ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಬೈಲ್ ಹುಚ್ಚು ಆಂಧ್ರದವರಿಗೇ ಹೆಚ್ಚು

By Srinath
|
Google Oneindia Kannada News

andhra-pradesh-is-most-talkative-on-mobile-phone-trai
ಹೈದರಾಬಾದ್, ಆಗಸ್ಟ್ 6: 'ಮೊಬೈಲ್ ಹುಚ್ಚು ಆಂಧ್ರ ಪ್ರದೇಶದ ತೆಲುಗು ಮಂದಿಗೆ ಹೆಚ್ಚು' ಎಂದು ಮೊಬೈಲ್ ಸಮೀಕ್ಷೆಯೊಂದು ಪಿಸುಗುಟ್ಟಿದೆ. ಹೌದು ಇಡೀ ಭಾರತದಲ್ಲಿ ಮೊಬೈಲಿನಲ್ಲಿ ಹೆಚ್ಚಾಗಿ ಮಾತನಾಡುವವರೆಂದರೆ ಅವರು ಆಂಧ್ರದ ತೆಲುಗು ಮಂದಿ ಎಂದೇ ಅರ್ಥ.

2012ರ ಮೊದಲ ಮೂರು ತಿಂಗಳಲ್ಲಿ ಆಂಧ್ರದ GSM ಮತ್ತು CDMA ಮೊಬೈಲ್ ಬಳಕೆದಾರರು ತಿಂಗಳಿಗೆ ತಲಾ 305 ನಿಮಿಷ ಮಾತನಾಡಿದ್ದಾರೆ. ದಕ್ಷಿಣ ಭಾರತದ ಇತರೆ ಮೂರು ರಾಜ್ಯಗಳಿಗೆ ಹೋಲಿಸಿದಲ್ಲಿ ಆಂಧ್ರ ಗರಿಷ್ಠ ಪ್ರಮಾಣದಲ್ಲಿ ಮೊಬೈಲಿನಲ್ಲಿ ಮಾತನಾಡಿದೆ. ಈ ಮಾಹಿತಿಯನ್ನು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವೇ (TRAI) ಬಹಿರಂಗಗೊಳಿಸಿದೆ.

ಕರ್ನಾಟಕದ ಮೊಬೈಲ್ ಚಂದಾದಾರರು 284 ನಿಮಿಷ ಮಾತನಾಡಿದರೆ ಕೇರಳ ಮತ್ತು ತಮಿಳುನಾಡಿನಲ್ಲಿ ತಲಾ 255 ಮತ್ತು 246 ನಿಮಿಷ ಮಾತನಾಡಿದ್ದಾರೆ. ಕುತೂಹಲದ ಸಂಗತಿಯೆಂದರೆ ಆಂಧ್ರದ 305 ನಿಮಿಷ ರಾಷ್ಟ್ರೀಯ ಸರಾಸರಿಗಿಂತಲೂ ಅಧಿಕವಾಗಿದೆ! ತಲಾ ಸರಾಸರಿ ಮಹಾರಾಷ್ಟ್ರದಲ್ಲಿ 283 ನಿಮಿಷ ಮತ್ತು ಗುಜರಾತಿನಲ್ಲಿ 255 ನಿಮಿಷ ಮಾತನಾಡುವವರು ಇದ್ದಾರೆ.

'ದಕ್ಷಿಣ ಭಾರತದಲ್ಲಿ ಆಂಧ್ರದ ಮಂದಿ ಹೆಚ್ಚು ಭಾವನಾಜೀವಿಗಳು. ಅವರು ಸಂಬಂಧಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ. ಆದ್ದರಿಂದ ಅವರಲ್ಲಿ ಮೊಬೈಲ್ ಮಾತುಕತೆ ಸಹಜವಾಗಿಯೇ ಹೆಚ್ಚಾಗಿದೆ' ಎಂದು ಸಮಿಕ್ಷೆಯನ್ನು ಅಧ್ಯಯನ ಮಾಡಿದ ಹೈದರಾಬಾದಿನ ಹಿರಿಯರೊಬ್ಬರು ಹೇಳಿದ್ದಾರೆ.

'ನಮ್ಮ ಜನ ದುಡ್ಡಿನ ಮುಖ ನೋಡೊಲ್ಲ. ಕರೆ ದರದ ಬಗ್ಗೆಯೂ ಅವರು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಇದನ್ನು ಅರಿತು ಮೊಬೈಲ್ ಸೇವಾ ಕಂಪನಿಗಳು ಮಾನವ ಸಂಬಂಧಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ ಎಂದು ಮೊಬೈಲ್ ಕಂಪನಿಯ ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ.

English summary
According to data recently released by the Telecom Regulatory Authority of India (TRAI) AP is most talkative on cellphone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X