ನಡು ರಸ್ತೇಲಿ ಭಗ್ನ ಪ್ರೇಮಿ ಆಕೆಯನ್ನು ಕೊಚ್ಚಿ ಬಿಟ್ಟ

24 ವರ್ಷ ಯುವತಿ ಸ್ಥಳೀಯ ಸಂಸ್ಥೆಯೊಂದರಲ್ಲಿ ಅಕೌಂಟೆಟ್ ಆಗಿದ್ದಳು. ಜಿಮ್ ವೊಂದರಲ್ಲಿ ಇನ್ ಸ್ಟ್ರಕ್ಟರ್ ಆಗಿರುವ ಆರೋಪಿ ಯುವಕ ಆಕೆ ಹಿಂದೆ ಬಿದ್ದಿದ್ದ ಮದುವೆಯಾಗು ಎಂದು ಪೀಡಿಸುತ್ತಿದ್ದ. ಆಕೆ ಒಪ್ಪದಿದ್ದಾಗ ಈ ರೀತಿ ಇರಿದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರದೀಪ್ ಪಾಟೀಲ್(30) ಎಂಬ ಯುವಕ ಹರಿತವಾದ ಆಯುಧ ಬಳಸಿ ದೀಪಾ(ಹೆಸರು ಬದಲಾಯಿಸಲಾಗಿದೆ) ಎಂಬ ಯುವತಿಯ ಮೇಲೆ ಹಿಂಬದಿಯಿಂದ ದಾಳಿ ಮಾಡಿದ್ದಾನೆ. ನಂತರ ಆಕೆ ಕೈ, ಎದೆ, ಕಿಬ್ಬೊಟ್ಟೆ ಭಾಗಗಳ ಮೇಲೆ ಮನಸೋ ಇಚ್ಛೆ ತಿವಿದಿದ್ದಾನೆ. ಈ ಸಂದರ್ಭದಲ್ಲಿ ಆಕೆ ರಕ್ಷಣೆಗೆ ಯಾರು ಬಂದಿಲ್ಲ. ಧೈರ್ಯ ಮಾಡಿ ಮುಂದೆ ಬಂದ ಒಂದಿಬ್ಬರನ್ನು ಮುಂದೆ ಬಂದರೆ ನಿಮ್ಮನ್ನು ಕೊಂದು ಬಿಡುತ್ತೇನೆ ಎಂದು ಪ್ರದೀಪ್ ಹೆದರಿಸಿಬಿಟ್ಟಿದ್ದಾನೆ. ಕೆಲವು ಆ ಸ್ಥಳದಿಂದಲೇ ಜಾಗ ಖಾಲಿ ಮಾಡಿದ್ದಾರೆ ಎಂದು ಹಿರಿಯ ಇನ್ಸ್ ಪೆಕ್ಟರ್ ಎಸ್ ಎಲ್ ಹಜ್ಬಂದ್ ಹೇಳಿದ್ದಾರೆ.
ಕಚೇರಿ ಬಿಟ್ಟ ದೀಪಾ ಆಕೆ ನೆಂಟರ ಮನೆ ಕಡೆಗೆ ತೆರಳುತ್ತಿದ್ದಳು. ಮಾಹಿಂ ಪ್ರದೇಶದ ನಿವಾಸಿಯಾಗಿರುವ ದೀಪಾ ತಮ್ಮ ನೆಂಟರ ಮನೆಯಿಂದ ಕೇವಲ 100 ಮೀ ದೂರ ಹೋಗಿದ್ದಾಗ ಈ ಘಟನೆ ನಡೆದಿದೆ.
ರಕ್ತ ಸಿಕ್ತವಾಗಿ ಬಿದ್ದಿದ್ದ ಆಕೆಯನ್ನು ಕೂಪರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಅಲ್ಲಿಂದ ನಂತರ ನಾಯರ್ ಆಸ್ಪತ್ರೆಗೆ ಸೇರಿಸಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಸದ್ಯಕ್ಕೆ ಆಕೆ ಸುಸ್ಥಿತಿಯಲ್ಲಿದ್ದು, ಐಸಿಯುನಲ್ಲಿದ್ದಾಳೆ. ಎಂದು ಪೊಲೀಸರು ಹೇಳಿದ್ದಾರೆ.
ಯುವತಿಯನ್ನು ಇರಿದ ಮೇಲೆ ಬೊರಿವಿಲಿಗೆ ಪರಾರಿಯಾಗಿದ್ದ ಪ್ರದೀಪನನ್ನು ಪೊಲೀಸರು 9 ಗಂಟೆ ಹುಡುಕಾಟದ ನಂತರ ಹಿಡಿದಿದ್ದಾರೆ. ಕೊಲೆ ಪ್ರಯತ್ನ ಮಾಡಿದ ಆರೋಪದ ಮೇಲೆ ಆತನನ್ನು ಬಂಧಿಸಲಾಗಿದೆ. ಜಿಮ್ ನಲ್ಲಿ ಉದ್ಯೊಗಿಯಾಗಿದ್ದ ಈತ ಈ ಹಿಂದೆ ಡ್ರಗ್ಸ್ ಸೇವಿಸಿದ ಕಾರಣ, ಕೆಲಸದಿಂದ ವಜಾಗೊಂಡಿದ್ದ.
ದೀಪಾಳನ್ನು ಪ್ರತಿ ದಿನ ಇದೇ ರೀತಿ ರಸ್ತೆ ಮಧ್ಯೆದಲ್ಲೇ ಕಾಡುತ್ತಿದ್ದ. ಅವಳ ಹಿಂದೆ ಹುಚ್ಚನಂತೆ ಓಡಾಡುತ್ತಿದ್ದ ಎಂದು ಇನ್ಸ್ ಪೆಕ್ಟರ್ ಶೋಭಾ ಪಿಸೆ ಹೇಳಿದ್ದಾರೆ. ಘಟನೆ ನಡೆದಾಗ ಸಿನಿಮಾ ನೋಡುವಂತೆ ನೋಡುತ್ತಿದ್ದ ಸ್ಥಳೀಯ ನಾಗರೀಕರಿಗೆ ಪೊಲೀಸರು ಎಂದಿನಂತೆ ನಾಗರೀಕ ಕರ್ತವ್ಯಪ್ರಜ್ಞೆ ಪಾಠ ಹೇಳಿದ್ದಾರೆ.












Click it and Unblock the Notifications