ಬೆಳಗಾವಿ : ಗೃಹಿಣಿ ಮೇಲೆ ಕಾಮುಕನ ಆಸಿಡ್ ದಾಳಿ

ನಗರದಲ್ಲಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಸಂದೀಪ್ ಪಾಟೀಲ್ ಅವರು ಗುರುವಾರ ನಡೆಸಿದ ಜನತಾ ದರ್ಶನದ ಸಂದರ್ಭದಲ್ಲಿ ಈ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಜೊತೆಗೆ ಬಡವ ಮತ್ತು ಸಂತ್ರಸ್ತರ ಸಹಾಯಕ್ಕೆ ಧಾವಿಸದ ಪೊಲೀಸ್ ಇಲಾಖೆಯ ಅಸಡ್ಡೆತನ, ನಿಷ್ಕ್ರಿಯತೆಯನ್ನೂ ಬಯಲು ಮಾಡಿದೆ.
ಕಾಮುಕ ವ್ಯಕ್ತಿಯಿಂದ ಆಸಿಡ್ ದಾಳಿಗೆ ಒಳಗಾದ 33 ವರ್ಷದ ಗೃಹಿಣಿ ಉಜ್ವಲಾ ಜಿನಪ್ಪ ಬಸ್ತವಾಡ ಅವರು ಹುಕ್ಕೇರಿ ತಾಲೂಕಿನ ಹೊಸೂರು ಗ್ರಾಮದವರು. ಆಸಿಡ್ ದಾಳಿಯಿಂದಾಗಿ ಅವರ ಮುಖ ಸಂಪೂರ್ಣ ಸುಟ್ಟಿದ್ದು ಅವರನ್ನು ಘಟಪ್ರಭಾದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನಡೆದಿದ್ದೇನು? : ಅಪರಿಚಿತ ವ್ಯಕ್ತಿಯೊಬ್ಬ ಕಳೆದ ಒಂದು ವರ್ಷದಿಂದ ಉಜ್ವಲಾರಿಗೆ ಫೋನ್ ಮಾಡಿ ಅಶ್ಲೀಲವಾಗಿ ಮಾತನಾಡುತ್ತ ಸರಸಕ್ಕೆ ಬಾ ಎಂದೆಲ್ಲ ಪೀಡಿಸುತ್ತಿದ್ದ. ಇದನ್ನು ಗಂಡನಿಗೆ ತಿಳಿಸಿ ನಂತರ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ನವೆಂಬರ್ 24, 2011ರಂದೇ ದೂರು ನೀಡಲಾಗಿತ್ತು. ಪೀಡಕನ ಫೋನ್ ನಂಬರ್ ನೀಡಲಾಗಿದ್ದರೂ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಕೇಳಿದಾಗಲೆಲ್ಲ ಬೆಂಗಳೂರಿಗೆ ಫೋನ್ ನಂಬರ್ ಕಳಿಸಲಾಗಿದೆ ಎಂದು ಸಬೂಬು ನೀಡುತ್ತಿದ್ದರು.
ಪೊಲೀಸರಿಗೆ ದೂರು ನೀಡಿರುವುದು ತಿಳಿಯುತ್ತಿದ್ದಂತೆ ನಾಗರಪಂಚಮಿಯ ದಿನ ಆಸಿಡ್ ಹಾಕಿ ಸುಟ್ಟುಬಿಡುವುದಾಗಿ ಅಪರಿಚಿತ ಫೋನ್ ಮಾಡಿ ಬೆದರಿಕೆ ಹಾಕಿದ್ದ. ಜು.17ರಂದು ರಾತ್ರಿ 3 ಗಂಟೆಗೆ ಉಜ್ವಲಾ ಅವರ ಮನೆ ಬಾಗಿಲು ಯಾರೋ ಬಾರಿಸಿದ್ದಾರೆ. ಆಗ ಬಾಗಿಲು ತೆಗೆದ ಉಜ್ವಲಾ ಅವರ ಮುಖದ ಮೇಲೆ ಆಸಿಡ್ ದಾಳಿ ಮಾಡಿ ದುಷ್ಕರ್ಮಿ ಪರಾರಿಯಾಗಿದ್ದಾನೆ. ದಟ್ಟ ಕತ್ತಲು ಇದ್ದದ್ದರಿಂದ ದಾಳಿ ಮಾಡಿದವರು ಯಾರು ಎಂದು ಉಜ್ವಲಾಗೆ ಗೊತ್ತಾಗಿಲ್ಲ.
ಈ ಘಟನೆ ನಡೆದು ಮೂರು ದಿನಗಳಾದರೂ ಪೊಲೀಸರು ದಾಳಿಕೋರನನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೆ. ಪೊಲೀಸರ ನಿಷ್ಕ್ರಿಯತೆಯಿಂದ ಬೇಸತ್ತ ಉಜ್ವಲಾ ಕುಟುಂಬದವರು ನೇರವಾಗಿ ಜನತಾ ದರ್ಶನಕ್ಕೆ ಬಂದು ಪೊಲೀಸ್ ಸುಪರಿಂಟೆಂಡೆಂಟ್ ಸಂದೀಪ್ ಪಾಟೀಲ್ ಅವರಿಗೆ ದೂರು ನೀಡಿದ್ದಾರೆ. ಉಜ್ವಲಾ ಅವರು ಸ್ವತಃ ತಮ್ಮ ಮಗನ ಪ್ರಜ್ವಲ್ ಜೊತೆ ಬಂದು ದೂರು ನೀಡಿದ್ದಾರೆ. "ನನಗೆ ನ್ಯಾಯ ದೊರಕಿಸಿಕೊಡಿ, ತಪ್ಪಿತಸ್ಥನನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಿ" ಎಂದು ಆಕೆ ಪೊಲೀಸ್ ಅಧಿಕಾರಿಯನ್ನು ಕೋರಿದ್ದಾರೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಂದೀಪ್ ಪಾಟೀಲ್ ಅವರು ತಪ್ಪಿತಸ್ಥ ಯಾರೇ ಆಗಿರಲಿ ಖಂಡಿತ ಬಂಧಿಸುತ್ತೇವೆ ಎಂದು ವಾಗ್ದಾನ ನೀಡಿದ್ದಾರೆ. ಶಹಾಪುರದಲ್ಲಿ ಕೂಡ ಕೆಲ ದಿನಗಳ ಹಿಂದೆ ಇಂಥದೇ ಘಟನೆ ನಡೆದಿತ್ತು. ಆಗ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದವು ಎಂದು ಹೇಳಿರುವ ಅವರು, ಈ ಘಟನೆಯ ಆರೋಪಿಯನ್ನೂ ಖಂಡಿತ ಬಂಧಿಸುತ್ತೇವೆ ಎಂದಿದ್ದಾರೆ. ಆಸಿಡ್ ದಾಳಿಕೋರ ಮಾತ್ರವಲ್ಲ, ಸರಿಯಾದ ಸಮಯದಲ್ಲಿ ಆ ಅಪರಿಚಿತನನ್ನು ಬಂಧಿಸುವಲ್ಲಿ ವಿಫಲರಾದ ಪೊಲೀಸ್ ಅಧಿಕಾರಿಗಳ ವಿರುದ್ಧ ಕೂಡ ಪಾಟೀಲರು ಕ್ರಮ ತೆಗೆದುಕೊಳ್ಳಬೇಕು.
ಅಪರಾಧಿಗೆ 10 ವರ್ಷ ಜೈಲು ಶಿಕ್ಷೆ : ಆಸಿಡ್ ದಾಳಿಯನ್ನು 10 ವರ್ಷ ಜೈಲು ಶಿಕ್ಷೆ ನೀಡಬಹುದಾದ ಅಪರಾಧ ಎಂದು ಪರಿಗಣಿಸಿರುವ ಕೇಂದ್ರ ಸರಕಾರ, ಇದಕ್ಕೆ ಸಂಬಂಧಿಸಿದ ಕರಡು ವಿಧೇಯಕವನ್ನು ಅಂಗೀಕರಿಸಿ ಮಹತ್ವದ ನಿರ್ಣಯವನ್ನು ತೆಗೆದುಕೊಂಡಿದೆ. ಇಲ್ಲಿಯವರೆಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 326 ಮತ್ತು 306ರ ಅಡಿಯಲ್ಲಿ ಅಪರಾಧಿಗೆ 2 ವರ್ಷ ಮಾತ್ರ ಜೈಲು ಶಿಕ್ಷೆ ವಿಧಿಸಲಾಗುತ್ತಿತ್ತು.
-
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
ಬೆಂಗಳೂರು 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ vs ಹೊಸೂರು ಏರ್ಪೋರ್ಟ್: ಯೋಜನೆ ಯಾವ ಹಂತದಲ್ಲಿದೆ -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ












Click it and Unblock the Notifications