ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರು ಪೊಲೀಸ್ ಆಯುಕ್ತರಾಗಿ ಮನೀಷ್

By Mahesh
|
Google Oneindia Kannada News

Seemanth, Karbekar
ಮಂಗಳೂರು, ಸೆ.14: ಮತ್ತೊಮ್ಮೆ ಜಗದೀಶ್ ಶೆಟ್ಟರ್ ಸರ್ಕಾರ ಐಪಿಎಸ್ ವರ್ಗಾವಣೆಗೆ ಕೈ ಹಾಕಿದೆ. ಮಂಗಳೂರು ಪೊಲೀಸ್ ಕಮಿಷನರ್ ಸೀಮಂತ್‌ಕುಮಾರ್ ಸಿಂಗ್‌ಗೆ ವರ್ಗಾವಣೆಯಾಗಿದೆ. ಸೀಮಂತ್ ಅವರ ಸ್ಥಾನಕ್ಕೆ ಬೆಂಗಳೂರು ನಾಗರಿಕ ಹಕ್ಕು ನಿರ್ದೇಶನಾಲಯದ ಡಿಐಜಿ ಮಾನೀಶ್ ಕರ್ಬೇಕರ್ ನೇಮಕ ಗೊಂಡಿದ್ದಾರೆ.

ಮಂಗಳೂರು ಕಮಿಷನರ್ ಆಗಿದ್ದ ಸೀಮಂತ್‌ಕುಮಾರ್ ಸಿಂಗ್ ತರಬೇತಿಗಾಗಿ ಇಂಗ್ಲೆಂಡ್ ಗೆ ತೆರಳಿರುವಾಗಲೇ ವರ್ಗಾ ವಣೆಯ ಆದೇಶ ಹೊರಗೆ ಬಿದ್ದಿದೆ. ಸೀಮಂತ್ ಕುಮಾರ್ ಸಿಂಗ್ ಎರಡು ವರ್ಷಗಳ ಕಾಲ ಕರಾವಳಿಯ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು.

ಪ್ರಸ್ತುತ ಮನೀಷ್ ಅವರು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಐಜಿ ಆಗಿದ್ದು, ಅವರ ಸ್ಥಾನಕ್ಕೆ ಸೀಮಂತ್ ಕುಮಾರ್ ಸಿಂಗ್ ತೆರಳಲಿದ್ದಾರೆ. ಮಹಾರಾಷ್ಟ್ರ ಮೂಲದ ಯುವ ಅಧಿಕಾರಿ ಮನೀಷ್ ಅವರು ಭಾಲ್ಕಿ ತಾಲೂಕಿನ ಹೆಚ್ಚುವರಿ ಎಸ್ಪಿಯಾಗಿ ನಂತರ ಗುಲ್ಬರ್ಗ, ಹಾವೇರಿ ಜಿಲ್ಲೆಗಳಲ್ಲಿ ಎಸ್ಪಿಯಾಗಿ ಸೇವೆ ಸಲ್ಲಿಸಿದ್ದಾರೆ.

ಮೈಸೂರಿನಲ್ಲಿ ಎಸ್ಪಿಯಾಗಿದ್ದ ಮನೀಷ್ ಬಳಿಕ ಡಿಐಜಿ ಆಗಿ ಪದೋನ್ನತಿಗೊಂಡು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ವರ್ಗಾವಣೆಗೊಂಡರು. ಅಲ್ಲದೇ ಕೊಸೊವೊದಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲೂ ಸಹ ಸೇವೆ ಸಲ್ಲಿಸಿದ್ದಾರೆ.

* ಗುಲ್ಬರ್ಗಾ ಪಾಲಿಕೆ ಆಯುಕ್ತ ಹುದ್ದೆಗೆ ಪಲ್ಲವಿ ಆಕೃತಿ
* ಸಕಲೇಶಪುರ ಉಪ ವಿಭಾಗಾಧಿಕಾರಿಯಾಗಿ ಶ್ರೀವಿದ್ಯಾ
* ಮಂಗಳೂರು ಎಸ್ಪಿಯಾಗಿ ಮನೀಷ್ ಕರ್ಬೇಕರ್
* ಬೆಂಗಳೂರು ಸಿಬಿಐ ಸೀಮಂತ್ ಕುಮಾರ್ ಸಿಂಗ್

ಸೀಮಂತ್‌ಕುಮಾರ್ ಸಿಂಗ್ ಸಿಬಿಐಯಲ್ಲಿ ಕಾರ್ಯನಿರ್ವಹಿ ಸಲು ಆಸಕ್ತರಾಗಿದ್ದು, ಅದಕ್ಕಾಗಿ ಬೆಂಗಳೂರಿಗೆ ವರ್ಗಾಯಿಸಲಾಗಿದೆ. ವರ್ಗಾವಣೆಯ ಉದ್ದೇಶದಿಂದ ಅವರು ಬೆಂಗಳೂರಿಗೆ ಹೋಗಿದ್ದಾ ಗಲೇ ಹೋಂ ಸ್ಟೇ ದಾಳಿ ಪ್ರಕರಣ ನಡೆದಿತ್ತು.

ಆದರೆ, ಹೋಂ ಸ್ಟೇ ದಾಳಿಯ ಬಳಿಕ ವರ್ಗಾವಣೆ ಯಾಗಿದ್ದರೆ ಅದು ಶಿಕ್ಷೆಯ ರೂಪ ಪಡೆಯುವ ಸಾಧ್ಯತೆ ಇತ್ತು. ಇದೇ ಕಾರಣದಿಂದ ಆಗ ಆಗಬಹುದಾಗಿದ್ದ ವರ್ಗಾವಣೆಗೆ ತಡೆಯಾಗಿತ್ತು. ಆದರೆ, ಈಗ ತರಬೇತಿಗಾಗಿ ಹೋಗಿರುವ ಸೀಮಂತ್‌ಕುಮಾರ್ ಸಿಂಗ್ ಅಲ್ಲಿಂದಲೇ ವರ್ಗಾವಣೆಯ ಆದೇಶ ಪಡೆದಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

English summary
IPS transfer Karnataka : Seemanth Kumar Singh transfered from post of Mangalore city police commissioner and Manish Karbikar will be taking his place
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X