ಕರ್ನಾಟಕ ಬರ ದರ್ಶನಕ್ಕೆ ಅನಂತ ಕುಮಾರ್‌ ಸನ್ನದ್ಧ

bjp-ananth-kumar-karnataka-drought-tour-sept-1
ಬೆಂಗಳೂರು, ಆ. 16: ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬರದ ಹೆಸರಿನಲ್ಲಿ ತಮ್ಮ ಮಹತ್ವಾಕಾಂಕ್ಷಿ ರಾಜ್ಯ ಪ್ರವಾಸಕ್ಕೆ ಹೊರಟ ಬೆನ್ನಲ್ಲೆ (ಆ.21 ರಿಂದ) ಬಿಜೆಪಿ ವತಿಯಿಂದ ಮತ್ತೊಬ್ಬ ಮಾಜಿ ಸಿಎಂ ಡಿವಿ ಸದಾನಂದ ಗೌಡ ಅವರು ನಿನ್ನೆಯಿಂದ ಪ್ರವಾಸ ಶುರು ಮಾಡಿದ್ದಾರೆ. ಈ ಮಧ್ಯೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್‌ ನೇತೃತ್ವದ ತಂಡವೂ ಬರ ಪರಿಶೀಲನಾ ಪ್ರವಾಸ ಕೈಗೊಳ್ಳಲು ಸಿದ್ಧವಾಗಿದೆ.

ಸೆಪ್ಟೆಂಬರ್ 1 ಮತ್ತು 2ರಂದು ಮತ್ತು ಸೆ. 8 ಮತ್ತು 9ರಂದು ಎರಡು ಘಟ್ಟಗಳಲ್ಲಿ ಅನಂತ ಕುಮಾರ್‌ ಅವರು ಬರ ದರ್ಶನ ಮಾಡಲಿದ್ದಾರೆ. ಸೆ. 1 ಮತ್ತು 2ರಂದು ಮಂಡ್ಯ ಮತ್ತು ಕೋಲಾರ ಜಿಲ್ಲೆಗಳಲ್ಲಿ ಈ ಪ್ರವಾಸ ನಡೆಸಲಿದ್ದಾರೆ. ಉಪ ಮುಖ್ಯಮಂತ್ರಿ ಆರ್ ಅಶೋಕ್‌ ಅವರಿಗೆ ಸಾಥ್ ನೀಡಲಿದ್ದಾರೆ.

ಸಂಸತ್‌ ಅಧಿವೇಶನ ನಡೆಯುತ್ತಿರುವುದರಿಂದ ಶನಿವಾರ ಮತ್ತು ಭಾನುವಾರ ಮಾತ್ರ ಪ್ರವಾಸ ನಿಗದಿಗೊಳಿಸಲಾಗಿದೆ. ಈ ಎರಡು ದಿನಗಳ ನಂತರ ಸೋಮವಾರದಿಂದ ಅನಂತಕುಮಾರ್‌ ಅವರು ಮತ್ತೆ ಸಂಸತ್‌ ಅಧಿವೇಶನದಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳಲಿದ್ದಾರೆ. ನಂತರ ಸೆ. 8 ಮತ್ತು 9ರಂದು ಬರ ಪ್ರವಾಸ ಮುಂದುವರಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಗೌಡ ಬರ ಅಧ್ಯಯನ ಶುರು:

ಹುಣಸೂರು ತಾಲೂಕಿನ ಬರಪೀಡಿತ ಗ್ರಾಮಗಳಿಗೆ ಭೇಟಿ ನೀಡಿದ ಸದಾನಂದ ಗೌಡ, ಬಿಳಿಕೆರೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಇದಕ್ಕೂ ಮೊದಲು ಅವರು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಚಾಮುಂಡಿ ದೇವಿಗೆ ಪೂಜೆ ಸಲ್ಲಿಸಿ ತಮ್ಮ ಬರ ಅಧ್ಯಯನ ಪ್ರವಾಸ ಆರಂಭಿಸಿದರು. ಮತ್ತೊಬ್ಬ ಉಪ ಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಅವರು ಸದಾನಂದರಿಗೆ ಸಾಥ್ ನೀಡಿದ್ದಾರೆ.

'ಈ ಪ್ರವಾಸ ರಾಜಕೀಯ ಪ್ರೇರಿತವೆಂಬ ಪ್ರತಿಪಕ್ಷ ನಾಯಕರ ಟೀಕೆಗಳಿಗೆ ಪ್ರಾಮುಖ್ಯತೆ ನೀಡದೆ ನಮ್ಮ ಕೆಲಸದ ಬಗ್ಗೆ ಗಮನ ವಹಿಸುತ್ತೇವೆ. ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಜೆಡಿಎಸ್‌ ನಾಯಕರು 2-3 ತಂಡಗಳಲ್ಲಿ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು.

ಆದರೆ ನಾವು ಅದನ್ನು ಪ್ರಶ್ನಿಸಲಿಲ್ಲ. ಪ್ರತಿಪಕ್ಷಗಳ ಸಲಹೆ ಸ್ವೀಕರಿಸಿ ರಾಜಕೀಯ ರಹಿತ ರೀತಿಯಲ್ಲಿ ಬರ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಆದ್ದರಿಂದ ನನ್ನ ಈ ಪ್ರವಾಸ ಚುನಾವಣಾ ಗಿಮಿಕ್‌ ಎಂಬ ಆರೋಪಕ್ಕೆ ಕಿವಿಗೊಡುವುದಿಲ್ಲ' ಎಂದು ಸದಾನಂದರು ತಿಳಿಸಿದರು.

ನಂತರ ಧರ್ಮಾಪುರ, ಚಿಕ್ಕಾಡಿಗನಹಳ್ಳಿ ಗೇಟ್‌, ದೊಡ್ಡಬೀಚನಹಳ್ಳಿ, ಹಂದನಹಳ್ಳಿ ಸೇರಿದಂತೆ ಹುಣಸೂರು, ಎಚ್‌.ಡಿ. ಕೋಟೆ ತಾಲೂಕಿನ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸದಾನಂದ ಗೌಡ, ರೈತರ ಅಹವಾಲು ಸ್ವೀಕರಿಸಿದರು.

ರೈತರಿಗೆ ಸಾಂತ್ವನ ಹೇಳಿ ನೆರವಿನ ಭರವಸೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎ. ರಾಮದಾಸ್‌, ಗೃಹ ಮಂಡಳಿ ಅಧ್ಯಕ್ಷ ಜಿ.ಟಿ. ದೇವೇಗೌಡ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+