ಯಡಿಯೂರಪ್ಪ ಸೂರ್ಯನಂತೆ; ಸದಾನಂದ ಬಲ್ಬು: ರೇಣುಕಾ

ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಯುವುದು ಖಚಿತವಾಗುತ್ತಿದ್ದಂತೆ ಯಡಿಯೂರಪ್ಪ ಬಣದ ವಿರುದ್ಧ ಕಿಡಿಕಾರುವುದನ್ನೇ ಕಾಯಕವಾಗಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರು ಮೊನ್ನೆಯಷ್ಟೇ ಯಡಿಯೂರಪ್ಪ ಪಟಾಲಂ ಅನ್ನು 'ಬೀದಿ ನಾಯಿಗಳು' ಎಂದು ಸಂಬೋಧಿಸಿದ್ದರು.
ಅದಾದನಂತರ... ಯಡಿಯೂರಪ್ಪಗೆ ಅಖಂಡ ನಿಷ್ಠೆ ತೋರಿ ಖುದ್ದು ಅವರಿಗೇ ಮುಜುಗುರವಾಗುವಷ್ಟು ವಾಚಾಮಗೋಚರ ಹೊಗಳುತ್ತಿದ್ದ ಹರಿಹರದ ಶಾಸಕ ಬಿಪಿ ಹರೀಶ್ ಅವರಿಗೆ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ದಯಪಾಲಿಸಲಾಗಿದೆ.
ಹಾಗೆಯೇ, ಮತ್ತಷ್ಟು ಯಡಿಯೂರಪ್ಪ ನಿಷ್ಠರಿಗೆ ಶೆಟ್ಟರ್ ಸರಕಾರದಲ್ಲಿ ಸೂಕ್ತ ಸ್ಥಾನಮಾನಗಳುಸಂದಾಯವಾಗಿದೆ. ಜತೆಗೆ, ಯಡಿಯೂರಪ್ಪನವರು ತಮ್ಮ ಮೂವರು ನಿಷ್ಠರನ್ನು ಮೇಲ್ಮನೆ ಸೇರುವಂತೆಯೂ ನೋಡಿಕೊಂಡಿದ್ದಾರೆ.
ಸದಾನಂದ ಗೌಡರಿಗೆ ಇಷ್ಟು ಸಾಕಾಗಿತ್ತು. ಹಾಗಾಗಿ, 'ಯಡಿಯೂರಪ್ಪ ಪಟಾಲಂಗೇ ಎಲ್ಲ ಸ್ಥಾನಮಾನಗಳೂ ಸಿಗುತ್ತಿವೆ. ಪಕ್ಷದಲ್ಲಿ ಬೇರೆ ಯಾರೂ ಇಲ್ಲವಾ?. ಅದೆಲ್ಲಾ ಒತ್ತಟ್ಟಿಗಿರಲಿ ಅಂದರೆ ತಮ್ಮ ಬೆಂಬಲಿಗ ಸಚಿವರಿಗೂ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ' ಎಂದು ಗೌಡರು ಘರ್ಜಿಸಿದ್ದಾರೆ.
ಸಿಎಂ ಶೆಟ್ಟರ್ ಕೂಡಲೇ ಈ ನ್ಯೂನತೆ ಸರಿಪಡಿಸದಿದ್ದಲ್ಲಿ ವರಿಷ್ಠರ ಮೊರೆ ಹೋಗಲು ಮತ್ತು ಈ ಕುರಿತು ಸದ್ಯದಲ್ಲೇ ತಮ್ಮ ನಿಷ್ಠರ ಸಭೆ ನಡೆಸಲು ಸದಾನಂದ ಗೌಡರು ಸಜ್ಜಾಗುತ್ತಿದ್ದಾರೆ. ಇದರೊಂದಿಗೆ ಆಡಳಿತಾರೂಢ ಬಿಜೆಪಿ ಮತ್ತೊಮ್ಮೆ ಗುಂಪುಗಾರಿಕೆ ಸಂಕಷ್ಟಕ್ಕೆ ಸಿಲುಕುವ ಲಕ್ಷಣಗಳಿವೆ.











Click it and Unblock the Notifications