ಚಿನ್ನದ ದರ ಗಗನಚುಂಬಿ, 10ಗ್ರಾಂಗೆ 31 ಸಾವಿರ ರು

ಚೆನ್ನೈ ಹಾಗೂ ದೆಹಲಿಯಲ್ಲಿ ಫ್ಯೂಚರ್ ಹಾಗೂ ಮಳಿಗೆಗಳಲ್ಲಿ ಚಿನ್ನದ ದರ 31 ಸಾವಿರ ರು ಗಡಿ ದಾಟಿದ್ದರೆ, ಉಳಿದ ಪ್ರಮುಖ ನಗರಗಳಲ್ಲಿ 30-31 ಸಾವಿರ ಗಡಿ ಹತ್ತಿರದಲ್ಲಿದೆ. ಬೆಂಗಳೂರಿನಲ್ಲಿ 24K ಚಿನ್ನದ ಬೆಲೆ 30,650 ರು ನಷ್ಟಿದೆ. 22K ಚಿನ್ನದ ಬೆಲೆ 28,500 ರು. ನಷ್ಟಿದೆ
ಉಳಿದೆಡೆಗಳಲ್ಲಿ ಈಗ ಚಿನ್ನದ ಬೆಲೆ ಗುರುವಾರ (ಆ.23) 31 ಸಾವಿರದ ಗಡಿ ದಾಟಿದೆ. ಇಂದಿನ ಆರಂಭಿಕ ಉದ್ಯಮ ವಹಿವಾಟಿನಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ರೂ. 31,029ರಷ್ಟು ದಾಖಲಾಗಿದೆ.
ರುಪಾಯಿ vs ಡಾಲರ್ ಸಮರಕ್ಕೆ ಸಿಕ್ಕು ಈಗಾಗಲೇ ರೂ. 30 ಸಾವಿರದ ಗಡಿಯನ್ನು ದಾಟಿದ್ದ ಚಿನ್ನದ ದರ ಗ್ರಾಹಕರನ್ನು ಕಂಗಾಲಾಗಿಸಿತ್ತು. ಚಿನ್ನ ತನ್ನ ಡಿಸೆಂಬರ್ ನ ಗರಿಷ್ಠ ದಾಖಲೆಯನ್ನು ಮುರಿದಿದೆ. ಕಳೆದ ಡಿಸೆಂಬರ್ ವೇಳೆ ಪ್ರತಿ 10 ಗ್ರಾಂ ಚಿನ್ನದ ಬೆಲೆ ರೂ. 30,699ರಷ್ಟು ತಲುಪಿತ್ತು.
ಕಳೆದ 16 ವಾರಗಳಲ್ಲೇ ಇಂದು ದಾಖಲೆಯ ಏರಿಕೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ವ್ಯತ್ಯಯ ಈ ಏರಿಕೆಗೆ ಕಾರಣವಾಗಿದೆ. ಕಳೆದ ಡಿಸೆಂಬರ್ ನಿಂದ ಶೇ. 1.23 ಏರಿಕೆ ಕಂಡಿದ್ದು, ಅದು ರೂ. 352ರಷ್ಟಾಗಿದೆ.
ಚಿನ್ನ ತನ್ನ ಡಿಸೆಂಬರ್ ನ ಗರಿಷ್ಠ ದಾಖಲೆಯನ್ನು ಮುರಿದಿದೆ. ಕಳೆದ ಡಿಸೆಂಬರ್ ವೇಳೆ ಪ್ರತಿ 10 ಗ್ರಾಂ ಚಿನ್ನದ ಬೆಲೆ ರೂ. 30,699ರಷ್ಟು ತಲುಪಿತ್ತು. ಕಳೆದ 16 ವಾರಗಳಲ್ಲೇ ಇಂದು ದಾಖಲೆಯ ಏರಕೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ವ್ಯತ್ಯಯ ಈ ಏರಿಕೆಗೆ ಕಾರಣವಾಗಿದೆ. ಕಳೆದ ಡಿಸೆಂಬರ್ ನಿಂದ ಶೇ. 1.23 ಏರಿಕೆ ಕಂಡಿದ್ದು, ಅದು ರೂ. 352ರಷ್ಟಾಗಿದೆ.
ಜೂನ್ ತಿಂಗಳಿನಲ್ಲಿ 10 ಗ್ರಾಂ. ಚಿನ್ನದ ಬೆಲೆ 30 ಸಾವಿರ ದಾಟಿ ದಾಖಲೆ ಬರೆದಿತ್ತು. ಅಮೆರಿಕದಲ್ಲಿ ಭಯಾನಕವಾಗಿ ಕಾಡುತ್ತಿರುವ ನಿರುದ್ಯೋಗ ಸಮಸ್ಯೆ ಮತ್ತು ಯುರೋಪಿನಲ್ಲಿ ಎದುರಾಗಿರುವ ಆರ್ಥಿಕ ಬಿಕ್ಕಟ್ಟಿನ ಪರಿಣಾಮ ಜಾಗತಿಕ ಮಾರುಕಟ್ಟೆಯ ಮೇಲೆ ಆಗುತ್ತಿದೆ. ಬಂಡವಾಳ ಹೂಡಿಕೆದಾರರಿಂದ ಹೆಚ್ಚುತ್ತಿರುವ ಬೇಡಿಕೆಯೂ ಚಿನ್ನದ ಬೆಲೆಯ ಮೇಲೆ ಆಗುತ್ತಿದೆ.












Click it and Unblock the Notifications