ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಳೆಯಲ್ಲಿ ಮೋಸ, ದೇವರಿಗೆ ಲೀಗಲ್ ನೋಟೀಸ್

By Prasad
|
Google Oneindia Kannada News

Rain Gods Issued Legal Notice for Bias
ಬೆಂಗಳೂರು, ಆ. 9 : ದೇವಲೋಕದಲ್ಲೂ ಭ್ರಷ್ಟಾಚಾರ ಕಾಲಿಟ್ಟಿದೆಯಾ? ಅಥವಾ ದೇವಲೋಕದ ಸಿಇಓ ಇಂದ್ರ ಮತ್ತು ವರುಣ ಮೋಸ ಮಾಡಲು ಪ್ರಾರಂಭಿಸಿದ್ದಾರಾ? ಒಂದು ಪ್ರದೇಶದಲ್ಲಿ ಭೀಕರ ಮಳೆ, ಮತ್ತೊಂದು ಜಿಲ್ಲೆಯಲ್ಲಿ ಕೇಳರಿಯದಂತಹ ಬರಗಾಲ. ಒಟ್ಟಿನಲ್ಲಿ ತಾರತಮ್ಯ ಮಾಡುತ್ತಿರುವ ಇಂದ್ರನ ಮೇಲೆ ಮೂರು ದಿನದಲ್ಲಿ ಉತ್ತರ ನೀಡಬೇಕೆಂದು ಲೀಗಲ್ ನೋಟೀಸ್ ಜಾರಿ ಮಾಡಲಾಗಿದೆ.

ಈ ವಿದ್ಯಮಾನ ನಡೆದಿರುವುದು ಉತ್ತರ ಪ್ರದೇಶದ ಜಿಲ್ಲೆಯೊಂದರಲ್ಲಿ. ಬೇರೆಡೆ ಸುರಿಸಿದ್ದರೂ ಈ ಜಿಲ್ಲೆಯಲ್ಲಿ ಯಾಕೆ ಮಳೆ ಸುರಿಸಿಲ್ಲ? ಮೂರು ದಿನದಲ್ಲಿ ಉತ್ತರ ನೀಡದಿದ್ದರೆ ಪರಿಣಾಮ ನೆಟ್ಟಗಿರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ನೋಟೀಸ್ ನೀಡಲಾಗಿದೆ (ಮಳೆ ದೇವ ವರುಣ ಆಗಿದ್ದರೂ, ಅವರೆಲ್ಲರನ್ನು ನಿಯಂತ್ರಿಸುತ್ತಿರುವವನು ದೇವಲೋಕದ ಸಿಇಓ ಇಂದ್ರ ತಾನೆ?)

ಆ ಲೀಗಲ್ ನೋಟೀಸಿನಲ್ಲಿ ಮ್ಯಾಜಿಸ್ಟ್ರೇಟ್ ಅವರ ನಕಲಿ ಸಹಿ ಮಾಡಲಾಗಿದೆ. ಇಲ್ಲಿ ತಮಾಷೆ ಏನೇ ಇರಲಿ, ಇದು ವಸ್ತುಸ್ಥಿತಿಗೆ ಕನ್ನಡಿದೆ. ನೀರಿಲ್ಲದೆ ಜನರು ತತ್ತರಿಸಿದ್ದಾರೆ, ಬೆಳೆಗಳು ಕಮರಿ ಹೋಗುತ್ತಿವೆ, ಜಾನುವಾರುಗಳು ಕಸಾಯಿಖಾನೆಗೆ ಸಾಗಾಟವಾಗುತ್ತಿವೆ, ಜನ ಗುಳೆ ಹೊರಟಿದ್ದಾರೆ. ಮಳೆ ಸುರಿಸಲೆಂದು ದೇವಾಧಿದೇವತೆಗಳಿಗೆ ಪೂಜೆಗಳನ್ನು ಸಲ್ಲಿಸಲಾಗುತ್ತಿದೆ, ಪರಿಪರಿಯಾಗಿ ಬೇಡಿಕೊಳ್ಳಲಾಗುತ್ತಿದೆ, ನಾಯಿ ನರಿ, ಕಪ್ಪೆಗಳ ಮದುವೆ ಮಾಡಲಾಗುತ್ತಿದೆ. ಆದರೂ, ದೇವರು ಕೆಲವೆಡೆ ಮಳೆ ಸುರಿಸುವ ಮನಸು ಮಾಡಿದರೆ, ಮತ್ತೊಂದೆಡೆ ತಾರತಮ್ಯ. ಇದ್ಯಾಕೆ ಹೀಗೆ?

ಕರ್ನಾಟಕದ ಪರಿಸ್ಥಿತಿ ವಿಭಿನ್ನವಾಗೇನೂ ಇಲ್ಲ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಬೆಳಗಾವಿ, ಶಿವಮೊಗ್ಗ, ಉತ್ತರ ಕನ್ನಡ, ಮಡಿಕೇರಿ ಜಿಲ್ಲೆಗಳನ್ನು ಹೊರತುಪಡಿಸಿದರೆ ಉಳಿದ ಜಿಲ್ಲೆಗಳ ಮೇಲೆ ವರುಣದೇವ ಅವಕೃಪೆ ತೋರಿದ್ದಾನೆ. ದಕ್ಷಿಣ ಕರ್ನಾಟಕದಲ್ಲಿ ಮೈಸೂರು, ಮಂಡ್ಯ, ಹಾಸನ, ಧಾರವಾಡ ಜಿಲ್ಲೆಗಳಲ್ಲಿ ಅಲ್ಪಸ್ವಲ್ಪ ಮಳೆಯಾಗಿದ್ದರೆ, ರಾಯಚೂರು, ಬಳ್ಳಾರಿ, ಬೀದರ್, ಯಾದಗಿರಿ, ಚಿತ್ರದುರ್ಗ, ಬೆಂಗಳೂರು ನಗರ ಜಿಲ್ಲೆಗಳಲ್ಲಿ ವರುಣದೇವ ಭಾರೀ ಮೋಸ ಮಾಡಿದ್ದಾನೆ.

ಜುಲೈ 27ರಂದು 17 ಕೋಟಿ ರು. ಖರ್ಚು ಮಾಡಿ ರಾಜ್ಯದ ಎಲ್ಲ ಮುಜರಾಯಿ ದೇವಸ್ಥಾನಗಳಲ್ಲಿ ಏಕಕಾಲದಲ್ಲಿ ಲಂಚದ ರೂಪದಲ್ಲಿ ಪೂಜೆ ಸಲ್ಲಿಸಲಾಯಿತು. ಪರಿಣಾಮವೇನೋ ಎಂಬಂತೆ ಅನೇಕ ಜಿಲ್ಲೆಗಳಲ್ಲಿ ಇದ್ದಕ್ಕಿದ್ದಂತೆ ವರುಣ ವರ್ಷಧಾರೆ ಮಾಡಿದ. ಉಳಿದ ಜಿಲ್ಲೆಗಳಲ್ಲಿ ಕೊಟ್ಟಿದ್ದು ಸಾಕಾಗಲಿಲ್ಲವೋ ಅಥವಾ ಕೇಳಿಕೊಂಡಿದ್ದು ತಲುಪಲಿಲ್ಲವೋ ಅಥವಾ ಇಲ್ಲಿನ ಭ್ರಷ್ಟ ವ್ಯವಸ್ಥೆಯಿಂದ ಬೇಸತ್ತಿದ್ದಾನೋ ಏನು ಕಥೆಯೋ ವರುಣ ಮುನಿಸಿಕೊಂಡುಬಿಟ್ಟಿದ್ದಾನೆ. ಕರ್ನಾಟಕದ ಬರಪೀಡಿತ ಪ್ರದೇಶಗಳಿಂದಲೂ ಇಂದ್ರನ ಬದಲಾಗಿ ವರುಣದೇವನಿಗೆ ನೇರವಾಗಿ ಲೀಗಲ್ ನೋಟೀಸ್ ಕಳಿಸಿದರೆ ಹೇಗೆ?

English summary
Legal notice has been sent to Indra, Lord of all Gods, asking him to explain why adequate rain did not occure in many districts in Uttar Pradesh. Situation is not different in Karnataka too. Though mass prayers were performed, God of rain Varuna Deva has not shown mercy in many district in drought hit districts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X