ಬಿಂದ್ರಾಗೆ ಚಿನ್ನದ ಪದಕ ಗ್ಯಾರಂಟಿ: ಭವಿಷ್ಯ

ಬೆಂಗಳೂರು, ಜು.30: ಲಂಡನ್ ಒಲಿಂಪಿಕ್ಸ್ 2012 ಮೂರನೇ ದಿನ ಭಾರತಕ್ಕೆ ಶುಭದಿನವಾಗಿ ಪರಿಣಮಿಸಲಿದೆ. ಬೀಜಿಂಗ್ ಒಲಿಂಪಿಕ್ಸ್ ಹೀರೋ ಶೂಟರ್ ಅಭಿನವ್ ಬಿಂದ್ರಾ ಮತ್ತೊಮ್ಮೆ ಅಮೋಘ ಪ್ರದರ್ಶನವನ್ನು ಪುನಾರವರ್ತನೆ ಮಾಡಲಿದ್ದಾರೆ. ಭಾರತೀಯರು ಪದಕ ಕನಸು ಅಭಿನವ್ ಬಿಂದ್ರಾ ಅವರಿಂದ ಸೋಮವಾರ (ಜು.30) ನನಸಾಗಲಿದೆ ಎಂದು ಸಂಖ್ಯಾಶಾಸ್ತ್ರಜ್ಞರು ಹೇಳಿದ್ದಾರೆ.

ಪುರುಷರ 10 ಮೀ ಏರ್ ರೈಫಲ್ ಅರ್ಹತಾ ಸುತ್ತಿನ ಪಂದ್ಯಾವಳಿ ಆರಂಭಗೊಂಡಿದ್ದು ಮೊದಲ ಸರಣಿಯಲ್ಲಿ ಬಿಂದ್ರಾ 99 ಅಂಕಗಳಿಸಿದ್ದಾರೆ. 10 ಪ್ರಯತ್ನದಲ್ಲಿ 9 ಬಾರಿ 10 ಅಂಕ ಒಂದು ಬಾರಿ 9 ಅಂಕ ಗಳಿಸಿ 99/100 ಗಳಿಸಿ ಭರ್ಜರಿ ಪ್ರದರ್ಶನ ನೀಡಿದ್ದಾರೆ.

ಅರ್ಹತಾ ಸುತ್ತಿನ ನಂತರ ಮೊದಲ 8 ಆಟಗಾರರು ಮುಂದಿನ ಸುತ್ತಿಗೆ ಅರ್ಹತೆ ಪಡೆಯುತ್ತಾರೆ. ಫೈನಲ್ ಪಂದ್ಯ ಸೋಮವಾರ ಸಂಜೆ ನಡೆಯಲಿದೆ. 54 ಸ್ಪರ್ಧಿಗಳು ಅರ್ಹತಾ ಸುತ್ತಿನಲ್ಲಿದ್ದಾರೆ. [ ಜು.30 ಒಲಿಂಪಿಕ್ಸ್: ಬಿಂದ್ರಾ ಚಿನ್ನದ ಬೇಟೆ ಆರಂಭ] | [ಜು.29: ಭಾರತದ ಸಾಧನೆ]

ಬಿಂದ್ರಾಗೆ ಚಿನ್ನ ಸಿಗಲಿದೆ: ಸಂಖ್ಯಾಶಾಸ್ತ್ರದ ಪ್ರಕಾರ 28/09/1982 ರಂದು ಜನಿಸಿರುವ ಅಭಿನವ್ ಬಿಂದ್ರಾ ಅವರ ಜನ್ಮ ದಿನಾಂಕದ ಮೇಲೆ ಸೂರ್ಯ ಹಾಗೂ ಗುರು(1 ಹಾಗೂ 3 ನೇ ಸ್ಥಾನ) ಬಲ ಹೆಚ್ಚಾಗಿದೆ. ಸೋಮವಾರದ ದಿನಾಂಕ 30/07/2012 ಇದರ ಮೊತ್ತ 5 ಆಗಲಿದ್ದು, ಇದು ಬಿಂದ್ರಾ ಶುಭಕರವಾಗಿದೆ.

ಜನ್ಮ ದಿನಾಂಕ 28=2+8= 1 ಹಾಗೂ 2008 ರಲ್ಲಿ ಪದಕ ಗೆದ್ದ ವರ್ಷ ಕೂಡಾ 1 ಮೊತ್ತ ಸಮನಾಗಿದೆ.ಬೀಜಿಂಗ್ ನಲ್ಲಿ ಚಿನ್ನದ ಪದಕ ಗೆದ್ದ ದಿನಾಂಕ ಆಗಸ್ಟ್ 11. ಇದರ ಮೊತ್ತ 2 ಇದು ಕೂಡಾ ಬಿಂದ್ರಾಗೆ ಸಹಾಯಕವಾಗಲಿದೆ ಎಂದು ಸಂಖ್ಯಾಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇವತ್ತಿನ ಜು.30 ದಿನಾಂಕ ಮೊತ್ತ 3 ಬರಲಿದ್ದು ಗುರು ಬಲಕ್ಕೆ ಹೊಂದಿಕೆಯಾಗಲಿದೆ. ಅಭಿನವ್ ಬಿಂದ್ರಾಗೆ 1 ಹಾಗೂ 3 ಶುಭಕರ ಸಂಖ್ಯೆಯಾಗಿದ್ದು, ಇವತ್ತು ಚಿನ್ನ ಗೆಲ್ಲಲು ಯಾವುದೇ ಗ್ರಹ ಅಡ್ಡಿ ಪಡಿಸಲು ಸಾಧ್ಯವಿಲ್ಲ ಎಂದು ವಿದ್ವಾಂಸರ ಒಮ್ಮತದ ಅಭಿಪ್ರಾಯ.

ಕಾರ್ಪೋರೇಟ್ ಸಂಖ್ಯಾಶಾಸ್ತ್ರಜ್ಞ ವರುಣ್ ಆದಿತ್ಯಾ ಅವರ ಅಭಿಪ್ರಾಯದಂತೆ ಅಭಿನವ್ ಬಿಂದ್ರಾಗೆ ಹೋಲಿಸಿದರೆ ಗಗನ್ ನಾರಂಗ್ ಅವರಿಗೆ ಗ್ರಹಬಲ ಅಷ್ಟಾಗಿ ಕೂಡಿ ಬಂದಿಲ್ಲ. ಶುಕ್ರ ಹಾಗೂ ಬುಧ ಗ್ರಹದ ಪ್ರಭಾವ ನಾರಂಗ್ ಮೇಲೆ ಹೆಚ್ಚಾಗಿದ್ದು, ಬುಧ ಗ್ರಹದ ಬಲ ಸಿಕ್ಕಿದ್ದರೂ ಶುಕ್ರನ ಪೂರ್ಣ ಶಕ್ತಿ ಗಗನ್ ಗೆ ದೊರೆತಿಲ್ಲ. ಹೀಗಾಗಿ ಪದಕ ಗೆಲ್ಲುವಲ್ಲಿ ಸ್ವಲ್ಪದರಲ್ಲಿ ವಂಚಿತರಾಗುವ ಸಾಧ್ಯತೆ ಹೆಚ್ಚು ಎಂದಿದ್ದಾರೆ.

ಆದರೆ, ಜ್ಯೋತಿಷಿಗಳ ಕಣ್ಣು ಇನ್ನೊಬ್ಬ ಶೂಟರ್ ಗಗನ್ ನಾರಂಗ್ ಮೇಲೆ ಪೂರ್ಣವಾಗಿ ಬಿದ್ದ ಹಾಗೆ ಕಾಣುತ್ತಿಲ್ಲ. ಗಗನ್ ನಾರಂಗ್ ಕೂಡಾ ಇಂದು ಸ್ಪರ್ಧಿಸುತ್ತಿದ್ದು, ಬಿಂದ್ರಾಗಿಂತ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಕ್ರೀಡಾಭಿಮಾನಿಗಳ ದುರುದೃಷ್ಟಕ್ಕೆ ಯಾವ ಚಾನೆಲ್ ನಲ್ಲೂ ಶೂಟಿಂಗ್ ಸ್ಪರ್ಧೆ ಲೈವ್ ಪ್ರಸಾರ ಸಿಗುತ್ತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+