ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಾದ್ಯಂತ ಬಸ್ ನೌಕರರ ಅನಿರ್ದಿಷ್ಟ ಮುಷ್ಕರ

|
Google Oneindia Kannada News

KSRTC employees indefinite strike from Sep 13
ಬೆಂಗಳೂರು, ಸೆ 12: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಜಂಟಿ ಸಮಿತಿ ಗುರುವಾರದಿಂದ (ಸೆ 13) ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ. ನಿಗಮದ 1.10 ಲಕ್ಷ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸುಮಾರು ಒಂದು ಕೋಟಿ ಜನರಿಗೆ ಪ್ರಯಾಣ ಕೊಂಡಿಯಾಗಿರುವ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಮುಷ್ಕರದಿಂದ ಬಿಎಂಟಿಸಿ ಸೇರಿ ಬಸ್ ಸಂಚಾರ ಅಸ್ತವ್ಯಸ್ತಗೊಳ್ಳುವ ಸಂಭವವಿದೆ.

ಮುಷ್ಕರದ ಬಿಸಿ ಇಂದಿನಿಂದಲೇ ( ಸೆ 12 ) ಆರಂಭವಾಗಿದ್ದು ತಾಜಾ ವರದಿಗಳ ಪ್ರಕಾರ ತುಮಕೂರಿನಲ್ಲಿ 8 ಜನ ನೌಕರರನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಹಾಸನದಲ್ಲಿ ಬಸ್ ಸಂಚಾರ ಅಸ್ತವ್ಯಸ್ತ ಗೊಂಡಿದೆ. ನೌಕರರು ಮುಷ್ಕರಕ್ಕೆ ಉತ್ತಮ ಬೆಂಬಲ ಸೂಚಿಸಿದ್ದು ಇಂದಿನಿಂದಲೇ ಕೆಲಸಕ್ಕೆ ಗೈರು ಹಾಜರಾಗಿದ್ದಾರೆ.

ಹಾಗಾಗಿ ನೂರಾರು ಬಸ್ ಗಳು ಡಿಪೋದಲ್ಲೇ ನಿಂತಿದ್ದು ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.

ಸಂಘಟನೆಗಳು ನಾಳೆಯಿಂದ ನಡೆಸಲು ಉದ್ದೇಶಿಸಿರುವ ಮುಷ್ಕರ ಹತ್ತಿಕ್ಕಲು ರಸ್ತೆ ಸಾರಿಗೆ ಸಂಸ್ಥೆ ಆಡಳಿತ ಮಂಡಳಿ ಮುಂದಾಗಿದೆ. ಹೋರಾಟದಲ್ಲಿ ಪ್ರಮುಖವಾಗಿ ತಮ್ಮನ್ನು ತೊಡಗಿಸಿಕೊಂಡಿರುವ 123 ಮಂದಿ ನೌಕರರನ್ನು ಎತ್ತಂಗಡಿ ಮಾಡಿದೆ. ಅಲ್ಲದೆ 722 ನೌಕರರನ್ನು ವರ್ಗಾವಣೆ ಮಾಡಲು ಪಟ್ಟಿ ಸಿದ್ದ ಪಡಿಸಿಕೊಂಡಿದೆ.

ಆಡಳಿತ ಮಂಡಳಿ ಕೆಎಸ್ಆರ್ಟಿಸಿ, ಬಿಎಂಟಿಸಿ ಮತ್ತು ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರನ್ನು ಯಾವುದೇ ನೋಟೀಸ್ ನೀಡದೆ ವರ್ಗಾವಣೆ ಮಾಡಿದೆ. ನಾವು ಸಂಸ್ಥೆಯ ನೌಕರರು, ನಾವು ಬೇಡಿಕೆ ಇಟ್ಟರೆ ವರ್ಗಾವಣೆ ಮಾಡಿ ಶಿಕ್ಷೆ ನೀಡಿದ್ದಾರೆ.

ಈ ಹಿಂದೆ ನಾವು ಹುಬ್ಬಳ್ಳಿಯಲ್ಲಿ ಸಮಾವೇಶ ನಡೆಸಿದಾಗ ನಮ್ಮ 13 ಮಂದಿ ನೌಕರರನ್ನು ಅಮಾನತು ಮಾಡಿದ್ದಾರೆ. ಮಂಡಳಿ ನಮ್ಮ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ ಎನ್ನುವುದು ಸಂಘಟನೆಗಳ ಆರೋಪ.

ಮುಷ್ಕರದ ಪ್ರಮುಖ ಬೇಡಿಕೆಗಳು
* ಸಂಸ್ಥೆಯ ನೌಕರರ ವೇತನ ಪರಿಷ್ಕರಣೆ
* ಟ್ರೈನಿಯಾಗಿ ಕೆಲಸ ಮಾಡುತ್ತಿರುವ ಸುಮಾರು 30 ಸಾವಿರಕ್ಕೂ ಹೆಚ್ಚು ನೌಕರರನ್ನು ಖಾಯಂ ಮಾಡುವುದು
* ಏಕಗವಾಕ್ಷಿ ವೇತನ ಪರಿಷ್ಕರಣೆ ಪದ್ಧತಿ ರದ್ದತಿ
* ಮಂಡಳಿಯಿಂದ ನೇಮಿಸಲ್ಪಟ್ಟ ಸಮಿತಿಯೊಂದಿಗೆ ಮಾತುಕತೆ ನಡೆಸಿ ವೇತನ ಪರಿಷ್ಕರಣೆ

ಸಾರಿಗೆ ಸಂಸ್ಥೆ ನೌಕರರಿಗೆ ಮತ್ತು ರಾಜ್ಯದ ಜನತೆಗೆ ಮನವಿ ಮಾಡಿ ಸರಕಾರ ಇಂದಿನ ದೈನಿಕದಲ್ಲಿ ಜಾಹೀರಾತು ನೀಡಿದೆ. ಸರಕಾರ ನೌಕರರಿಗೆ ನೀಡುತ್ತಿರುವ ಸೌಲಭ್ಯಗಳನ್ನು ಜಾಹೀರಾತಿನಲ್ಲಿ ಪ್ರಕಟಿಸಿ ಮುಷ್ಕರ ಕೈಬಿಡುವಂತೆ ಕೋರಿದೆ.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲಾ ನಾಲ್ಕು ಘಟಕಗಳ (ಕೆಎಸ್ಆರ್ಟಿಸಿ, ಬಿಎಂಟಿಸಿ, ಈಶಾನ್ಯ ರಸ್ತೆ ಸಾರಿಗೆ, ವಾಯುವ್ಯ ರಸ್ತೆ ಸಾರಿಗೆ) ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ.

ನಾಳಿನ ಮುಷ್ಕರದಲ್ಲಿ ನೌಕರರ ಸಂಘದ ಎಸ್ಸಿ,ಎಸ್ಟಿ ಘಟಕ ಪಾಲ್ಗೊಳ್ಳುತ್ತಿಲ್ಲ.

English summary
Employees of KSRTC going on indefinite strike from September 13 to meet their various demands.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X