ಪಾಕಿಸ್ತಾನಕ್ಕೆ ಎಸ್ ಬಿಐ, ಇಂಡಿಯನ್ ಬ್ಯಾಂಕ್

SBI
ನವದೆಹಲಿ, ಆ.23: ಭಾರತ ಮತ್ತು ಪಾಕಿಸ್ತಾನದ ತಲಾ ಎರಡು ಬ್ಯಾಂಕ್ ಗಳು ಪರಸ್ಪರ ವಿನಿಮಯದ ರೀತಿಯಲ್ಲಿ ಎರಡೂ ರಾಷ್ಟ್ರಗಳಲ್ಲಿ ಶಾಖೆಗಳನ್ನು ಆರಂಭಿಸಲು ಅನುಮತಿ ದೊರೆತಿದೆ. ಬ್ಯಾಂಕ್ ಸ್ಥಾಪನೆ ಅನುಮತಿ ದೊರೆತಿರುವುದಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ್ ನ ಗವರ್ನರ್ ಯಾಸೀನ್ ಅನ್ವರ್ ಹರ್ಷ ವ್ಯಕ್ತಪಡಿಸಿದ್ದಾರೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಜತೆ ನಡೆಸಿದ ಮಾತುಕತೆ ಫಲಪ್ರಧವಾಗಿದೆ. ಎರಡೂ ರಾಷ್ಟ್ರಗಳ ತಲಾ ಎರಡು ಬ್ಯಾಂಕ್ ಗಳ ಪರವಾನಿಗೆ ನೀಡುವುದಕ್ಕೆ ಸಮ್ಮತಿಸಲಾಗಿದೆ ಎಂದು ಅನ್ವರ್ ಹೇಳಿದ್ದಾರೆ. ಸಿಂಗಾಪುರ್ ನಲ್ಲಿ ದಕ್ಷಿಣ ಏಷ್ಯಾ ಅಧ್ಯಯನ ಸಂಸ್ಥೆ ಆಯೋಜಿಸಿದ್ದ ಸಮಾವೇಶವೊಂದರ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಾ ಈ ವಿಷಯವನ್ನು ಬಹಿರಂಗಗೊಳಿಸಿದರು.

ಪಾಕಿಸ್ತಾನದಲ್ಲಿ ಕಾರ್ಯಾಚರಿಸಲು ಪರವಾನಿಗೆ ಪಡೆದಿರುವ ಭಾರತದ ಎರಡು ಬ್ಯಾಂಕ್ ಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿ ಐ) ಮತ್ತು ಬ್ಯಾಂಕ್ ಆಫ್ ಇಂಡಿಯಾ (ಬಿ ಒ ಐ) ಸೇರಿವೆ.

ಇನ್ನೊಂದೆಡೆ ನ್ಯಾಷನಲ್ ಬ್ಯಾಂಕ್ ಆಫ್ ಪಾಕಿಸ್ತಾನ್ ಮತ್ತು ಅಲ್ಲಿನ ಖಾಸಗಿ ಮಾಲಕತ್ವದ ಯುನೈಟೆಡ್ ಬ್ಯಾಂಕ್ ಲಿಮಿಟೆಡ್ ಭಾರತದ ಗಡಿ ಭಾಗದಲ್ಲಿ ಪೂರ್ಣ ಪ್ರಮಾಣದಲ್ಲಿ ಬ್ಯಾಂಕಿಂಗ್ ಕಾರ್ಯಾಚರಣೆ ಆರಂಭಿಸಲಿದೆ. ಈ ಸಂಬಂಧ ಪರವಾನಿಗೆ ಪಡೆಯುವ ಪ್ರಕ್ರಿಯೆ ಕೆಲವೇ ತಿಂಗಳುಗಳಲ್ಲಿ ಪೂರ್ಣಗೊಳ್ಳಲಿವೆ ಎಂದು ಅನ್ವರ್ ಹೇಳಿದ್ದಾರೆ.

ಭಾರತದಲ್ಲಿ ಬ್ಯಾಂಕ್ ಕಾರ್ಯಾರಂಭ ಮಾಡಲು ಉತ್ಸುಕರಾಗಿದ್ದೇವೆ. ಆರ್ ಬಿಐ ಗವರ್ನರ್ ಡಿ ಸುಬ್ಬರಾವ್ ಅವರು ಈ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದು, ಬ್ಯಾಂಕಿಂಗ್ ಲೈಸನ್ಸ್ ನೀಡುವ ಭರವಸೆ ನೀಡಿದ್ದಾರೆ. ಲೈಸನ್ಸ್ ಸಿಕ್ಕರೆ ನಾಳೆಯೇ ಬ್ಯಾಂಕ್ ಆರಂಭಿಸಲು ನಾವು ಸಿದ್ಧ ಎಂದು ಅನ್ವರ್ ಹೇಳಿದರು.

ಭಾರತ ಮತ್ತು ಪಾಕಿಸ್ತಾನ ನಡುವಿನ ಆರ್ಥಿಕ ವ್ಯವಹಾರ, ಆಮದು ರಫ್ತು ನಿರಂತರವಾಗಿದ್ದು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಈ ಒಪ್ಪಂದ ಸಹಕಾರಿಯಾಗಲಿದೆ. ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿಗಳು ಇತ್ತೀಚೆಗೆ ಕರಾಚಿಗೆ ತೆರಳಿ ಕಚೇರಿ ಸ್ಥಾಪಿಸಲು ಸೂಕ್ತ ಸ್ಥಳ ಹುಡುಕಾಟ ನಡೆಸಿ ಬಂದಿದ್ದಾರೆ ಎಂದು ಸಿಂಗಪುರದಲ್ಲಿರುವ ಪಾಕಿಸ್ತಾನದ ರಾಯಭಾರಿ ಸೈಯದ್ ಹಸನ್ ಜಾವೇದ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+