕಾರವು ದೇಶೀಯ ವಿಮಾನಯಾನ ಕ್ಷೇತ್ರದಲ್ಲಿ ಶೇ. 49ರಷ್ಟು ಪ್ರಮಾಣದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸುವುದಕ್ಕೆ ಅಂಕಿತ ಹಾಕಿದ ಸುದ್ದಿ ಹೊರಬೀಳುತ್ತಿದ್ದಂತೆ ತಮ್ಮ ಸಾಲದ ಹೊರೆಯನ್ನು ನೆನಪಿಸಿಕೊಂಡು ವಿಜಯ್ ಮಲ್ಯ ಗಾಳಿಯಲ್ಲಿ ತೇಲಿದ್ದಾರೆ. ಆದರೆ ವಿದೇಶೀ ಕಂಪನಿಗಳು ಸಾಲದ ಸುಳಿಯಲ್ಲಿರುವ ಭಾರತೀಯ ಕಂಪನಿಗಳಿಗೆ ಆಧಾರವಾಗುತ್ತವಾ ಎಂಬುದು ಬಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಇದರಿಂದಾಗಿ ಸಾವಿರಾರು ಕೋಟಿ ರೂ. ನಷ್ಟದಲ್ಲಿರುವ ($1.4 billion) ವಿಜಯ್ ಮಲ್ಯರ ಕಿಂಗ್‌ಫಿಶರ್‌ ಏರ್‌ಲೈನ್ಸ್‌ ಸೇರಿದಂತೆ ಹಲವು ವಿಮಾನಯಾನ ಕಂಪನಿಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ಸಿಗಲಿದೆ. ಪ್ರಸಕ್ತ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಮಾನಯಾನ ಕಂಪನಿಗಳ ಪೈಕಿ ಇಂಡಿಗೋ ಹೊರತುಪಡಿಸಿ ಮತ್ತೆಲ್ಲ ಕಂಪನಿಗಳು ಮಾರ್ಚ್‌ 31ಕ್ಕೆ ಮುಕ್ತಾಯಗೊಂಡ ಹಣಕಾಸು ವರ್ಷದಲ್ಲಿ ನಷ್ಟದಲ್ಲಿವೆ ಎಂಬುದು ಗಮನಾರ್ಹ.

ಮಾಧ್ಯಮ ವಲಯದಲ್ಲೂ FDI: ವಿದ್ಯುನ್ಮಾನ ಮಾಧ್ಯಮ ಮತ್ತು ಎಫ್ಎಂ ಹೊರತುಪಡಿಸಿ ಉಳಿದ ಮಾಧ್ಯಮ ವಲಯಗಳಲ್ಲಿ ಶೇ. 74ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗಗೂ ಕೇಂದ್ರ ಸಂಪುಟ ನಿನ್ನೆ ಅನುಮೋದನೆ ನೀಡಿದೆ.

English summary
As Prime Minister Manmohan Singh's government Eased FDI rules to help attract funds for aviation sector Kingfisher Vijay Mallya who is in distress felt very happy at the decision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X