ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಂಡವಪುರದಲ್ಲಿ ಅನಾಥವಾದ 79 ಎಕರೆ ಭೂಮಿ

By ವರದಿ : ಚಿನಕುರಳಿ ರಮೇಶ್, ಪಾಂಡವಪುರ
|
Google Oneindia Kannada News

Fertile 79 acre land orphoned in Pandavapura, Mandya
ಪಾಂಡವಪುರ ಪಟ್ಟಣಕ್ಕೆ ಹೊಂದಿಕೊಂಡಂತ್ತಿರುವ ಹಿರೋಡೆ ಕೆರೆಯ ಹಿನ್ನೀರಿನ ಸುತ್ತಮುತ್ತಲ ಪ್ರದೇಶದ ಭೂಮಿಯಲ್ಲಿ ಸುಮಾರು 70 ವರ್ಷಗಳಿಂದ ಬೀರಶೆಟ್ಟಹಳ್ಳಿ ಹಾಗೂ ಹೀರೇಮರಳಿ ಗ್ರಾಮದ 80 ಕುಟುಂಬಗಳು ಬೇಸಾಯ ಮಾಡಿಕೊಂಡು ಬರುತ್ತಿದ್ದರು.

ಈ ನಡುವೆ ಸುಪ್ರೀಂಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ಕಂದಾಯ ಇಲಾಖೆಗಳ ಅಧಿಕಾರಿಗಳ ಉಸ್ತುವಾರಿಯಲ್ಲಿ ಸರ್ವೆಕಾರ್ಯ ಕೈಗೊಂಡು ಕೆರೆಯ ಅಂಗಳವನ್ನು ಒತ್ತುವರಿ ಮಾಡಿಕೊಂಡು ಬೇಸಾಯ ಮಾಡುತ್ತಿದ್ದಾರೆ.

79 ಎಕರೆ ಪ್ರದೇಶವನ್ನು ಸರ್ಕಾರ 2 ವರ್ಷಗಳ ಹಿಂದೆ ವಶಕ್ಕೆ ತೆಗೆದುಕೊಂಡಿತ್ತು. ಈ ವಶಪಡಿಸಿಕೊಂಡ ಭೂಮಿಯ ಸುತ್ತ ಯಾರು ಪ್ರವೇಶ ಮಾಡದಂತೆ ಜೆ.ಸಿ.ಬಿ.ಗಳಿಂದ ಕಾಲುವೇ ಮಾದರಿಯ ಚರಂಡಿಗಳನ್ನು ತೋಡಿ ಈ ಕಾರ್ಯಕ್ಕೆ ನೀರಾವರಿ ಇಲಾಖೆ 3 ಲಕ್ಷ ರೂ.ಗಳನ್ನು ವೆಚ್ಚ ಮಾಡಿ, ತಮ್ಮ ಕೆಲಸ ಇಲ್ಲಿಗೆ ಮುಗಿಯಿತು ಎಂಬಂತೆ ಹೊರಟು ಹೋದರು.

ಸರ್ಕಾರ ವಶಪಡಿಸಿಕೊಂಡ ಭೂಮಿಯಲ್ಲಿ 1 ಸಾವಿರಕ್ಕೂ ಹೆಚ್ಚಿನ ತೆಂಗಿನ ಮರ, ಅಡಿಕೆ ತೋಟ ಸೇರಿದಂತೆ ಅನೇಕ ಜಾತಿಯ ಮರಗಳು ಬೆಳೆದು ನಿಂತಿವೆ. ಇವುಗಳನ್ನು ರಕ್ಷಿಸುವ ಮೂಲಕ ಸರ್ಕಾರಕ್ಕೆ ಲಕ್ಷಾಂತರ ರೂ.ಗಳನ್ನು ಕೃಷೀಕರಿಸಬಹುದು. ಆದರೆ ಈ ಬಗ್ಗೆ ಕಂದಾಯ ಇಲಾಖೆಯಾಗಲಿ. ನೀರಾವರಿ ಇಲಾಖೆಯ ಅಧಿಕಾರಿಗಳಾಗಲಿ ಗಮನ ಹರಿಸದಿರುವುದು ಸಾರ್ವಜನಿಕರಲ್ಲಿ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಸರ್ಕಾರ ವಶಕ್ಕೆ ತೆಗೆದುಕೊಂಡ ಭೂಮಿಯ ಪೈಕಿ 20 ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ಬೇರೆ ಯಾವುದೇ ಬೇಸಾಯ ಭೂಮಿ ಇಲ್ಲದ ಕಾರಣ ಬೀದಿ ಪಾಲಾಗುವ ಸ್ಥಿತಿ ನಿರ್ಮಾಣಗೊಂಡು ಕೂಲಿ ಕೆಲಸ ಹುಡುಕುವ ಸ್ಥಿತಿ ಈ ಕುಟುಂಬಗಳಿಗೆ ಒದಗಿ ಬಂದಿತ್ತು.

ಸರ್ಕಾರದ ಆದೇಶವೆಂದು ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗುವ ಅಧಿಕಾರಿ ವರ್ಗ ಭೂಮಿಯಲ್ಲಿ ಇರುವ ಸಂಪತ್ತನ್ನು ರಕ್ಷಣೆ ಮಾಡಿ ಸರ್ಕಾರಕ್ಕೆ ಬರುವ ಆದಾಯವನ್ನು ಭರಿಸಲು ಹಿಂದೇಟು ಹಾಕುತ್ತಿರುವುದಕ್ಕೆ ಈ ಬಗ್ಗೆ ಕ್ಷೇತ್ರದ ಜನ ಪ್ರತಿನಿಧಿಗಳಿಗೆ ಅರಿವಿದ್ದರೂ ಏನೂ ಕಾಣದಂತೆ ಮೌನ ವಹಿಸಿರುವುದು ಏಕೆಂದು ಜನ ಸಾಮಾನ್ಯರು ಮಾತನಾಡಿಕೊಳ್ಳುತ್ತಿದ್ದಾರೆ.

ಸರ್ಕಾರಗಳು ಭೂಮಿಯನ್ನು ವಶಪಡಿಸಿಕೊಂಡರೆ ಸಾಲದು ಈ ಕೆರೆಯ ಅಂಗಳದಲ್ಲಿ ವಶಪಡಿಸಿಕೊಂಡ ಭೂಮಿ ಈಗ ಜಾಡು, ಗಿಡ ಗಂಟೆಗಳು ಬೆಳೆಯುತ್ತಿದ್ದು, ಏನೂ ಪ್ರಯೋಜನವಿಲ್ಲದಂತಾಗುತ್ತಿದೆ.

ಈ ಭೂಮಿಯಲ್ಲಿರುವ ತೆಂಗಿನ ಮರಗಳನ್ನು ವಶಪಡಿಸಿಕೊಂಡ 20 ಪರಿಶಿಷ್ಟ ಜಾತಿಯ ಕುಟುಂಬಗಳವರಿಗೆ ಹರಾಜು ಮಾಡಿ ಸರ್ಕಾರದ ಬೊಕ್ಕಸಕ್ಕೆ ಹಣ ಭರಿಸುವುದರ ಜೊತೆಗೆ ಕೆರೆಯ ಅಂಗಳವನ್ನು ಅಭಿವೃದ್ದಿ ಪಡಿಸುವಲ್ಲಿ ಹಾಗೂ ಬೇಸಾಯಕ್ಕೆ ಭೂಮಿ ಇಲ್ಲದೆ ಕಂಗಾಲಾಗಿರುವ, ಬೀದಿಪಾಲಾಗಿರುವ ಕುಟುಂಬಗಳಿಗೆ ಸುಖ ಜೀವನ ನಡೆಸಲು ಸಂಬಂಧಪಟ್ಟವರು ಅಗತ್ಯ ಕ್ರಮ ಕೈಗೊಳ್ಳುವರೇ ಕಾದು ನೋಡಬೇಕಾಗಿದೆ.

English summary
As per SC orders Karnataka revenue department has recovered 79 acres of encroached land in Pandavapura Taluk, Mandya District. But the department has left the land unprotected, uncultivated, undeveloped.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X