• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪದೇ ಪದೇ ಸಿಎಂ ಬದಲಾವಣೆ, ಕೋಟಿಗಟ್ಟಲೆ ಖರ್ಚು

By Mahesh
|

ಬೆಂಗಳೂರು, ಜು.24: ಪದೇ ಪದೇ ಮುಖ್ಯಮಂತ್ರಿ ಸ್ಥಾನ ಬದಲಾವಣೆಯಾಗುವುದರಿಂದ ರಾಜ್ಯದ ಜನತೆಗೆ ಮುಜುಗರ ತಂದರೆ, ಸರ್ಕಾರಿ ಅಧಿಕಾರಿಗಳಿಗಂತೂ ಬಲು ತೊಂದರೆಯಾಗುತ್ತದೆ. ಮುಖ್ಯಮಂತ್ರಿ ಬದಲಾಗುತ್ತಿದ್ದಂತೆ ಕಚೇರಿ, ಸಾರಿಗೆ, ಜಾಹೀರಾತು ಎಲ್ಲವೂ ಬದಲಾಗಬೇಕಾಗುತ್ತದೆ. ಅದು ಆದಷ್ಟು ಬೇಗ ಮುಗಿಯಬೇಕು ಇಲ್ಲದಿದ್ದರೆ, ಅಲ್ಲಿ ಹೋರ್ಡಿಂಗ್ ನೋಡಿದೆ ಇನ್ನೂ ಹಳೆ ಸಿಎಂ ಫೋಟೋನೇ ಇದೆ ಎಂದು ಜನ ನಗೆಯಾಡುತ್ತಾರೆ. ಇದರ ಪರಿಣಾಮ ಸರ್ಕಾರಿ ಅಧಿಕಾರಿಗಳ ಮೇಲೆ ಬೀಳುತ್ತದೆ.

ಆದರೆ, ಸರ್ಕಾರಿ ಕೆಲಸ ಅಷ್ಟು ತ್ವರಿತವಾಗಿ ನಡೆಯುವುದಿಲ್ಲ. ಒಬ್ಬ ಮುಖ್ಯಮಂತ್ರಿ ಬದಲಾಗಿ ಮತ್ತೊಬ್ಬರು ಬಂದು ಅಧಿಕಾರ ಸ್ವೀಕರಿಸಿ ತಿಂಗಳುಗಳಾದರೂ ಅನೇಕ ಜಾಹೀರಾತುಗಳು ಹಳೆ ಮುಖವನ್ನೇ ತೋರಿಸುತ್ತಿರುತ್ತದೆ. ಅದರಲ್ಲೂ ಸರ್ಕಾರಿ ವೆಬ್ ತಾಣಗಳಲ್ಲಿ ಬದಲಾವಣೆ ಎಂಬುದು ಮರೀಚಿಕೆಯಾಗೇ ಉಳಿದಿದೆ.

ಉದಾಹರಣೆಗೆ ವಾರ್ತಾ ಇಲಾಖೆ ಈಗ ಡಿವಿ ಸದಾನಂದ ಗೌಡರ ಭಾವಚಿತ್ರ ಬದಲಿಸಿ ಜಗದೀಶ್ ಶೆಟ್ಟರ್ ಅವರ ಭಾವಚಿತ್ರ ಲಗತ್ತಿಸುವ ಕಾರ್ಯದಲ್ಲಿ ಮಗ್ನವಾಗಿದೆ. ಈ ಕಾರ್ಯಕ್ಕೆ ಏನಿಲ್ಲವೆಂದರೂ ಸುಮಾರು 5 ಕೋಟಿ ರು ಖರ್ಚಾಗುತ್ತದೆ.

ರಾಜ್ಯದೆಲ್ಲೆಡೆ ಸುಮಾರು 1,721 ಸರ್ಕಾರಿ ಹೋರ್ಡಿಂಗ್ ಜಾಹೀರಾತುಗಳಿದೆ. ಈ ಹೋರ್ಡಿಂಗ್ ಗಳನ್ನು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಬದಲಾಯಿಸಲು ಸ್ವಲ್ಪ ಕಾಲಾವಧಿ ಹಿಡಿಯುತ್ತದೆ. ಬರೀ ಹೋರ್ಡಿಂಗ್ ಬದಲಾವಣೆಗೆ ಸುಮಾರು 1.25 ಕೋಟಿ ರು ತಗುಲುತ್ತದೆ ಎಂದು ವಾರ್ತಾ ಇಲಾಖೆಯ ನಿರ್ದೇಶಕ ವಿಶು ಕುಮಾರ್ ಹೇಳಿದ್ದಾರೆ.

ಇದಲ್ಲದೆ ಸರ್ಕಾರಿ ಕಡತ, ಪುಸ್ತಕ, ಪಾಂಪ್ಲೇಟ್, ಯೋಜನೆಗಳ ಜಾಹೀರಾತುಗಳಲ್ಲಿ ಸಿಎಂ ಭಾವಚಿತ್ರ ಹಾಗೂ ಮಾಹಿತಿ ಬದಲಾಗಬೇಕಾಗುತ್ತದೆ. ಇದಕ್ಕೆ ಪ್ರತ್ಯೇಕ ಸಿಬ್ಬಂದಿಯಾಗಲಿ, ಸಮಯವಾಗಲಿ ಮೀಸಲಿರುವುದಿಲ್ಲ. ಇರುವ ಸಿಬ್ಬಂದಿಗಳು ಹಾಗೂ ಸಹಾಯಕರ ನೆರವಿನಿಂದ ಬದಲಾವಣೆ ಕಾರ್ಯ ಕೈಗೊಳ್ಳಬೇಕಾಗುತ್ತದೆ. ಈ ಕಾರ್ಯ ವಿಳಂಬವಾದರೆ ಇಲಾಖೆ ಹಾಗೂ ಸರ್ಕಾರ ಮುಜುಗರ ಅನುಭವಿಸಬೇಕಾಗುತ್ತದೆ ಎಂದು ವಿಶು ಕುಮಾರ್ ಹೇಳಿದರು.

ಇದು ಕೇವಲ ಒಂದು ಇಲಾಖೆಯ ಅನುಭವ. ಉಳಿದಂತೆ ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಪ್ರವಾಸೋದ್ಯಮ ಹಾಗೂ ಕೃಷಿ ಇಲಾಖೆಗಳಲ್ಲಿ ಕೂಡಾ ಭಿತ್ತಿಚಿತ್ರ, ಭಾವ ಚಿತ್ರ ಹಾಗೂ ದಾಖಲಾತಿ ಬದಲಾವಣೆಯಾಗಬೇಕಾಗುತ್ತದೆ. ಜಾಹೀರಾತು ಫಲಕಗಳನ್ನು ಬದಲಿಸಬಹುದಾದರೂ, ಪುಸ್ತಕ ಹಾಗೂ ಹಲವು ಕಡತಗಳನ್ನು ಮರು ಮುದ್ರಣ ಮಾಡಲೇಬೇಕು ಇದರ ಅಂದಾಜು ವೆಚ್ಚ 5 ಕೋಟಿ ರು ಮೀರುತ್ತದೆ.

ಈ ಎಲ್ಲಾ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಟೆಂಡರ್ ಕರೆಯಲಾಗುತ್ತದೆ. ಸಿಎಂ ಸೀಟು ಬದಲಾಯಿಸಿದ್ದಷ್ಟು ಸುಲಭವಾಗಿ ಅವರ ಭಾವಚಿತ್ರ ಬದಲಿಸಲು ಬರುವುದಿಲ್ಲ. ಬದಲಾವಣೆಯಾದರೂ ಅದರ ವೆಚ್ಚ ಕೋಟಿ ರು ದಾಟುತ್ತದೆ ಎಂಬುದು ನಂಬಲೇಬೇಕಾದ ಸತ್ಯ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kanrataka government department are having nightmare as frequent change of chief minister post is not only embrrassing public also government officials. Information departemnt director Vishu Kumar said, it cost around Rs 5 Cr to change all hoardings and government advertisement across state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more