• search

ಇನ್ಮೇಲೆ ಗಂಟೆಗೆ 12 ನಿಮಿಷ ಮಾತ್ರ ಜಾಹೀರಾತು

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts
  TRAI releases draft norms on air time of TV ads
  ನವದೆಹಲಿ, ಆ.28: ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಟಿವಿ ಚಾನೆಲುಗಳಿಗೆ ಆಘಾತಕಾರಿ ಸುದ್ದಿ ನೀಡಿದೆ. ಕಳೆದ ಮೇ ತಿಂಗಳಿನಲ್ಲಿ ಉದ್ದೇಶಿತ ಜಾಹೀರಾತು ಕತ್ತರಿ ಕಾನೂನನ್ನು ಸೋಮವಾರ(ಆ.27)ದಿಂದ ಟ್ರಾಯ್ ಜಾರಿಗೊಳಿಸಿದೆ.

  ಇಷ್ಟವಾದ ಸಿರಿಯಲ್ಲೋ, ಸಿನಿಮಾ ಸಂಗೀತ, ಹಾಡು, ನೃತ್ಯ, ಕ್ರಿಕೆಟ್ ಸೇರಿದಂತೆ ಎಲ್ಲಾ ಬಗೆಯ ಮನರಂಜನೆ ಒದಗಿಸುತ್ತಿದ್ದ ಈಡಿಯಟ್ ಬಾಕ್ಸ್ ನಲ್ಲಿ ಇನ್ಮುಂದೆ ಬೇಕಾಬಿಟ್ಟಿ ಜಾಹೀರಾತುಗಳು ನುಸುಳುವಂತಿಲ್ಲ. ಕಳೆದ ಮೇ ತಿಂಗಳಿನಲ್ಲಿ [ಓದಿ: ಟಿವಿ ಜಾಹೀರಾತಿಗೆ ಬಿತ್ತು ಗುದ್ದು] ಜಾರಿಗೆ ತಂದಿದ್ದ ಜಾಹೀರಾತು ಮಿತಿಯನ್ನು ವಿರೋಧಿಸಿ ಹಲವಾರು ಪ್ರಸಾರ ಸಂಸ್ಥೆಗಳು TDSAT ನಲ್ಲಿ ಟ್ರಾಯ್ ವಿರುದ್ಧ ದೂರು ನೀಡಿದ್ದವು.

  ಈಗ ಇದರ ವಾದ ವಿವಾದಗಳು ಮುಗಿದಿದ್ದು, ಗಂಟೆಗೆ ಒಂದು ಗಂಟೆಯ ಟಿವಿ ಕಾರ್ಯಕ್ರಮದ ಅವಧಿಯಲ್ಲಿ 10 ನಿಮಿಷಕ್ಕಿಂತ ಹೆಚ್ಚಿನ ಅವಧಿಗೆ ಜಾಹೀರಾತುಗಳನ್ನು ಹಾಕುವಂತಿಲ್ಲ. 10+2 ನಿಮಿಷ ಆಡ್ಸ್ ಹಾಕಲು ಅನುಮತಿ ನೀಡಲಾಗಿದೆ. ಇದು ಕೇಬಲ್ ಟೆಲಿವಿಷನ್ ನೆಟ್ವರ್ಕ್ ನಿಯಮ ಮೀರುವಂತಿಲ್ಲ.

  ಪ್ರತಿ ಗಂಟೆಯಲ್ಲಿ ಪ್ರಸಾರವಾಗುವ ಜಾಹೀರಾತಿನಲ್ಲಿ ವ್ಯತ್ಯಾಸ ಆಗುವಂತಿಲ್ಲ.ಯಾವುದೋ ಗಂಟೆಯಲ್ಲಿ 8 ನಿಮಿಷಯ ಮಾತ್ರ ಜಾಹೀರಾತು ಹಾಕಿದ್ದಿವಿ. ಅದನ್ನು ಸರಿದೂಗಿಸಲು ಮುಂದಿನ ಒಂದು ಗಂಟೆಯಲ್ಲಿ 10 ಪ್ಲಸ್ 2 ನಿಮಿಷ ಅಂದರೆ 12 ನಿಮಿಷ ಜಾಹೀರಾತು ಹಾಕುತ್ತೀವಿ ಎಂದು ಚಾನೆಲುಗಳು ಹೇಳುವ ಹಾಗಿಲ್ಲ ಎಂದೂ TRAI ನಿರ್ಬಂಧಿಸಿದೆ.

  ಕಾರ್ಯಕ್ರಮಗಳ ನಡುವೆ ಜಾಹೀರಾತುಗಳನ್ನು ಹಾಕಲು 15 ನಿಮಿಷಗಳ ಅಂತರ ಕಾಯ್ದುಕೊಳ್ಳಬೇಕು. ಇನ್ನು, ಸಿನಿಮಾ ಬರುತ್ತಿರುವಾಗ ಈ ಅವಧಿ ಕನಿಷ್ಠ 30 ನಿಮಿಷಕ್ಕೆ ಅಧಿಕವಾಗುತ್ತದೆ. ಹಾಗಾದರೆ ಕ್ರೀಡಾ ಪ್ರಸಾರದ ವೇಳೆ ಹೇಗೆ? ಅಂದರೆ ಕ್ರೀಡಾ ಮೈದಾದನಲ್ಲಿ ಬಿಡುವು ದೊರೆತಾಗ ಮಾತ್ರವೇ live broadcast ವೇಳೆ ಜಾಹೀರಾತು ತೋರಿಸಬೇಕು ಎಂದು ಚಾನೆಲುಗಳಿಗೆ TRAI ಕಡಿವಾಣ ಹಾಕಿದೆ.

  ಎಲ್ಲಕ್ಕಿಂತ ಮುಖ್ಯವಾಗಿ ಇತ್ತೀಚೆಗೆ ಚಾನೆಲುಗಳು ಪರದೆಯ ಮೇಲೆ small window, scroll ಗಳಲ್ಲಿಯೂ ಜಾಹೀರಾತುಗಳನ್ನು ಪ್ರದರ್ಶಿಸುತ್ತವೆ. ಇದು ಸರ್ವತಾ ಸಲ್ಲದು ಎಂದಿರುವ TRAI, ಜಾಹೀರಾತು ಪೂರ್ಣ ಪ್ರಮಾಣದಲ್ಲಿ screen ಮೇಲೆ ಕಾಣಿಸಿಕೊಂಡು ವೀಕ್ಷಕರಿಗೆ ಆಹ್ಲಾದತೆಯನ್ನುಂಟು ಮಾಡುವಂತಿರಬೇಕು ಎಂದಿದೆ.

  ಪ್ರತಿ ತ್ರೈಮಾಸಿಕದಲ್ಲಿ ಪ್ರಸಾರ ಸಂಸ್ಥೆಗಳು ತಾವು ಪ್ರಸಾರ ಮಾಡುವ ಜಾಹೀರಾತಿನ ವಿವರಗಳನ್ನು ಸಲ್ಲಿಸಬೇಕು. ಜಾಹೀರಾತಿನ ಅವಧಿ, ಗುಣಮಟ್ಟದ ಬಗ್ಗೆ ನಿರ್ಬಂಧ ಸಡಿಸಲು ಸಾಧ್ಯವಿಲ್ಲ. ಷೇರುದಾರರು ಈ ಬಗ್ಗೆ ಆಕ್ಷೇಪಣೆಗಳನ್ನು ಸೆ.11ರೊಳಗೆ ಸಲ್ಲಿಸಬಹುದು ಎಂದು ಟ್ರಾಯ್ ಹೇಳಿದೆ.

  ಅಂತೂ ಅಬ್ಬರದ ಅನಗತ್ಯ ಜಾಹೀರಾತಿನ ಕಿರಿಕಿರಿಯಿಂದ ಪ್ರೇಕ್ಷಕರಿಗೆ ಮುಕ್ತಿ ಸಿಕ್ಕಿದೆ. ಇನ್ಮುಂದೆ Standards of Quality of Service Regulations 2012 ಅನುಸಾರವಾಗಿ ಜಾಹೀರಾತುಗಳು ಕಾಣಿಸಿಕೊಳ್ಳಲಿದೆ. ನಿಮಗೆ ಯಾವುದೇ ಸಂದರ್ಭದಲ್ಲಿ ಜಾಹೀರಾತು ಹಾಗು ಕಾರ್ಯಕ್ರಮಗಳಿಂದ ಕಿರಿಕಿರಿ ಉಂಟಾದರೆ ತಪ್ಪದೆ ಟ್ರಾಯ್ ಗೆ ತಿಳಿಸಿ. ಏಕೆಂದರೆ ಪ್ರೇಕ್ಷಕರೇ ಇಲ್ಲಿ ಪ್ರಭುಗಳು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  The Telecom Regulatory Authority of India (TRAI) on Monday(Aug.27) released the amended draft of the regulation on the duration of advertisements on television channels. Television channels will not be able to show advertisements for more than twelve minutes in an hour as per the latest regulations

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more