ಭೀಕರ ಕಾರು ಅಪಘಾತ: 5 ಟೆಕ್ಕಿಗಳ ಸಜೀವ ದಹನ

ಶುಕ್ರವಾರ ಈ ಐದೂ ಮಂದಿ ಸಾಫ್ಟ್ ವೇರ್ ಇಂಜಿನಿಯರುಗಳು ತಮ್ಮ ಶೆವರ್ಲೆಟ್ ಕಮರೊ ಕಾರಿನಲ್ಲಿ ತೆರಳುತ್ತಿದ್ದಾಗ ಟ್ರಾಕ್ಟರ್-ಟ್ರೈಲರ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಪಲ್ಟಿ ಹೊಡೆದ ಕಾರು ಅನತಿ ದೂರ ಜಾರಿಕೊಂಡು ಹೋಗಿದೆ. ಆ ಸಮಯದಲ್ಲಿ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡು ಅದರಲ್ಲಿ ಐದೂ ಮಂದಿ ಟೆಕ್ಕಿಗಳು ಸುಟ್ಟು ಕರಕಲಾಗಿದ್ದಾರೆ.
ಜಸ್ವಂತ ರೆಡ್ಡಿ ಸುಬ್ಬಯ್ಯಗಾರಿ, ಫಣೀಂದ್ರ ಗಡೆ, ಅನುರಾಗ ಅಂತತಿ, ಶ್ರೀನಿವಾಸ ರವಿ ಮತ್ತು ವೆಂಕಟ್ ಮೃತಪಟ್ಟವರು ಎಂದು ಉತ್ತರ ಅಮೆರಿಕದ ತೆಲುಗು ಒಕ್ಕೂಟದ ಮೂಲಗಳಿಂದ ತಿಳಿದುಬಂದಿದೆ. ಮೃತರ ಪೈಕಿ ವೆಂಕಟ್ ಮಾತ್ರ ವಿವಾಹಿತರು.
ಮೃತ ದೇಹಗಳನ್ನು ಭಾರತಕ್ಕೆ ಕಳಿಸಿಕೊಡಲು TANA ಒಕ್ಕೂಟವು ಸ್ಥಳೀಯ ಪೊಲೀಸರೊಂದಿಗೆ ಸಹಕರಿಸುತ್ತಿದೆ ಎಂದು TANA ಅಧ್ಯಕ್ಷ ಪ್ರಸಾದ್ ತೋಟಕೂರ ತಿಳಿಸಿದ್ದಾರೆ.












Click it and Unblock the Notifications