ಅಮೆರಿಕದ ಇಂಡಿಯಾನಾದಲ್ಲಿ ಚರ್ಚ್ ದೇವಸ್ಥಾನವಾಯಿತು

ಈ ಭಾಗದಲ್ಲಿ ಇದು ಮೊದಲ ಹಿಂದೂ ದೇವಸ್ಥಾನವಾಗಿದೆ. ಇಲ್ಲಿನ ಭಕ್ತರು ಮನೆಗಳಲ್ಲಿ ಮತ್ತು ಬಾಡಿಗೆ ಹಾಲ್ ಗಳಲ್ಲಿ ದೇವರನ್ನು ಪೂಜಿಸುತ್ತಿದ್ದರು. ಆದರೆ ಭಕ್ತಾದಿಗಳೆಲ್ಲ ಸೇರಿ 4,15,000 ಡಾಲರ್ ನೀಡಿ Northview Christian Life Church ಎಂಬ ಹಳೆಯ ಚರ್ಚ್ ಖರೀದಿ ಮಾಡಿದರು.
ಖರೀದಿಯ ನಂತರ ಚರ್ಚನ್ನು ಮರುವಿನ್ಯಾಸಗೊಳಿಸಿ ಭಾರತೀಯ ಹಿಂದೂ ದೇವಸ್ಥಾನವನ್ನಾಗಿ (Bharatiya Temple and Cultural Center of Greater Lafayette -BTCCGL) ಪರಿವರ್ತಿಸಲಾಗಿದೆ.
'ಹಿಂದೂ ಧಾರ್ಮಿಕತೆ, ಸಂಪ್ರದಾಯವನ್ನು ಪಸರಿಸುವುದು ತುಂಬಾ ಮುಖ್ಯ. ಈ ನಿಟ್ಟಿನಲ್ಲಿ BTCCGL ಪ್ರಮುಖ ಜವಾಬ್ದಾರಿ ನಿಭಾಯಿಸುತ್ತದೆ' ಎಂದು ಯೂನಿವರ್ಸಲ್ ಸೊಸೈಟಿ ಆಫ್ ಹಿಂದೂಯಿಸಂ ಕೇಂದ್ರದ ಅಧ್ಯಕ್ಷ ರಾಜನ್ ಜೇಡ್ ಆಶಿಸಿದ್ದಾರೆ.
ಉಮೇಶ್ ಪಟೇಲ್ ಮತ್ತು ಜಗದೀಶ್ ಪಟೇಲ್: ಪೂಜೆ-ಪುನಸ್ಕಾರಗಳ ಜತೆಗೆ ಸಮುದಾಯ ಸಭೆ-ಸಮಾರಂಭಗಳನ್ನು ನಡೆಸಿಕೊಡಲಿದೆ. ಇದೊಂದು ಸಾಂಸ್ಕೃತಿಕ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ ಎಂದು BTCCGL ಮುಖ್ಯಸ್ಥರಾದ ಉಮೇಶ್ ಪಟೇಲ್ ಮತ್ತು ಜಗದೀಶ್ ಪಟೇಲ್ ಅವರು ತಿಳಿಸಿದ್ದಾರೆ.
West Lafayette ನಗರ 1888ರಲ್ಲಿ ಸ್ಥಾಪನೆಗೊಂಡಿದ್ದು, ಅತಿ ಹೆಚ್ಚು ಶಿಕ್ಷಿತರನ್ನು ಹೊಂದಿರುವ ನಗರವಾಗಿದೆ. ಅಮೆರಿಕದಲ್ಲಿ ಒಟ್ಟು 30 ಲಕ್ಷ ಹಿಂದೂಗಳು ವಾಸವಾಗಿದ್ದಾರೆ.












Click it and Unblock the Notifications