ದುಬೈ: ಮನೆ ದಲ್ಲಾಳಿಯಿಂದ ಕೋಟ್ಯಂತರ ಹಣ ವಂಚನೆ

dubai-conman-dupes-tenants-landlords-multi-million-rent
ದುಬೈ, ಸೆ. 7: ಬಾಡಿಗೆದಾರರಿಗೆ ಮನೆ ಕೊಡಿಸುವ ದಲ್ಲಾಳಿಯೊಬ್ಬ ಭಾರಿ ಮೊತ್ತದ ಬಾಡಿಗೆ ಭಾನಗಡಿ ನಡೆಸಿ, ಪರಾರಿಯಾಗಿದ್ದಾರೆ. ಇದರಿಂದ ನೂರಾರು ಬಾಡಿಗೆದಾರರು ಮನೆಯಿಂದ ಹೊರಬೀಳುವ ಭೀತಿ ಎದುರಿಸುತ್ತಿದ್ದಾರೆ.

ಬಾಡಿಗೆದಾರರಿಂದ ಕೋಟಿಗಟ್ಟಲೆ ದಿರ್ಹಮ್‌ ಹಣನ್ನು ಜಮಾಯಿಸಿದ ಬಳಿಕ ಸದರಿ ಮನೆ ದಲ್ಲಾಳಿ ಪರಾರಿಯಾಗಿದ್ದಾನೆ. ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ನಡೆದ ಅತ್ಯಂತ ದೊಡ್ಡ ಬಾಡಿಗೆ ಹಗರಣ ಇದಾಗಿದೆ ಎನ್ನಲಾಗಿದೆ.

ಈ ಬಗ್ಗೆ ಸಂತ್ರಸ್ತರು ತಮ್ಮ ಸಂಕಷ್ಟಗಳನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಹಲವಾರು ಮನೆ ಮಾಲೀಕರು Dubai Municipality's Rent Committeeಗೆ ಎಚ್.ಎಂ.ಕೆ. 43 ಎಂಬಾತನ ವಿರುದ್ಧ ದೂರು ನೀಡಿದ್ದಾರೆ. ಸಂತ್ರಸ್ತರೂ ಶಂಕಿತನ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ.

ಈ ಇಡೀ ಹಗರಣವನ್ನು ಭಾರಿ ಜಾಗರೂಕತೆಯಿಂದ ಹೆಣೆಯಲಾಗಿದೆ ಎಂದು ಸಂತ್ರಸ್ತರು ಹೇಳುತ್ತಾರೆ. ವಂಚಕ ನೀಡಿರುವ ಪಾಸ್‌ಪೋರ್ಟ್ ಪ್ರತಿಯ ಆಧಾರದಲ್ಲಿ, ಆತನನ್ನು ಸೌದಿ ರಾಷ್ಟ್ರೀಯ ಎಂದು ಹೇಳಲಾಗುತ್ತಿದೆ. ಆದರೆ, ಈ ಪಾಸ್‌ಪೋರ್ಟ್ ನಕಲಿಯಾಗಿರುವ ಸಾಧ್ಯತೆಯೂ ಇದೆ.

ತಾನು ಮನೆ ಮಾಲೀಕ ಎಂದು ಹೇಳಿಕೊಂಡ ವಂಚಕನು ನೂರಾರು ಮನೆಗಳನ್ನು ಮರು ಬಾಡಿಗೆಗೆ ನೀಡಿದ್ದನು. ವಾಸ್ತವವಾಗಿ, ಈ ಮನೆಗಳನ್ನು ಆತ ಇತರ ಮಾಲೀಕರಿಂದ ಬಾಡಿಗೆಗೆ ಪಡೆದುಕೊಂಡಿದ್ದ.

ಬುರ್ಜ್ ಖಲೀಫದ ಸಮೀಪದ ಬುರ್ಜ್ ಲೋಫ್ಟ್‌ನಲ್ಲಿರುವ ತನ್ನ ಒಂದು ಬೆಡ್‌ರೂಂ ಮನೆಯನ್ನು ಅದರ ಮಾಲೀಕ ಜಿಮ್ಮಿ ಮರಿಯಾನೊ ಅವರು ಎರಡು ವರ್ಷಗಳಿಂದ ವಂಚಿತನಿಗೆ ಬಾಡಿಗೆಗೆ ನೀಡಿದ್ದರು. ವಂಚಕ ಪ್ರತಿ ತಿಂಗಳು ಬಾಡಿಗೆ ಪಾವತಿಸುತ್ತಿದ್ದ.

'ಆತ ಸಭ್ಯನಂತೆ ಕಾಣುತ್ತಿದ್ದುದರಿಂದ ಆತನನ್ನು ನಾನು ನಂಬಿದೆ. ಅದೂ ಅಲ್ಲದೆ, ಎರಡು ವರ್ಷಗಳಿಂದ ಆತ ನಿಯಮಿತವಾಗಿ ಬಾಡಿಗೆ ಪಾವತಿಸುತ್ತಿದ್ದ' ಎಂದರು. ಆದರೆ, ಆಗಸ್ಟ್ 31ರ ದಿನಾಂಕ ಹೊಂದಿದ್ದ ಚೆಕ್ ಸೆಪ್ಟಂಬರ್ 3ರಂದು ಬೌನ್ಸ್ ಆಯಿತು.

ಮರಿಯಾನೊ ದೂರು ಸಲ್ಲಿಸಲು ಬಾಡಿಗೆ ಸಮಿತಿಗೆ ಹೋದಾಗ ಅಲ್ಲಿ ತನ್ನಂತೆಯೇ ಹಲವಾರು ಮನೆ ಮಾಲೀಕರು ಇದ್ದುದನ್ನು ಕಂಡರು. ಅವರ ಕತೆಯೂ ಅದೇ ಆಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+