ಲೈಂಗಿಕ ಕಿರುಕುಳ: ಅಮೆರಿಕದಲ್ಲಿ IFS ಅಧಿಕಾರಿ ಬಂಧನ

pennsylvania-hotel-maid-assaul-ifs-officer-held-us
ಪೆನ್ಸಿಲ್ವೇನಿಯಾ, ಜುಲೈ 26: ಹೋಟೆಲಿನ ಪರಿಚಾರಿಕೆಯೊಬ್ಬರ ಜತೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ದೌರ್ಜನ್ಯವೆಸಗಿದ ಆರೋಪದ ಮೇಲೆ ಭಾರತದ ವಿದೇಶಾಂಗ ಸೇವಾ ವಿಭಾಗದ ಯುವ ಅಧಿಕಾರಿಯೊಬ್ಬರನ್ನು ಅಮೆರಿಕ ಪೊಲೀಸರು ಬಂಧಿಸಿದ್ದಾರೆ.

IFS ಅಧಿಕಾರಿ ಸುರೇಂದ್ರ ಪ್ರಸಾದ್ ಮಹಾಪಾತ್ರ ಬಂಧಿತ ವ್ಯಕ್ತಿ. ಪೆನ್ಸಿಲ್ವೇನಿಯಾದ ಹೋಟೆಲೊಂದರಲ್ಲಿ ಬುಧವಾರ ಈ ಘಟನೆ ನಡೆದಿದೆ. 1985ನೇ ಬ್ಯಾಚಿನ ಒರಿಸ್ಸಾ ಕೇಡರ್ ಅಧಿಕಾರಿಯಾದ ಸುರೇಂದ್ರ ನ್ಯೂಯಾರ್ಕಿನ ಸಿರೆಕ್ಯುಸ್ ವಿಶ್ವವಿದ್ಯಾಲಯದಲ್ಲಿ ಹೆಚ್ಚಿನ ತರಬೇತಿ ಕಾರ್ಯಕ್ರಮದ ನಿಮಿತ್ತ ಅಮೆರಿಕದಲ್ಲಿದ್ದಾರೆ. ಒಟ್ಟು 30 ಅಧಿಕಾರಿಗಳು ಸುರೇಂದ್ರ ಜತೆ ತರಬೇತಿಯಲ್ಲಿದ್ದಾರೆ.

ತಾವು ಉಳಿದುಕೊಂಡಿದ್ದ ಹೋಟೆಲಿನ ಮಹಿಳಾ ಉದ್ಯೋಗಿಯ ಮೇಲೆ ಲೈಂಗಿಕ ಹಲ್ಲೆ ನಡೆಸಿದ ಆರೋಪ ಹೊರಿಸಲಾಗಿದೆ. ಸುರೇಂದ್ರ ಪ್ರಸಾದ್ 1983ರಲ್ಲಿ ಧನಬಾದಿನಲ್ಲಿ ಇಮಡಿಯನ್ ಸ್ಕೂಲ್ ಆಫ್ ಮೈನ್ಸ್ ನಲ್ಲಿ ಎಂಎಸ್ಸಿ ಪದವಿ ಪಡೆದಿದ್ದಾರೆ.

ಭಾರತೀಯ ಅಧಿಕಾರಿಗಳು ಹೇಳುವುದೇನು?: ತರಬೇತಿ ಕಾರ್ಯಕ್ರಮದ ಸಂಯೋಜನಾಧಿಕಾರಿ ಧೀರೇಂದ್ರ ಭಾರ್ಗವ ಹೇಳುವಂತೆ - ಮಹಾಪಾತ್ರ ಕಂಪ್ಯೂಟರಿನಲ್ಲಿ ಇಂಟರ್ ನೆಟ್ ಸಂಪರ್ಕದ ಸಮಸ್ಯೆಯಿತ್ತು. ಹಾಗಾಗಿ, ರೆಸೆಪ್ಷನ್ ಗೆ ಕರೆ ಮಾಡಿದ ಮಹಾಪಾತ್ರ ಸಮಸ್ಯೆಯನ್ನು ಸರಿ ಪಡಿಸುವಂತೆ ಕೋರಿದ್ದಾರೆ. ಅದರಂತೆ ಮಹಿಳಾ ಉದ್ಯೋಗಿಯೊಬ್ಬರು ಮಹಾಪಾತ್ರ ಕೊಠಡಿಗೆ ಬಂದಿದ್ದಾರೆ. ಆದರೆ ಅವರ ಕೈಯಲ್ಲಿ ಸಮಸ್ಯೆಯನ್ನು ಸರಿಪಡಿಸಲು ಸಾಧ್ಯವಾಗಿಲ್ಲ. ಆಕೆ ಹಾಗೇ ವಾಪಸಾಗಿದ್ದಾರೆ.

ಆದರೆ ಕೆಲ ಹೊತ್ತಿನಲ್ಲಿಯೇ ಪೊಲೀಸರು ಮಹಾಪಾತ್ರ ಕೊಠಡಿಯೊಳಕ್ಕೆ ನುಗ್ಗಿ ಅವರನ್ನು ಬಂಧಿಸಿದ್ದಾರೆ. ಅದಕ್ಕೂ ಮುಂಚೆ ಸದರಿ ಮಹಿಳಾ ಉದ್ಯೋಗಿಯು ಮಹಾಪಾತ್ರ ವಿರುದ್ಧ ಪೊಲೀಸರಿಗೆ ದೂರು ನೀಡಿರುವುದಾಗಿ ತಿಳಿದುಬಂದಿತು. ಮಹಾಪಾತ್ರ ಉತ್ತಮ ನಡತೆಯ ಅಧಿಕಾರಿ ಎಂದು ಭಾರ್ಗವ ಪ್ರತಿಕ್ರಿಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+