ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣಿ ಅಕ್ರಮ: ಡಿಕೆಶಿಗೆ ಕ್ಲೀನ್ ಚಿಟ್, ಯೋಗಿಗೆ ಮುಖಭಂಗ

By Srinath
|
Google Oneindia Kannada News

no-illegal-quarry-in-kanakapura-forests-dks-clean-chit
ಬೆಂಗಳೂರು, ಆ.24: ಕನಕಪುರ ತಾಲೂಕಿನ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿಲ್ಲ ಎಂದು ಐಎಎಸ್ ಅಧಿಕಾರಿ ಮೊಹಮದ್ ಸನಾವುಲ್ಲಾ ನೇತೃತ್ವದ ಸತ್ಯ ಶೋಧನಾ ಸಮಿತಿ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದೆ.

ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಗುರಿಯಾಗಿಸಿಕೊಂಡು ಕನಕಪುರ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ ಎಂದು ದೂರಿದ್ದರು. ಈ ಆರೋಪದ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ನಡೆಸುವಂತೆ 2012ರ ಫೆಬ್ರವರಿ 17ರಂದು ಅಂದಿನ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಹಿರಿಯ ಅಧಿಕಾರಿ ಸನಾವುಲ್ಲಾ ನೇತೃತ್ವದಲ್ಲಿ ಏಕ ಸದಸ್ಯ ಶೋಧನಾ ಸಮಿತಿ ರಚಿಸಿದ್ದರು.

ಸಚಿವರ ಅರಣ್ಯ ರೋಧನ:
ಸಮಿತಿಯು ಮಾರ್ಚ್ 13ರಂದು ಸರಕಾರಕ್ಕೆ ವರದಿ ಸಲ್ಲಿಸಿತ್ತು. ಸನಾವುಲ್ಲಾ ವರದಿಯನ್ನು ಸರಕಾರ ಈವರೆಗೆ ಬಹಿರಂಗಪಡಿಸಿರಲಿಲ್ಲ. ಆದರೆ ಮಾಹಿತಿ ಹಕ್ಕು ಕಾಯಿದೆಯಡಿ ಈಗ ವರದಿ ಬಹಿರಂಗವಾಗಿದೆ. ಇದರಿಂದ ಸಚಿವ ಯೋಗೀಶ್ವರ್ ಮುಖಭಂಗ ಅನುಭವಿಸುವಂತಾಗಿದೆ.

ಯಡಿಯೂರಪ್ಪ ಪಾಳೆಯ ಬಿಟ್ಟು ಸದಾನಂದ ಗೌಡರ ಪಟಾಲಂನಲ್ಲಿ ದಿಢೀರನೆ ಗುರುತಿಸಿಕೊಂಡ ಸಚಿವ ಯೋಗೀಶ್ವರ್ ಅವರು ಪುರಾತನ ವೈರತ್ವದೊಂದಿಗೆ ಡಿಕೆ ಶಿವಕುಮಾರ್ ವಿರುದ್ಧ ಮಾಡಿದ್ದ ಆರೋಪದಲ್ಲಿ ಹುರುಳಿಲ್ಲ ಎಂಬುದನ್ನು ಸದಾನಂದ ಗೌಡರೇ ನೇಮಿಸಿದ್ದ ಸಮಿತಿ ವರದಿ ಸಲ್ಲಿಸಿದೆ.

ಕನಕಪುರ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಮತ್ತು ಅರಣ್ಯ ಪ್ರದೇಶದ 100 ಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಯುತ್ತಿಲ್ಲ. ಒಟ್ಟು 122 ಕಲ್ಲು ಗಣಿಗಾರಿಕೆ ಗುತ್ತಿಗೆಗಳನ್ನು ಮಂಜೂರು ಮಾಡಲಾಗಿದೆ. ಆ ಪೈಕಿ 29 ಗಣಿಗಳಲ್ಲಿ ಮಾತ್ರ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಸದ್ಯ ಗಣಿಗಾರಿಕೆಯಲ್ಲಿ ತೊಡಗಿರುವ ಯಾವುದೇ ಸಂಸ್ಥೆ ಅಥವಾ ಮಾಲೀಕರಿಂದ ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ. ಹೀಗಾಗಿ ಸರಕಾರದ ಬೊಕ್ಕಸಕ್ಕೆ ಅಥವಾ ತೆರಿಗೆ ಆದಾಯಕ್ಕೆ ಯಾವುದೇ ನಷ್ಟ ಉಂಟಾಗಿಲ್ಲ ಎಂದು ವರದಿ ಸ್ಪಷ್ಟಪಡಿಸಿದೆ.

ಯುವಿ ಸಿಂಗ್ ವರದಿಯೂ ಸುಳ್ಳೇ ಸುಳ್ಳು:
ಈ ಹಿಂದೆ, ಯುವಿ ಸಿಂಗ್ ಅವರು ಕನಕಪುರದಲ್ಲಿ ಅರಣ್ಯ ಪ್ರದೇಶ ಸೇರಿದಂತೆ ಕೆಲವು ಕಡೆಗಳಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ ಎಂದು 2006 ರಲ್ಲಿ ವರದಿ ಮಾಡಿದ್ದರು. ಆದರೆ ಈಗ ಇಡೀ ತಾಲೂಕಿನಲ್ಲಿ ಎಲ್ಲಿಯೂ ಅಕ್ರಮ ಗಣಿಗಾರಿಕೆ ನಡೆಯದಿರುವುದು ತಮ್ಮ ಪರಿಶೀಲನೆ ವೇಳೆ ಕಂಡುಬಂದಿಲ್ಲ ಎಂದು ಐಎಎಸ್ ಅಧಿಕಾರಿ ಮೊಹಮದ್ ಸನಾವುಲ್ಲಾ ಅವರು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಯೋಗೀಶ್ವರ ಕ್ಷಮೆ ಕೇಳಬೇಕು:
ಕನಕಪುರ ತಾಲೂಕಿನಲ್ಲಿ ಅಕ್ರಮ ಗಣಿಗಾರಿಕೆ ಬಗ್ಗೆ ಮಾಡಲಾಗುತ್ತಿದ್ದ ಆರೋಪಗಳೆಲ್ಲ ರಾಜಕೀಯ ಪ್ರೇರಿತ ಎಂದು ನಾನು ಮಿದಲಿನಿಂದಲೂ ಹೇಳುತ್ತಾ ಬಂದಿದ್ದೆ. ವಿನಾಕಾರಣ ಆರೋಪ ಮಾಡುತ್ತಿದ್ದ ಅಣ್ಯ ಸಚಿವರು ಈಗಲಾದರೂ ನನ್ನ ತಾಲೂಕಿನ ಜನರ ಕ್ಷಮೆ ಕೋರಬೇಕು' ಎಂದು ಕನಕಪುರ ಕಾಂಗ್ರೆಸ್ ಶಾಸಕ ಡಿಕೆ ಶಿವಕುಮಾರ್ ಆಗ್ರಹಿಸಿದ್ದಾರೆ.

English summary
Karnataka Forest Minister CP Yogeshwar had alleged that Congress leader DK Shivakumar is involved in Illegal quarrying within the forests of Kanakapura. But IAS Mohammed Sanaulla report has said that there is no quarrying.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X