ಕರ್ನಲ್ ಪತ್ನಿ ವಿಡಿಯೋ ಪೋರ್ನ್ ಸೈಟಿಗೆ

ಆರ್ಮಿ ಮೇಜರ್ ಒಬ್ಬರು ತಮ್ಮ ಹಿರಿಯ ಅಧಿಕಾರಿಯ ಪತ್ನಿಯ ಮೊಬೈಲ್ ಫೋನ್ ನಂಬರ್, ಖಾಸಗಿ ಚಿತ್ರಗಳನ್ನು ಪೋರ್ನ್ ವೆಬ್ ತಾಣಗಳಲ್ಲಿ ಹಾಕುವ ಮೂಲಕ ಹಗೆ ತೀರಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿಯಂತೆ ಹಿರಿಯ ಅಧಿಕಾರಿಯ ಪತ್ನಿಯ ಸಂಪೂರ್ಣ ಜಾತಕದ ಜೊತೆಗೆ ವಿಡಿಯೋ, ಚಿತ್ರಗಳು ಸುಮಾರು 19 ಪೋರ್ನ್ ಸೈಟ್ ಗಳಲ್ಲಿ ಕಾಣಿಸಿಕೊಂಡಿದೆ. 3 ನಿಮಿಷ 15 ಸೆಕೆಂಡ್ ಇರುವ ವಿಡಿಯೋ ತುಣುಕುಗಳ ಹಸಿಬಿಸಿ ದೃಶ್ಯಗಳು ವೆಬ್ ನಲ್ಲಿ ವಿಹರಿಸುತ್ತಿವೆ.
ಈ ಖಾಸಗಿ ಚಿತ್ರಗಳು, ವಿಡಿಯೋಗಳು ಮೇಜರ್ ಕೈಗೆ ಹೇಗೆ ತಲುಪಿತು. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸ್ಥಳೀಯ ಕೋರ್ಟ್ ಆದೇಶಿಸಿದೆ.
ಆರೋಪಿ ಮೇಜರ್ ಹಾಗೂ ಫ್ಲೈಟ್ ಕಮಾಂಡರ್ ಆಗಿರುವ ಲೆ. ಕರ್ನಲ್ ಇಬ್ಬರು ಬಟಿಂಡಾದ 668 Reconnaissance and Observation Squadron ನ ಅಧಿಕಾರಿಗಳಾಗಿದ್ದಾರೆ. ಆರ್ಮಿಯ ವಿಮಾನಯಾನ ವಿಭಾಗದಲ್ಲಿ ಇಬ್ಬರಿಗೂ ಒಳ್ಳೆ ಹೆಸರಿದೆ. ಆದರೆ, ಪ್ರತಿಷ್ಠೆಗಾಗಿ ನಡೆದ ಕದನದಲ್ಲಿ ಕರ್ನಲ್ ಪತ್ನಿ ಮಾನ ಹರಾಜಾಗಿದೆ.
ಪ್ರಕರಣದ ಸೂಕ್ಷ್ಮತೆ ಅರಿತ ಮಿಲಿಟರಿ ಗುಪ್ತದಳ, ಕರ್ನಲ್ ಪತ್ನಿ ಚಿತ್ರವಿರುವ ಎಲ್ಲಾ ಪೋರ್ನ್ ತಾಣಗಳಿಗೆ ನಿರ್ಬಂಧ ಹೇರಲು ಕ್ರಮ ಕೈಗೊಂಡಿದ್ದಾರೆ. ಆದರೆ, ಈಗಾಗಲೇ ಅನೇಕ ವೀಕ್ಷಕರು ವೆಬ್ ತಾಣದಿಂದ ಡೌನ್ ಲೋಡ್ ಮಾಡಿಕೊಂಡು ಮೊಬೈಲ್ ಮೂಲಕ ಎಂಎಂಎಸ್ ಹರಡುತ್ತಿದ್ದಾರೆ.
ಹೀಗಾಗಿ ಪರಿಸ್ಥಿತಿ ಕ್ಷಣ ಕ್ಷಣವೂ ಕೈ ಮೀರುತ್ತಿದೆ. ಆರೋಪಿತ ಮೇಜರ್ ಜೊತೆಗೆ ಇತರೆ ಅಧಿಕಾರಿಗಳು ಶಾಮೀಲಾಗಿರುವ ಸಾಧ್ಯತೆಯಿದೆ ಎನ್ನಲಾಗಿದೆ.
ಹಿರಿಯ ಅಧಿಕಾರಿಗಳು ಹಾಗೂ ಕಿರಿಯ ಅಧಿಕಾರಿಗಳ ನಡುವೆ ಬೆಳೆಯುತ್ತಿರುವ ಕಂದಕಕ್ಕೆ ರಕ್ಷಣಾ ಸಚಿವ ಎಕೆ ಅಂಟನಿ ಆತಂಕ ವ್ಯಕ್ತಪಡಿಸಿದ್ದರು. ಇತ್ತೀಚೆಗೆ 10,000ಕ್ಕೂ ಅಧಿಕ ಸೈನಿಕರು ಸ್ವಯಂ ನಿವೃತ್ತಿ ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications