• search

ಸೌದಿ ಅರೇಬಿಯಾ: ಮಹಿಳೆಯರಿಗಾಗಿಯೇ ಪ್ರತ್ಯೇಕ ನಗರ

By Srinath
Subscribe to Oneindia Kannada
For Quick Alerts
ALLOW NOTIFICATIONS
For Daily Alerts
  saudi-arabia-plans-to-build-exclusive-city-for-women
  ಲಂಡನ್, ಆ. 13: ಬಹುಶಃ no man's land ಅಂದರೆ ಇದೇ ಆಗಬಹುದಾ!? ವೃತ್ತಿಜೀವನದಲ್ಲಿ ಮುಂದೆಬರಬೇಕೆಂಬ ಮಹತ್ತರ ಆಸೆಹೊತ್ತ ಮಹಿಳೆಯರನ್ನು ಉತ್ತೇಜಿಸುವ ಸಲುವಾಗಿ ಷರಿಯಾ ಕಾನೂನಿಗೆ ಅನುಗುಣವಾಗಿ ಸೌದಿ ಅರೇಬಿಯಾದಲ್ಲಿ ಪ್ರತ್ಯೇಕ ನಗರವೊಂದನ್ನು ನಿರ್ಮಿಸುವ ಸ್ತುತ್ಯರ್ಹ ಕೆಲಸಕ್ಕೆ ಸರಕಾರ ಮುಂದಾಗಿದೆ.

  ಸೌದಿ ಇಂಡಸ್ಟ್ರಿಯಲ್ ಪ್ರಾಪರ್ಟಿ ಅಥಾರಿಟಿ ಈ ಮಹತ್ವಾಕಾಂಕ್ಷಿ ನಗರ ನಿರ್ಮಾಣಕ್ಕೆ ಮುಂದಿನ ವರ್ಷ ಚಾಲನೆ ನೀಡಲಿದೆ. ಇಂತಹ all-women ನಗರವನ್ನು ಅತ್ಯಾಧುನಿಕ ರೀತಿಯಲ್ಲಿ ನಿರ್ಮಿಸಲು ಈಗಾಗಲೇ ರೂಪುರೇಶೆಗಳು ಸಿದ್ಧಗೊಂಡಿವೆ. ಅತಿ ಕಠಿಣವಾದ ಇಸ್ಲಾಂ ಧರ್ಮದ ಕಾನೂನು ಆಚರಣೆಗಳಿಗೆ ಯಾವುದೇ ಚ್ಯುತಿ ಬಾರದ ಹಾಗೆ ಮಹಿಳೆಯರು ಇಲ್ಲಿ ಕೆಲಸ ಕಾರ್ಯಗಳಲ್ಲಿ ತೊಡಗಬಹುದಾಗಿದೆ.

  ಅಪರಾಧ, ರಾಜಕೀಯ, ಆರ್ಥಿಕತೆ ಮತ್ತು ಇವುಗಳ ಜತೆಗೆ ಸಂಭೋಗ, ನೈರ್ಮಲ್ಯ, ಆಹಾರ ಪದ್ಧತಿ, ಪ್ರಾರ್ಥನೆ ಮತ್ತು ಉಪವಾಸದಂತಹ ಮುಖ್ಯ ವೈಯಕ್ತಿಕ ವಿಷಯಗಳಲ್ಲಿ ಇಸ್ಲಾಂ ಧರ್ಮ ಪಾಲಿಸುವ ಷರಿಯಾ ಕಾನೂನು ಕಟ್ಟಳೆಗಳಿಗೆ ಚ್ಯುತಿ ಬಾರದ ರೀತಿಯಲ್ಲಿ ಈ ಹೊಸ ನಗರದಲ್ಲಿ ಆಡಳಿತವನ್ನು ಜಾರಿಗೆ ತರಲು ಸಿದ್ಧತೆಗಳು ನಡೆದಿವೆ.

  ಕುತೂಹಲದ ಸಂಗತಿಯೆಂದರೆ ಸೌದಿ ಅರೇಬಿಯಾದ ಷರಿಯಾ ಕಾನೂನಿನಲ್ಲಿ ಮಹಿಳೆಯರು ಕೆಲಸ ಮಾಡುವುದನ್ನು ನಿಷೇಧಿಸಲಾಗಿದೆ. ಪ್ರಸ್ತುತ ಸೌದಿ ಅರೇಬಿಯಾದದಲ್ಲಿ ಒಟ್ಟಾರೆ ಉದ್ಯೋಗಿಗಳ ಪೈಕಿ ಕೇವಲ ಶೇ. 15ರಷ್ಟು ಮಾತ್ರವೇ ಮಹಿಳೆಯರಿದ್ದಾರೆ.

  ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಮಹಿಳೆಯರೂ ಸಕ್ರಿ ಮತ್ತು ಸಕಾರಾತ್ಮಕ ಪಾತ್ರ ನಿಭಾಯಿಸಬೇಕು ಎಂಬ ಸರಕಾರದ ಧ್ಯೇಯೋದ್ದೇಶದೊಂದಿಗೆ ಈ ಹೊಸ ನಗರ ನಿರ್ಮಾಣಕ್ಕೆ ಕೈಹಾಕಲಾಗಿದೆ. ಆದರೆ ಅದು ನಿಜಕ್ಕೂ ಪುರುಷನ ನೆರಳೂ ಬೀಳದ ನಾಡಾಗುತ್ತದೆಯೇ!?

  ಪ್ರಮೀಳಾ ನಗರ ನನಸಾಗುವುದೇ?: ಅವಕಾಶ ದೊರೆತಲ್ಲಿ ಮಹಿಳೆಯರು ಅನೇಕ ಕ್ಷೇತ್ರಗಳಲ್ಲಿ ತಮ್ಮ ಶಕ್ತಿ ಸಾಮರ್ಥ್ಯವನ್ನು ರುಜುವಾತುಪಡಿಸುವಲ್ಲಿ ಯಾವುದೇ ಅನುಮಾನವಿಲ್ಲ. ಅದರಲ್ಲಿ ಆಧುನಿಕ ಕೈಗಾರಿಕೆಗಳು ಮಹಿಳೆಯರಿಗೆ ಹೇಳಿ ಮಾಡಿಸಿದ ಉದ್ಯೋಗ ತಾಣಗಳಾಗಲಿವೆ ಎಂದು ಸೌದಿ ಇಂಡಸ್ಟ್ರಿಯಲ್ ಪ್ರಾಪರ್ಟಿ ಅಥಾರಿಟಿಯ ಉಪ ಮಹಾನಿರ್ದೇಶಕ ಸಲೇ ಅಲ್ ರಶೀದ್ ಅಭಿಪ್ರಾಯಪಟ್ಟಿದ್ದಾರೆ. ಸೌದಿಯ ಅನೇಕ ಭಾಗಗಳಲ್ಲಿ ಈಗಾಗಲೇ ಕೇವಲ ಮಹಿಳೆಯರೇ ಇರುವ ಅನೇಕ ಕೈಗಾರಿಕೆಗಳನ್ನು ನಿರ್ಮಿಸಲಾಗಿದೆ ಎಂದೂ ಅವರು ತಿಳಿಸಿದರು.

  2015ರ ಸ್ಥಳೀಯಾಡಳಿತ ಚುನಾವಣೆಗಳಲ್ಲಿ ಮಹಿಳೆಯರು ಮತದಾನ ಮಾಡಲು ಸಶಕ್ತರಾಗಲಿದ್ದು, ಆಡಳಿತದ ಚುಕ್ಕಾಣಿಯನ್ನೂ ಹಿಡಿಯಬಲ್ಲವರಾಗಲಿದ್ದಾರೆ ಎಂದು ದೊರೆ ಅಬ್ದುಲ್ಲಾ ಕಳೆದ ಸೆಪ್ಟೆಂಬರಿನಲ್ಲಿ ಹೇಳಿದ್ದರು. ಅದಕ್ಕೆ ತಕ್ಕಂತೆ ಈಗ ಮಹಿಳೆಯರನ್ನು ಹೆಚ್ಚು ಸಶಕ್ತಗೊಳಿಸಲು ದೊರೆ ಅಬ್ದುಲ್ಲಾ ಆಡಳಿತ ಇಂತಹ ಕ್ರಮಗಳನ್ನು ಕೈಗೊಂಡಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Saudi Arabia is planning to build a city exclusively for women in a bid to encourage career oriented females within its strict Sharia law. The plan coincides with the government's ambitions to get women to play a more active part in the development of the country. Among the stated objectives are to create jobs, particularly for younger women.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more