ಆಸ್ಟ್ರೇಲಿಯಾದಲ್ಲಿ ಭಾರತೀಯರು ಉದ್ಯೋಗಕ್ಕೆ ಅನರ್ಹರು

australia-no-indian-asian-job-ad-triggers-outrage
ಮೆಲ್ಬೋರ್ನ್, ಆ.29: ಆಸ್ಟ್ರೇಲಿಯಾದಲ್ಲಿ 2-3 ವರ್ಷಗಳಿಂದ ಜನಾಂಗೀಯ ಕಲಹದಲ್ಲಿ ಬೆಂದೆದ್ದ ಭಾರತೀಯ ವಿದ್ಯಾರ್ಥಿಗಳನ್ನು ಈಗ ಉದ್ಯೋಗ ಮಾರುಕಟ್ಟೆಯಲ್ಲೂ ಅನರ್ಹಗೊಳಿಸಲಾಗಿದೆ. ಭಾರತೀಯರ ಜತೆಗೆ ಇಡೀ ಏಷ್ಯನ್ನರನ್ನೂ ಅನರ್ಹಗೊಳಿಸಲಾಗಿದೆ.

ಆಸ್ಟ್ರೇಲಿಯಾದ ಸೂಪರ್ ಮಾರುಕಟ್ಟೆ ಕಂಪನಿಗಳಿಗಾಗಿ ಅರ್ಹ ಉದ್ಯೋಗಿಗಳನ್ನು ಒದಗಿಸುವ Coles ಎಂಬ ಗುತ್ತಿಗೆ ಕಂಪನಿಯು ಇಂತಹ ಫರ್ಮಾನು ಹೊರಡಿಸಿದೆ. ತನ್ನ ಸಂಸ್ಥೆಯ ಮೂಲಕ ಉದ್ಯೋಗ ಗಿಟ್ಟಿಸಲು 'ಭಾರತೀಯರಷ್ಟೇ ಅಲ್ಲ ಇಡೀ ಏಷ್ಯನ್ನರು ಅನರ್ಹರು' ಎಂದು Coles ಪ್ರಕಟಿಸಿದೆ.

ಮೊನ್ನೆ ಭಾನುವಾರ ಇಂತಹ ಜಾಹೀರಾತೊಂದನ್ನು Coles ತನ್ನ Gumtree ಅಂತರ್ಜಾಲ ತಾಣದಲ್ಲಿ ಪ್ರಕಟಿಸಿದೆ. ಹೋಬರ್ಟಿನ Eastlands Shopping Centreನಲ್ಲಿರುವ ಸೂಪರ್ ಮಾರುಕಟ್ಟೆ ಕಂಪನಿಗಳಿಗೆ ನೇಮಕಾತಿ ಮಾಡಿಕೊಳ್ಳಲು Coles ಮುಂದಾಗಿದ್ದು, ಇದಕ್ಕೆ ಭಾರತೀಯರು ಅರ್ಜಿ ಗುಜರಾಯಿಸುವುದು ಬೇಡ ಎಂದು ಸ್ಪಷ್ಟವಾಗಿ ಸೂಚಿಸಿದೆ.

ಈ ಬಗ್ಗೆ ಸಾಮಾಜಿಕ ಜಾಲದಲ್ಲಿ ವ್ಯಾಪಕ ಪ್ರತಿಭಟನೆಗಳು ವ್ಯಕ್ತವಾಗಿವೆ. ಇಂತಹ ಸೂಪರ್ ಮಾರುಕಟ್ಟೆ ಕಂಪನಿಗಳತ್ತ ತಲೆಹಾಕದಂತೆ ನೆಟ್ಟಿಗರು ಕರೆಯಿತ್ತಿದ್ದಾರೆ. ಇಂತಹ ಜಾಹೀರಾತನ್ನು ಕಂಪನಿಯ ಅಗತ್ಯ/ಕೋರಿಕೆಗೆ ತಕ್ಕಂತೆ ಪ್ರಕಟಿಸಲಾಗಿತ್ತು. ಆದರೆ ವ್ಯಾಪಕ ಪ್ರತಿಭಟನೆಗಳು ವ್ಯಕ್ತವಾಗುತ್ತಿದ್ದಂತೆ ಅದನ್ನು ಹಿಂಪಡೆಯಲಾಗಿದೆ ಎಂದು Coles ವಕ್ತಾರರು ತಿಳಿಸಿದ್ದಾರೆ.

ಜನಾಂಗೀಯ ದ್ವೇಷಕ್ಕೆ ಕಿಚ್ಚುಹಚ್ಚುವ ವರದಿ, ಪತ್ರಿಕಾ ಪ್ರಕಟಣೆಗಳನ್ನು ನೀಡುವಂತಿಲ್ಲ. ಇದು ಕಾನೂನಿನ ಸ್ಪಷ್ಟ ಉಲ್ಲಂಘನೆ. ಇದೀಗ Coles ಸಂಸ್ಥೆಯ ವಿರುದ್ಧ ದೂರುಗಳು ಬಂದಿವೆ. ಯಾವುದೇ ಒಬ್ಬ ವ್ಯಕ್ತಿಯನ್ನು ಹೀಗೆ ಜನಾಂಗೀಯ ಆಧಾರದ ಮೇಲೆ ಅನರ್ಹಗೊಳಿಸುವುದು ಅಕ್ಷಮ್ಯ ಎಂದು ತಾಸ್ಮೇನಿಯಾ ಜನಾಂಗೀಯ ವಿರೋಧಿ ಆಯುಕ್ತೆ ರಾಬಿನ್ ಬ್ಯಾಂಕ್ಸ್ ಪ್ರತಿಕ್ರಿಯೆ ನೀಡಿದ್ದು, Coles ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+