ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಶವಕೃಪಾದಿಂದ ಬಂದ ಅಪ್ಪ ಮಗಳು, ಎಚ್ಡಿಕೆ

|
Google Oneindia Kannada News

H D Kumaraswamy statement on Ashok and bus strike
ಬೆಂಗಳೂರು, ಸೆ 14: ಬಿಜೆಪಿಯ ಯಾವ ನಾಯಕರಿಗೂ ಜೆಡಿಎಸ್ ಮತ್ತು ದೇವೇಗೌಡ ಕುಟುಂಬದ ಬಗ್ಗೆ ಮಾತನಾಡುವ ನೈತಿಕತೆ ಮತ್ತು ಯೋಗ್ಯತೆ ಇಲ್ಲ. ಕೇಶವಕೃಪಾದಿಂದ ಬಂದ ಅಪ್ಪ ಮಗಳು ಈಗ ಏನಾಗಿದ್ದಾರೆಂದು ಇಡೀ ರಾಜ್ಯದ ಜನತೆಗೆ ತಿಳಿದಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

ಬಿಜೆಪಿಯವರು ಅನ್ನ ಹಾಕಿದ ಮನೆಗೆ ಕನ್ನ ಹಾಕುವವರು. ಅವರಿಂದ ನಾವು ಪಾಠ ಕಲಿಯಬೇಕಾಗಿಲ್ಲ. ಕಾನೂನು, ಸುವ್ಯವಸ್ಥೆ, ಆಡಳಿತ ಯಂತ್ರ ರಾಜ್ಯದಲ್ಲಿ ಕುಸಿದು ಬಿದ್ದಿದೆ. ಮೊದಲು ಅದನ್ನು ಸರಿಪಡಿಸದಿದ್ದರೆ ರಾಜ್ಯದ ಜನತೆಗೆ ಮುಖ ತೋರಿಸುವ ಯೋಗ್ಯತೆ ನಿಮಗಿರುವುದಿಲ್ಲ ಎಂದು ಕುಮಾರಸ್ವಾಮಿ ಸರಕಾರವನ್ನು ಎಚ್ಚರಿಸಿದ್ದಾರೆ.

ಗೃಹ, ಸಾರಿಗೆ ಮಂತ್ರಿ ನಾಲಾಯಕ್: ಸಾರಿಗೆ ಸಂಸ್ಥೆಯ ನೌಕರರು ಮುಷ್ಕರ ನಡೆಸುವುದಾಗಿ ಎಚ್ಚರಿಸಿದ್ದರೂ ಏನೂ ಆಗದು ಎಂದು ಕೈಕೊಟ್ಟಿ ಕುಳಿತಿದ್ದ ಅಶೋಕ್ ಆ ಹುದ್ದೆಗೆ ಯೋಗ್ಯರಾದವರಲ್ಲ. ಸಂಸ್ಥೆಯ ನೌಕರರ ಜೊತೆ ಉಡಾಫೆಯಿಂದ ವರ್ತಿಸಿ ಇಂದು ಸಾರ್ವಜನಿಕರು ಪರದಾಡುವಂತೆ ಮಾಡಿದ್ದಾರೆ.

ಈಶಾನ್ಯ ರಾಜ್ಯದ ಜನರು ಬೆಂಗಳೂರು ಬಿಟ್ಟು ತೊರೆದಾಗ ಅವರನ್ನು ಕರೆದುಕೊಂಡು ಬರಲು ಅಶೋಕ್ ರೈಲ್ವೆ ನಿಲ್ದಾಣಕ್ಕೆ ಹೋದರು.

ಈಗ ನಮ್ಮ ಜನತೆ ಬಸ್ಸಿಲ್ಲದೆ ಪರದಾಡುತ್ತಿದ್ದಾರೆ. ನಮ್ಮವರ ಬಗ್ಗೆ ಮಾನ್ಯ ಸಚಿವರಿಗೆ ಕಾಳಜಿಯಿಲ್ಲ. ಅಸ್ಸಾಮಿಗರಿಗೆ ಬೆಣ್ಣೆ, ಕನ್ನಡಿಗರಿಗೆ ಸುಣ್ಣ ಇದು ಗೃಹ ಸಚಿವರ ಆಡಳಿತ ವೈಖರಿ ಎಂದು ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಜಗದೀಶ್ ಶೆಟ್ಟರ್ ಅವರಿಗೆ ತಾನು ಈ ರಾಜ್ಯದ ಮುಖ್ಯಮಂತ್ರಿ ಎನ್ನುವ ಭಾವನೆ ಇದ್ದರೆ ಮೊದಲು ಸಚಿವ ಅಶೋಕ್ ಅವರನ್ನು ಸಂಪುಟದಿಂದ ವಜಾ ಮಾಡಲಿ. ಸಾರಿಗೆ ಸಂಸ್ಥೆಯ ನೌಕರರ ಸಂಘದ ಮೇಲಿರುವ ಕೇಸ್ ಗಳು ಇತ್ಯರ್ಥವಾದ ನಂತರ ನೌಕರರ ಬೇಡಿಕೆ ಪರಿಶೀಲಿಸೋಣ ಎಂದು ಅಶೋಕ್ ದರ್ಪದ ಮಾತನ್ನಾಡಿದ್ದಾರೆ.

ಅವರ ಮೇಲೂ ಕೇಸ್ ಇದೆ ಅದು ಇತ್ಯರ್ಥವಾಗುವವರೆಗೆ ಅವರೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

20 ವರ್ಷಗಳಿಂದ ಸಂಸ್ಥೆಗೆ ದುಡಿಯುತ್ತಿರುವ ನೌಕರನಿಗೆ ಇಂದಿಗೂ 7500 ಸಾವಿರ ವೇತನ ಬರುತ್ತಿದೆ. ಸಂಸ್ಥೆಯಲ್ಲಿ ದೌರ್ಜನ್ಯ, ಭ್ರಷ್ಟಾಚಾರ ತಾಂಡವಾಡುತ್ತಿದೆ. ಸಾರಿಗೆ ಸಚಿವರಾಗಿರುವ ಅಶೋಕ್ ಅವರಿಗೆ ಇದನ್ನು ಸರಿಪಡಿಸುವ ಬದಲು ಬೇರೆ ಏನು ಘನಂದಾರಿ ಕೆಲಸವಿದೆ ಎಂದು ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

English summary
Home and Transport minister R Ashok is unfit to that department. He should be sacked from that portfolio, former CM H D Kumaraswamy said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X