ದುಬೈನಿಂದ ಎನ್ನಾರೈಗಳು ಹೆಚ್ಚು ಹೆಚ್ಚು ಚಿನ್ನ ತರಬಹುದು

import-duty-revision-nri-may-carry-more-gold-to-india
ದುಬೈ, ಆ. 13: ಇತ್ತ ಭಾರತದಲ್ಲಿ ಚಿನ್ನ ಗಗನಕ್ಕೆ ತಲುಪಿರುವ ಕಾಲದಲ್ಲಿ ದುಬೈನಿಂದ ಅನಿವಾಸಿ ಭಾರತೀಯರು (ಎನ್ನಾರೈಗಳು) ಇನ್ಮುಂದೆ ಹೆಚ್ಚು ಚಿನ್ನ ತರುವುದಕ್ಕೆ ಅವಕಾಶ ನೀಡುವ ಪ್ರಸ್ತಾವನೆಯಿದೆ. ಈ ಸಂಬಂಧ ಆಮದು ಸುಂಕವನ್ನು ಕಡಿಮೆ ಮಾಡಲು ಭಾರತೀಯ ರಾಯಭಾರ ಕಚೇರಿ ಮುಂದಾಗಿದೆ.

1998ರ ಸುಂಕ ಕಾನೂನು ಪ್ರಕಾರ ವಿದೇಶದಿಂದ ಆಗಮಿಸುವ ಭಾರತೀಯರು 6 ಗ್ರಾಂಗಿಂತ ಹೆಚ್ಚು ಚಿನ್ನವನ್ನು ತರುವಂತಿಲ್ಲ. ಅಂದರೆ ಪುರುಷರು ಕೇವಲ ಮೂರು ಗ್ರಾಂ (10 ಸಾವಿರ ರೂ. ಮೌಲ್ಯ) ಚಿನ್ನಾಭರಣ ಮತ್ತು ಮಹಿಳೆಯರು 6 ಗ್ರಾಂ ಚಿನ್ನಾಭರಣವನ್ನು (20 ಸಾವಿರ ರೂ. ಮೌಲ್ಯ) ಮಾತ್ರವೇ ಭಾರತಕ್ಕೆ ಕೊಂಡೊಯ್ಯಬಹುದು. ಆದರೆ ಹೆಚ್ಚು ಚಿನ್ನ ತೆಗೆದುಕೊಂಡು ಹೋಗಬೇಕೆಂದರೆ ಅದಕ್ಕೆ ತಕ್ಕಷ್ಟು ಹೆಚ್ಚು ಸುಂಕ ಪಾವತಿ ಎಷ್ಟು ಬೇಕಾದರೂ ಚಿನ್ನವನ್ನು ಭಾರತಕ್ಕೆ ತೆಗೆದುಕೊಂಡು ಹೋಗಬಹುದು.

ಇದರಿಂದ ಅನಿವಾಸಿ ಭಾರತೀಯರು ಹೆಚ್ಚು ಚಿನ್ನ ತರುವುದಕ್ಕೆ ಧಕ್ಕೆಯೊದಗಿದ್ದು, ಆಮದು ಸುಂಕವನ್ನು ಕಡಿಮೆ ಮಾಡುವಂತೆ ಅನೇಕ ಭಾರತೀಯ ಸಮುದಾಯ ಒಕ್ಕೂಟಗಳು ಮತ್ತು ಅನಿವಾಸಿ ಭಾರತೀಯ ಸಂಘಗಳು ಸಲ್ಲಿಸಿರುವ ಮನವಿಯನ್ನು ಮನ್ನಿಸಿ ಕೊಲ್ಲಿ ಸರಕಾರಕ್ಕೆ ಮನವಿ ಮಾಡಲಾಗಿದೆ ಎಂದು ದುಬೈ ಮತ್ತು ಉತ್ತರ ಕೊಲ್ಲಿ ರಾಷ್ಟ್ರಗಳ ಕಾನ್ಸುಲ್ ಜನರಲ್ ಸಂಜಯ್ ವರ್ಮಾ ತಿಳಿಸಿದ್ದಾರೆ.

ಗಮನಾರ್ಹವೆಂದರೆ ಆಮದು ಸುಂಕ ನೀತಿ ಜಾರಿಗೊಳಿಸಿದಾಗ 1998ರ ಏಪ್ರಿಲ್ ತಿಂಗಳಲ್ಲಿ 1 ಗ್ರಾಂ ಚಿನ್ನಕ್ಕೆ 392 ರುಪಾಯಿಯಿತ್ತು. ಅದರ ಬೆಲೆ ಇಂದು 2900 ರುಪಾಯಿ ತಲುಪಿದೆ. ಅದೇ 1998ರಲ್ಲಿ ಪುರುಷರು ತಲಾ 25.4 ಗ್ರಾಂ ಚಿನ್ನವನ್ನು (ಹಾಗೆಯೇ, ಮಹಿಳೆಯರು 50 ಗ್ರಾಂ) ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗಿತ್ತು. ಆದರೆ ಕಾಲಾಂತರದಲ್ಲಿ ಆ ಪ್ರಮಾಣ 3 ಗ್ರಾಂಗೆ ಇಳಿದಿದೆ.

ಈ ಮಧ್ಯೆ, ದುಬೈನಲ್ಲಿ ನೆಲೆಸಿರುವ ಭಾರತೀಯರ ಕ್ಷೇಮಾಭ್ಯುದಯ ಸಂಘವು ನೇರವಾಗಿ ನೂತನ ಹಣಕಾಸು ಸಚಿವ ಚಿದಂಬರಂ ಅವರಿಗಹೆ ಪತ್ರ ಬರೆದಿದ್ದು 98ರ ಹಳೆಯ ಕಾನೂನನ್ನು ಕಿತ್ತೊಗೆಯುವಂತೆ ಮನವಿ ಮಾಡಿದೆ. ಅದಕ್ಕೂ ಮುನ್ನ, 1960ರಲ್ಲಿ ಪುರುಷರು ಭಾರತದೊಳಕ್ಕೆ 250 ಗ್ರಾಂ ಚಿನ್ನವನ್ನು ಹೊತ್ತುತರಬಹುದಿತ್ತು.

ಆಗ ಚಿನ್ನ ಒಂದು ಗ್ರಾಂಗೆ 40 ರುಪಾಯಿ ತೂಗುತ್ತಿತ್ತು. ಅನಿವಾಸಿ ಭಾರತೀಯರು ಭಾರತದೊಳಕ್ಕೆ ಹೆಚ್ಚು ಹೆಚ್ಚು ಚಿನ್ನವನ್ನು ತರುವುದಕ್ಕೆ ಪ್ರೇರೇಪಿಸುವುದು ಬಿಟ್ಟು ಅವರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಒಕ್ಕೂಟದ ಪದಾಧಿಕಾರಿಗಳು ದೂರಿದ್ದಾರೆ.

ಕೆಲವು ವ್ಯಾಪಾರಸ್ಥರು ಹೇಳುವಂತೆ ಸುಂಕದ ಅಧಿಕಾರಿಗಳು ವಿದೇಶದಿಂದ ಚಿನ್ನ ಹೊತ್ತುತರುವ ಎನ್ನಾರೈಗಳನ್ನು ಹೆಚ್ಚು ತಪಾಸಣೆಗೆ ಗುರಿಪಡಿಸುತ್ತಾರೆ. ಹೆಚ್ಚು ಸುಂಕ ಕಟ್ಟುವಂತೆ ತಾಕೀತು ಮಾಡುತ್ತಾರೆ. ಇಲ್ಲವೇ, ಲಂಚ ಪಡೆದು ಚಿನ್ನ ಸಾಗಣೆಗೆ ಅವಕಾಶ ನೀಡಿರುತ್ತಾರೆ.

ಇನ್ನು ಕೆಲವುರು ಇದ್ಯಾವ ಗೊಡವೆಯೂ ಬೇಡವೆಂದು ಅಕಸ್ಮಾತ್ ಹೆಚ್ಚಿನ ಚಿನ್ನ ತಂದಿದ್ದರೆ ಅದನ್ನು ಕಸ್ಟಮ್ಸ್ ಕಚೇರಿಯಲ್ಲೇ ಜಮೆ ಮಾಡಿ, ಭಾರತದಿಂದ ಮರಳಿ ಹೋಗುವಾಗ ಆ ಚಿನ್ನವನ್ನು ವಾಪಸು ತೆಗೆದುಕೊಂಡು ಹೋಗುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+