• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಐಶೂ ಸೌಂದರ್ಯದ ಲಾಭ ಪಡೆದ ಕಲ್ಯಾಣ್

By Mahesh
|
ಕೊಚ್ಚಿ, ಆ.20: ಮದುವಣಗಿತ್ತಿಯಂತೆ ಆಭರಣಯುಕ್ತ ಐಶ್ವರ್ಯಾ ರೈ ಚಿತ್ರಗಳು ಎಲ್ಲೆಡೆ ಕ್ರೇಜ್ ಹುಟ್ಟಿಸುತ್ತಿದೆ. ಭಾನುವಾರ (ಆ.19) ಕೂಡಾ ಕೊಚ್ಚಿಯಲ್ಲಿ ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್ ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನಪ್ರವಾಹ ಹರಿದು ಬಂದಿತ್ತು.

ಆದರೆ, ಮದುವಣಗಿತ್ತಿ ಡ್ರೆಸ್ ನಲ್ಲಿರುವ ಐಶ್ವರ್ಯಾ ಅವರ ಫೋಟೊ ಹೊಸದೋ, ಹಳೆಯದೋ ಎಂಬ ಚರ್ಚೆ ನಡೆದಿದೆ. ಅದು ಹಾಗಿರಲಿ, ಐಶ್ವರ್ಯಾ ಅವರ ಸೌಂದರ್ಯಕ್ಕೆ ಚೆಂದದ ನಾಡು ಕೇರಳ ಮರುಳಾಗಿದೆ.

ಮದುವೆ, ಮಗು ಆದ ಮೇಲೆ ಐಶ್ವರ್ಯಾ ರೈ ಅವರ ಬ್ರಾಂಡ್ ಮೌಲ್ಯ ಕುಸಿತವಾಗಿದೆ ಎಂಬ ಸುದ್ದಿ ಬೆನ್ನಲ್ಲೇ ಕಲ್ಯಾಣ್ ಜ್ಯುವೆಲ್ಲರೀಸ್ ಐಶ್ವರ್ಯಾ ಹಾಗೂ ಅವರ ಮಾವ ಬಿಗ್ ಬಿ ಅಮಿತಾಬ್ ಅವರನ್ನು ತನ್ನ ಸಂಸ್ಥೆಯ ಉತ್ಪನ್ನಗಳಿಗೆ ರಾಯಭಾರಿಯಾಗಿ ನೇಮಿಸಿ ಅಚ್ಚರಿ ಮೂಡಿಸಿತ್ತು.

ಕಲ್ಯಾಣ್ ಜುವೆಲ್ಲರಿ ಈ ನಡೆ ಮಾರುಕಟ್ಟೆಯಲ್ಲಿ ಅಚ್ಚರಿ ಮೂಡಿಸಿತ್ತು. ಆದರೆ, ಐಶ್ವರ್ಯಾ ರೈ ಬಗ್ಗೆ ಇರುವ ಕ್ರೇಜ್ ಕಂಡು ಕಲ್ಯಾಣ್ ಸಂಸ್ಥೆ ಮೂಕವಿಸ್ಮಿತವಾಗಿದೆ. ಕೊಚ್ಚಿಯಲ್ಲಿ ಆಭರಣ ಮಳಿಗೆ ಉದ್ಘಾಟನೆಗೆ ಬಂದಿದ್ದ ಐಶ್ವರ್ಯಾ ರೈ ಅವರನ್ನು ಕಾರಿನಿಂದ ಮಳಿಗೆ ತನಕ ಕರೆದು ತರುವಷ್ಟರಲ್ಲಿ ಆಯೋಜಕರು ಸಾಕಷ್ಟು ಬೆವರು ಹರಿಸಬೇಕಾಯಿತು. ಅಬು ಸಂದೀಪ್ ವಿನ್ಯಾಸ ಲೆಹಂಗಾ ತೊಟ್ಟಿದ್ದ ಐಶ್ವರ್ಯಾ ಅವರ ಜೊತೆ ಮಲೆಯಾಳಂ ಸೂಪರ್ ಸ್ಟಾರ್ ದಿಲೀಪ್ ಅವರು ಕಾರ್ಯಕ್ರಮ ಉದ್ಘಾಟಿಸಿದರು.

ಐಶ್ವರ್ಯಾ ರೈ ಇರುವ ಕಲ್ಯಾಣ್ ಜಾಹೀರಾತು 4 ದಿನಗಳಲ್ಲಿ 2 ಲಕ್ಷ ವೀಕ್ಷಕರನ್ನು ಸೆಳೆದು ದಾಖಲೆ ಬರೆದಿರುವ ಖುಷಿಯಲ್ಲೇ ತ್ರಿಸ್ಸೂರ್ ಮೂಲದ ಕಲ್ಯಾಣ್ ಜುವೆಲ್ಲರಿ ಸಂಸ್ಥೆ 1000ಕ್ಕೂ ಅಧಿಕ ಕೋಟಿ ರು ಬಂಡವಾಳ ಹೂಡಿಕೆ ಮಾಡುವುದರ ಜೊತೆಗೆ 15 ಶೋ ರೂಮ್ ಆರಂಭಿಸುವುದಾಗಿ ಘೋಷಿಸಿದೆ.

ಮೊದಲ ಹಂತದಲ್ಲಿ ಗುಜರಾತ್, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕೇರಳದಲ್ಲಿ ಮಳಿಗೆಗಳು ಅರಂಭವಾಗಲಿದೆ. ನಂತರ ವಾರಂಗಲ್, ಕುಕ್ಕಟ್ ಪಲ್ಲಿ(ಹೈದರಾಬಾದ್), ಕಾಂಚೀಪುರಂ, ಕಾಕಿನಾಡ ಹಾಗೂ ಅಹಮದಾಬಾದ್ ನಲ್ಲಿ ಮಳಿಗೆ ತೆರೆಯಲಾಗುತ್ತದೆ. ಮುಂದಿನ ಹಂತದಲ್ಲಿ ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಹೊಸ ಮಳಿಗೆಗಳು ಅರಂಭವಾಗಲಿದೆ. 2015ರ ವೇಳೆಗೆ 100ಕ್ಕೂ ಅಧ್ಕ ಹೊಸ ಶೋ ರೂಮ್ ಸೇರ್ಪಡೆಯಾಗಲಿದೆ ಎಂದು ಸಂಸ್ಥೆ ಪ್ರಕಟಿಸಿದೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ 16,000 ಕೋಟಿ ರು ಆದಾಯದ ನಿರೀಕ್ಷೆಯಿದೆ. ಕಳೆದ ಆರ್ಥಿಕ ವರ್ಷದಲ್ಲಿ 9,473 ಕೋಟಿ ರು ಗಳಿಸಲಾಗಿತ್ತು. ಮೊದಲ ತ್ರೈಮಾಸಿಕದಲ್ಲಿ 2,915 ಕೋಟಿ ಮಾರಾಟ ದಾಖಲಿಸಲಾಗಿದೆ. ಪ್ರಸ್ತುತ ನಮ್ಮ ಸಂಸ್ಥೆ ಸುಮಾರು 7 ಲಕ್ಷ ಗ್ರಾಹಕರನ್ನು ಹೊಂದಿದೆ ಎಂದು ಕಲ್ಯಾಣ್ ಜುವೆಲ್ಲರೀಸ್ ಸಂಸ್ಥೆ ಮುಖ್ಯಸ್ಥ ಟಿಎಸ್ ಕಲ್ಯಾಣ್ ರಾಮನ್ ಹೇಳಿದ್ದಾರೆ.

ಸುಮಾರು 100 ವರ್ಷ ಇತಿಹಾಸವುಳ್ಳ ಕಲ್ಯಾಣ್ ಜುವೆಲ್ಲರಿ ಸಂಸ್ಥೆಯ 20,000 ಚದರ ಅಡಿ ವಿಸ್ತೀರ್ಣದ 36ನೇ ಆಭರಣ ಮಳಿಗೆಯನ್ನು ಐಶ್ವರ್ಯಾ ರೈ ಬಚ್ಚನ್ ಸಾರ್ವಜನಿಕರಿಗೆ ಮುಕ್ತಗೊಳಿಸಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಆಭರಣ ಸುದ್ದಿಗಳುView All

English summary
Thrissur-based Kalyan Jewellers plan to sign up two mega superstars Amitabh Bachchan and Aishwarya Rai Bachchan as brand ambassadors working well. Kochi was stunned by Aishwarya Rai Bachchan's beauty, who created a mass hysteria during the inuguration of jewellers store.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more