ಪರೀಕ್ಷೆಯಲ್ಲಿ ಫೇಲ್, ವಿದ್ಯಾರ್ಥಿನಿ ನೇಣಿಗೆ ಶರಣು

ಅರಸೀಕೆರೆ ತಾಲೂಕಿನ ಕಬ್ಬೂರಹಳ್ಳಿ ಗ್ರಾಮದ ನಿವಾಸಿ ನಾಗರತ್ನ ಎಂಬ 21 ವರ್ಷದ ಯುವತಿ, ಚಿಕ್ಕಮಗಳೂರಿನ ಆದಿಚುಂಚನಗಿರಿ ಇನ್ ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ನಾಲ್ಕನೇ ಸೆಮಿಸ್ಟರ್ ಓದುತ್ತಿದ್ದಳು. ಆದರೆ, ಇತ್ತೀಚೆಗೆ ನಡೆದ ಕಂಪ್ಯೂಟರ್ ಸೈನ್ಸ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದಳು. ಇದಕ್ಕೂ ಮುನ್ನ ಸುಮಾರು 5 ಸಬ್ಜೆಕ್ಟ್ ಬ್ಯಾಕ್ ಇರಿಸಿಕೊಂಡಿದ್ದ ನಾಗರತ್ನಳಿಗೆ ಇಂಜಿನಿಯರಿಂಗ್ ಕಬ್ಬಿಣದ ಕಡಲೆಯಾಗಿ ಪರಿಣಮಿಸಿತ್ತು.
ಅದರೆ, ಖಾಸಗಿ ಟ್ಯೂಷನ್ ಪಡೆಯಲು ಸರಿಯಾದ ಆರ್ಥಿಕ ನೆರವು ದೊರಯದೆ ಚಿಂತೆಗೀಡಾಗಿದ್ದ ನಾಗರತ್ನ, ತನ್ನ ಸಮಸ್ಯೆಯನ್ನು ಯಾರ ಬಳಿಯೂ ಹೇಳಿಕೊಂಡಿರಲಿಲ್ಲ.
ಫೇಲ್ ಆಗಿದ್ದಕ್ಕೆ ತೀವ್ರವಾಗಿ ಮನನೊಂದ ವಿದ್ಯಾರ್ಥಿನಿ ನಾಗರತ್ನ ತನ್ನ ಹಾಸ್ಟೆಲ್ ನಲ್ಲಿ ಒಂಟಿಯಾಗಿ ಕೆಲ ಕಾಲ ಕಾಲ ಕಳೆದಿದ್ದಾಳೆ. ಅಧ್ಯಾಪಕರು ಹಾಗೂ ಸಹಪಾಠಿಗಳಿಂದ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ತನ್ನೂರಿಗೆ ತೆರಳಿದ್ದಾಳೆ.
ಆದರೆ, ಕಳೆದ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅರಸೀಕೆರೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಿದ್ದಾರೆ. ನಾಗರತ್ನ ಯಾವುದೇ ಸೂಸೈಡ್ ನೋಟ್ ಬರೆದಿಲ್ಲ ಎನ್ನಲಾಗಿದೆ.
ಕೊಳ್ಳೆಗಾಲ: ಮಹಾರಾಷ್ಟ್ರದಿಂದ ಪ್ರವಾಸಕ್ಕೆಂದು ಬೆಂಗಳೂರಿಗೆ ಬಂದಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಭರಚುಕ್ಕಿ ಫಾಲ್ಸ್ ನೋಡಲು ಹೋಗಿದ್ದಾನೆ. ಆದರೆ, ನೀರಿನ ಸೆಳೆತಕ್ಕೆ ಸಿಕ್ಕು ದುರಂತ ಸಾವನ್ನಪ್ಪಿದ್ದಾನೆ.
ಮಹಾರಾಷ್ಟ್ರದ ಸೊಲ್ಲಾಪುರದ ನಿವಾಸಿ ಶಾನ್ ಮಧುಶೆಟ್ಟಿ(20) ತನ್ನ ಸಹಪಾಠಿಗಳ ಜೊತೆ ಬೆಂಗಳೂರು ಪ್ರವಾಸಕ್ಕೆ ಬಂದಿದ್ದಾನೆ. ಸುಮಾರು 40 ಜನ ವಿದ್ಯಾರ್ಥಿಗಳು ಒಟ್ಟಿಗೆ ಪ್ರವಾಸಕ್ಕೆ ಬಂದಿದ್ದರು. ಸಹಪಾಠಿಗಳು ನೀರಿಗಿಳಿದು ಆಟವಾಡುವುದನ್ನು ಕಂಡು ಮಧುಶೆಟ್ಟಿ ಕೂಡಾ ನೀರಿಗಿಳಿದಿದ್ದಾನೆ. ಮಧುಶೆಟ್ಟಿಗೆ ಈಜಾಟವಾಡಲು ಬರುತ್ತಿರಲಿಲ್ಲ.
ನೀರಿನ ಸೆಳೆತ ಹೆಚ್ಚಾದ ಕಡೆ ಕಾಲು ಜಾರಿದ ಶೆಟ್ಟಿ ಮತ್ತ್ ದೊರೆತಿದ್ದು ಶವವಾಗಿ ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications