ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೀಪೇಯ್ಡ್ ಗ್ರಾಹಕರಿಗೆ ISD ಕರೆ ಸೌಲಭ್ಯ ಇನ್ನಿಲ್ಲ

By Mahesh
|
Google Oneindia Kannada News

Pre-paid mobile numbers to lose ISD facility soon
ನವದೆಹಲಿ, ಸೆ.9: ಪ್ರೀಪೇಯ್ಡ್ ಮೊಬೈಲ್ ಸಿಮ್ ವುಳ್ಳ ಗ್ರಾಹಕರು ಇನ್ಮುಂದೆ ಅಂತಾರಾಷ್ಟ್ರೀಯ ಕರೆಗಳ ಮಾಡುವ ಅವಕಾಶದಿಂದ ವಂಚಿತರಾಗಲಿದ್ದಾರೆ. ಪ್ರೀಪೇಯ್ಡ್ ಸಿಮ್ ಗಳಿಗೆ ಐಎಸ್ ಡಿ ಸೇವೆವನ್ನು ಹಿಂಪಡೆಯುವಂತೆ ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(TRAI) ದೂರ ಸಂಪರ್ಕ ಕಂಪೆನಿಗಳಿಗೆ ಆದೇಶಿಸಿದೆ.

ಪ್ರೀಪೇಯ್ಡ್ ಗ್ರಾಹಕರು ಅಂತಾರಾಷ್ಟ್ರೀಯ ಕರೆಗಳಿಗೆ ತಮ್ಮ ಖಚಿತ ಸಮ್ಮತಿ ವ್ಯಕ್ತಪಡಿಸಿದಲ್ಲಿ ಮಾತ್ರ, ಅಂಥವರ ಸಿಮ್ ಗಳಿಗೆ ಐಎಸ್ ಡಿ ಸೌಲಭ್ಯ ಒದಗಿಸುವಂತೆ ಟ್ರಾಯ್ ಮೊಬೈಲ್ ಸೇವಾ ಸಂಸ್ಥೆಗಳಿಗೆ ಸ್ಪಷ್ಟ ಸೂಚನೆ ನೀಡಿದೆ. ಮುಂದಿನ ಹತ್ತು ದಿನಗಳ ಒಳಗೆ ಎಲ್ಲ ಪ್ರೀಪೇಯ್ಡ್ ಗ್ರಾಹಕರಿಗೆ ಎಸ್ ಎಂ ಎಸ್ ಮೂಲಕ ಈ ಕುರಿತು ಮಾಹಿತಿ ನೀಡುವಂತೆ ಮತ್ತು 60 ದಿನಗಳ ಬಳಿಕ ಈ ಸೇವೆಯನ್ನು ರದ್ದುಗೊಳಿಸುವಂತೆ ಟ್ರಾಯ್ ಆದೇಶದಲ್ಲಿ ತಿಳಿಸಲಾಗಿದೆ.

ಐಎಸ್ ಡಿ ಸೌಲಭ್ಯ ಹಿಂಪಡೆಯುವ ಸಂದೇಶದ ನಂತರವೂ ಪ್ರೀಪೇಯ್ಡ್ ಗ್ರಾಹಕರು ತಮ್ಮ ಮೊಬೈಲ್ ಫೋನ್ ಗಳಲ್ಲಿ ಈ ಸೌಲಭ್ಯವನ್ನು ಬಯಸಿದಲ್ಲಿ, ಅಂತಹವರಿಂದ ಖಚಿತ ಅನುಮತಿ ಪಡೆದು, ಕಂಪೆನಿಗಳು ಈ ಸೌಲಭ್ಯ ಪಡೆಯಬಹುದಾಗಿದೆ ಎಂದು ಆದೇಶದಲ್ಲಿ ಸ್ಪಷ್ಟ ಪಡಿಸಲಾಗಿದೆ.

ಅಂತಾರಾಷ್ಟ್ರೀಯ ನಂಬರ್ ಗಳಿಂದ ಪ್ರೀಪೇಯ್ಡ್ ಬಳಕೆದಾರರಿಗೆ ಆಗಾಗ ಮಿಸ್ ಕಾಲ್ ಬರುತ್ತಿರುವ ಬಗ್ಗೆ ಟ್ರಾಯ್ ಗೆ ಅನೇಕರಿಂದ ದೂರು ಕೇಳಿ ಬಂದಿತ್ತು. ಈ ರೀತಿ ಮಿಸ್ ಕಾಲ್ ಬರುತ್ತಿದ್ದ ನಂಬರ್ ಗಳಿಗೆ ಅಪ್ಪಿ ತಪ್ಪಿ ಕುತೂಹಲಕ್ಕಾದರೂ ತಿರುಗಿ ಕರೆ ಮಾಡಿದರೆ ಭಾರಿ ಮೊತ್ತ ಕಡಿತಗೊಳ್ಳುತ್ತಿತ್ತು.

ಇದಲ್ಲದೆ, ಅಂತಾರಾಷ್ಟ್ರೀಯ ಮೊಬೈಲ್ ಸಂಖ್ಯೆಗಳಿಂದ ಎಸ್ ಎಂಎಸ್ ಗಳು ಬರುತ್ತಿತ್ತು. ನಿಮಗೆ ಇಂತಿಷ್ಟು ಮೊತ್ತದ ಡಾಲರ್ ಹಣ ಅಥವಾ ಪೌಂಡ್ ಗಟ್ಟಲೆ ಹಣ ಸಿಕ್ಕಿದೆ ಬೇಗನೇ ಈ ಸಂಖ್ಯೆಗೆ ಕರೆ ಮಾಡಿ ಎಂದು ಆಮಿಷ ಒಡ್ಡುವ ಸಂದೇಶಗಳು ಬರುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿತ್ತು.

ಇನ್ನು 10 ದಿನಗಳಲ್ಲಿ ಸೇವಾದಾರರು ಈ ಹೊಸ ನಿಯಮದ ಬಗ್ಗೆ ತನ್ನ ಗ್ರಾಹಕರಿಗೆ ತಿಳಿಸಿ, ಗುರುತು ಗೊತ್ತಿಲ್ಲದ ಯಾವುದೇ ಅಂತಾರಾಷ್ಟ್ರೀಯ ಕರೆ ಹಾಗೂ ಎಸ್ ಎಂಎಸ್ ಗೆ ಉತ್ತರ ನೀಡಬಾರದು ಎಂದು ಸೂಚಿಸುವಂತೆ ಟ್ರಾಯ್ ನಿರ್ದೇಶಿಸಿದೆ. ಇದರ ಜೊತೆಗೆ ಅಂತಾರಾಷ್ಟ್ರೀಯ ಕರೆಗೆ ಚಂದಾದಾರರಾಗುವುದು ಹಾಗೂ ಸೇವೆಯಿಂದ ಮುಕ್ತರಾಗುವುದಕ್ಕೆ ಗ್ರಾಹಕರಿಗೆ ಸಲಹೆ ನೀಡುವಂತೆ ಸೇವಾದಾರರಿಗೆ ಟ್ರಾಯ್ ಸೂಚಿಸಿದೆ.

English summary
Telecom regulator TRAI has asked telecom companies to de-activate the international calling facility in pre-paid numbers and restore it only after a subscriber gives his explicit consent to avail this facility.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X