• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲೈಸನ್ ಇಲ್ಲದಿದ್ರೆ ನೋ ವಿಕೇಂಡ್ ಪಾರ್ಟಿ: ಮಿರ್ಜಿ

By Mahesh
|

ಬೆಂಗಳೂರು/ಮಂಗಳೂರು, ಆ.10 : ಮಂಗಳೂರಿನ ಪಡೀಲ್ ಹೋಮ್ ಸ್ಟೇ ಮೇಲೆ ನಡೆದ ದಾಳಿಯ ಪ್ರಕರಣದ ನಂತರ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಈಗ ರಾಜ್ಯದಲ್ಲಿ ವೀಕೆಂಡ್ ಪಾರ್ಟಿಗಳ ಮೇಲೆ ಕಡಿವಾಣ ಹಾಕಲು ಮುಂದಾಗಿದೆ.

ಅದರಲ್ಲೂ ಕರಾವಳಿ ಭಾಗದಲ್ಲಿ ಇಂತಹ ಪಾರ್ಟಿಗಳ ಆಯೋಜನೆಗೆ ನಿರ್ಬಂಧ ಹೇರಿದ್ದು, ಮುಂದೆ ಈ ತರಹದ ಪ್ರಕರಣಗಳು ನಡೆಯದಂತೆ ಮುನ್ನಚ್ಚೆರಿಕೆ ವಹಿಸಿದೆ. ಬೆಂಗಳೂರಿನಲ್ಲಿ ಇನ್ಮುಂದೆ ಲೈಸನ್ ಇಲ್ಲದ ವೀಕೆಂಡ್ ಪಾರ್ಟಿ ಮಾಡುವಂತಿಲ್ಲ.

ಈಗಾಗಲೇ ಸರ್ಕಾರದ ಆದೇಶದಂತೆ ವೀಕೆಂಡ್ ಪಾರ್ಟಿಗಳ ಆಯೋಜನೆಗೆ ನಿರ್ಬಂಧ ಹೇರಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ. ಇಲಾಖೆ ಹೊರಡಿಸಿರುವ ಆದೇಶದಲ್ಲಿ ಪಣಂಬೂರ್ ಬೀಚ್, ಪಿಲಿಕುಳ ನಿಸರ್ಗಧಾಮ ಸೇರಿದಂತೆ ಹೋಮ್ ಸ್ಟೇಗಳಲ್ಲಿ ಪಾರ್ಟಿಗಳನ್ನು ನಡೆಸದಂತೆ ನಿರ್ಬಂಧ ಹೇರಿದೆ.

ಹೋಂ ಸ್ಟೇ ಮಾಲಿಕರ ವಿರೋಧ: ಪೊಲೀಸ್ ಇಲಾಖೆಯ ಈ ಕ್ರಮ ಹೋಮ್ ಸ್ಟೇ ಮಾಲಿಕರು ಹಾಗೂ ಸಾರ್ವಜನಿಕರಲ್ಲಿ ಆಕ್ರೋಶವನ್ನುಂಟು ಮಾಡಿದೆ. ಪ್ರವಾಸೋದ್ಯಮದಿಂದ ಸರ್ಕಾರಕ್ಕೆ ಹೆಚ್ಚಿನ ಸಿಗುವ ಅವಕಾಶ ಇದರಿಂದ ಇಲ್ಲವಾಗುತ್ತದೆ. ಒಂದು ಹೋಂ ಸ್ಟೇನಲ್ಲಿ ಏನೋ ಅವ್ಯವಹಾರ ನಡೆದಿದೆ ಎಲ್ಲಾ ಹೋಂಸ್ಟೇಗಳನ್ನು ಗುಮಾನಿಯಿಂದ ನೋಡುವುದು ಸರಿಯಲ್ಲ ಎಂದು ಮಂಗಳೂರು ಮೂಲದ ಹೋಂ ಸ್ಟೇ ಮಾಲೀಕರೊಬ್ಬರು ಹೇಳಿದ್ದಾರೆ.

ಮಂಗಳೂರಿನ ಪಡೀಲ್ ನಲ್ಲಿರುವ ಹೋಂ ಸ್ಟೇಯಲ್ಲಿ ಬರ್ತ್ ಡೇ ಪಾರ್ಟಿ ನಡೆಯುತ್ತಿದ್ದಾಗ ಹಿಂದೂ ಜಾಗರಣ ವೇದಿಕೆ ಸಂಘಟನೆ ಕಾರ್ಯಕರ್ತರು ದಾಳಿ ಮಾಡಿದ್ದರು. ಈ ವೇಳ ಅಲ್ಲಿದ್ದ ಯುವತಿಯರೊಂದಿಗ ಅಸಭ್ಯವಾಗಿ ವರ್ತಿಸಿದ್ದರು.

ಇದರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಹೈಕೋರ್ಟ್ ಸರ್ಕಾರಕ್ಕ ನೋಟಿಸ್ ನೀಡಿತ್ತು. ಈ ಹಿನ್ನೆಲೆಯಲ್ಲಿ ಗೃಹ ಇಲಾಖೆ ವೀಕೆಂಡ್ ನಲ್ಲಿ ನಡೆಯಲಿರುವ ಪಾರ್ಟಿಗಳಿಗೆ ಕಡಿವಾಣ ಹಾಕಲು ನಿರ್ಧರಿಸಿದೆ. ಈ ನಡುವೆ ರಾಜ್ಯ ಮಹಿಳಾ ಆಯೋಗ ಶುಕ್ರವಾರ(ಆ.10) ನೀಡಿರುವ ವರದಿಯನ್ನು ಪರಿಶೀಲಿಸಿ ಸರ್ಕಾರ ಇನ್ನಷ್ಟು ಕಠಿಣ ಕ್ರಮವನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ.

ನಿಮ್ಮ ಮನೆ ಹೊರತುಪಡಿಸಿ ಬೇರೆಡೆ ಪಾರ್ಟಿ ಮಾಡಬಯಸಿದರೆ ಸ್ಥಳೀಯ ಪೊಲೀಸರಿಂದ ಪೂರ್ವಾನುಮತಿ ಪಡೆಯುವುದು ಈಗ ಕಡ್ಡಾಯಗೊಳಿಸಲಾಗಿದೆ.ಅಪಾರ್ಟ್ಮೆಂಟ್, ರೆಸಾರ್ಟ್, ಪಬ್ ಹಾಗೂ ರೆಸ್ಟೊರೆಂಟ್ ಅಥವಾ ಹೋಟೆಲ್ ಗಳಲ್ಲಿ ಪಾರ್ಟಿ ಮಾಡಲು ಪೊಲೀಸ್ ಅನುಮತಿ ಅಗತ್ಯ ಎಂದು ಬೆಂಗಳೂರಿನ ಎಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಟಿ ಸುನಿಲ್ ಕುಮಾರ್ ಹೇಳಿದ್ದಾರೆ.

ಪಾರ್ಟಿಯಲ್ಲಿ ಭಾಗವಹಿಸುವ ಒಟ್ಟು ಜನರ ಸಂಖ್ಯೆ, ವಿವರ, ಬಳಸುವ ಧ್ವನಿವರ್ಧಕ ವ್ಯವಸ್ಥೆ (DJ/ರೆಕಾರ್ಡೆಡ್ ಮ್ಯೂಸಿಕ್/ಲೈವ್ ಪ್ರದರ್ಶನ), ಡ್ಯಾನ್ಸ್ , ಅಲ್ಕೋಹಾಲ್ ನೀಡಲಾಗುತ್ತದೆಯೇ ಮುಂತಾದ ವಿಷಯಗಳನ್ನು ಮೊದಲೇ ತಿಳಿಸಿರತಕ್ಕದ್ದು. ಅರ್ಜಿಯನ್ನು ಪರೀಶಿಲಿಸಿ ಪುರಸ್ಕರಿಸುವುದು ಅಥವಾ ಅನುಮತಿ ನೀಡದೆ ತಿರಸ್ಕರಿಸುವ ಅಧಿಕಾರ ಪೊಲೀಸರಿಗೆ ಇರುತ್ತದೆ. ಪಾರ್ಟಿ ಮಾಡುವ ಸ್ಥಳದಲ್ಲಿನ ನೆರೆ ಹೊರೆಯವರಿಂದ NOC ಕೂಡಾ ಬೇಕಾಗುತ್ತದೆ.

15ಕ್ಕಿಂತ ಅಧಿಕ ಮಂದಿ ಒಂದೆಡೆ ಸೇರಿ ಪಾರ್ಟಿ ಮಾಡುವುದಿರಲಿ ಅಥವಾ ಕಡಿಮೆ ಬಜೆಟ್ ನಲ್ಲಿ ಒಟ್ಟಿಗೆ ಕುಳಿತು ಮದ್ಯ ಸೇವನೆ ಮಾಡುವುದಿರಲಿ ನಿಯಮ ಮೀರಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಹೇಳಿದ್ದಾರೆ.

ಪೊಲೀಸರ ಆದೇಶದಿಂದ ಬೆಂಗಳೂರಿನ ಸ್ಟಾರ್ ಹೋಟೆಲ್ ಹಾಗೂ ಇತರೆಡೆ ಸ್ಟೇಟ್ ಶೋ ಆಯೋಜಕರು ಸಿಟ್ಟಿಗೆದ್ದಿದ್ದಾರೆ. ಇದು ನಮ್ಮ ಸ್ವಾತಂತ್ರ್ಯ ಕಿತ್ತುಕೊಳ್ಳುವ ಆದೇಶ. ಎಲ್ಲಾ ಪಾರ್ಟಿಗಳ ಮೇಲೆ ನಿರ್ಬಂಧ ಹೇರುವುದು ಸರಿಯಲ್ಲ. ಪಾರ್ಟಿ ಮಾಡುವುದು ಕಾನೂನು ಹಾಗೂ ಅಸಂವಿಧಾನಿಕವೇ ಎಂದು ರುಬಿ ಚಕ್ರವರ್ತಿ ಪ್ರಶ್ನಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
After the Mangalore homestay attack incidence, the Bangalore police, issue new order stating Permission from the area’s police before hosting a party is now mandatory and partying without a 'licence' anywhere apart from your home will be punishable said Additional Commissioner of Police T Sunil Kumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more