• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾರ್ಕಿಂಗ್ ದಂಡ: ಪೊಲೀಸರ ರುಂಡಾಡಿದ ಚಂಡಿ

By Srinath
|

ಹೈದರಾಬಾದ್‌, ಜುಲೈ 19: ಅನಧಿಕೃತ ಜಾಗದಲ್ಲಿ ಕಾರು ಪಾರ್ಕ್ ಮಾಡಿದ ಮಹಿಳೆಗೆ ದಂಡ ವಿಧಿಸಿದ ತಪ್ಪಿಗೆ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಮತ್ತು ಒಬ್ಬ ಹೋಂಗಾರ್ಡ್ ಹಲ್ಲೆಗೀಡಾಗಿದ್ದಾರೆ. ಇಲ್ಲಿನ ಅಮೀರ್ ಪೇಟೆಯಲ್ಲಿ ಬುಧವಾರ ಈ ಘಟನೆ ನಡೆದಿದೆ.

32 ವರ್ಷದ ದಿವ್ಯಾ ದತ್ತಾ ದುಬೆ ಎಂಬ ಮಹಿಳೆ ಇಲ್ಲಿನ ಗ್ರೀನ್ ಪಾರ್ಕ್ ಪಂಚತಾರಾ ಹೋಟೆಲಿನಲ್ಲಿ ಸೇಲ್ಸ್ ಮ್ಯಾನೇಜರ್ ಆಗಿದ್ದಾರೆ. ದಿವ್ಯಾ ದುಬೆ ನಿನ್ನೆ ಮಧ್ಯಾಹ್ನ 12.30ರಲ್ಲಿ ತಮ್ಮ ಇಂಡಿಕಾ ಕಾರನ್ನು no parking ಜಾಗದಲ್ಲಿ ನಿಲ್ಲಿಸಿದ್ದರು.

ಅದನ್ನು ಕಂಡ ಪಂಜಾಗೂಡ ಟ್ರಾಫಿಕ್ ಸಬ್‌ಇನ್ಸ್‌ಪೆಕ್ಟರ್ ರಾಜಗೋಪಾಲ್ ರೆಡ್ಡಿ ಅವರು ದಿವ್ಯಾ ದುಬೆಯ ಕಾರ್ ಡ್ರೈವರ್ ಮೊಹಮದ್ ಮೊಹ್ಸಿನ್ ಗೆ ಕರೆದು, 200 ರುಪಾಯಿ ದಂಡದ ಚಲನ್ ನೀಡಿದರು. ಇದನ್ನು ಕಂಡು ರೋಡ್ ರೇಗಮ್ಮನಾದ ದಿವ್ಯಾ ದುಬೆ ಕಾರಿನಿಂದ ಇಳಿದವರೆ ಸಬ್‌ಇನ್ಸ್‌ಪೆಕ್ಟರ್ ರಾಜಗೋಪಾಲರತ್ತ ನುಗ್ಗಿದರು.

'ಕಾರ್ ಡ್ರೈವರ್ ಮೊಹಮದ್ ನಿಂದ ದಂಡ ಕಟ್ಟಿಸಿಕೊಂಡಿದ್ದಕ್ಕೆ ಕಾರಿನಲ್ಲಿದ್ದ ದಿವ್ಯಾ ದುಬೆ ನನ್ನೊಂದಿಗೆ ವಾಗ್ವಾದಕ್ಕೆ ಇಳಿದರು. ಚಲನ್ ಬುಕ್ ಅನ್ನು ಹರಿದುಹಾಕಿದರು. ಆ ಸಂದರ್ಭದಲ್ಲಿ ಮಹಿಳೆಯ ಫೋಟೋ ತೆಗೆಯುವಂತೆ ಹೋಂಗಾರ್ಡ್ ಗೆ ಸೂಚಿಸಿದೆ. ಅದರಿಂದ ಮತ್ತಷ್ಟು ಕುಪಿತಳಾದ ದಿವ್ಯಾ ದುಬೆ ಆತನ ಕೊರಳ ಪಟ್ಟಿ ಹಿಡಿದಳು.

ಆಕೆಯ ರಂಪಾಟವನ್ನು ದಾಖಲಿಸಲು ನಾನೇ ಫೋಟೋ ತೆಗೆಯಲು ಮುಂದಾದೆ. ತನ್ನ ಮುಖ, ಕತ್ತನ್ನು ಪರಚಿದಳು. ಅಲ್ಲೆಲ್ಲ ರಕ್ತ ಹರಿದಿದೆ' ಎಂದು ಸಬ್‌ಇನ್ಸ್‌ಪೆಕ್ಟರ್ ರಾಜಗೋಪಾಲ್ ವೃತ್ತಾಂತವನನ್ನು ಬಿಡಿಸಿಟ್ಟಿದ್ದಾರೆ.

ಸಬ್‌ಇನ್ಸ್‌ಪೆಕ್ಟರ್ ರಾಜಗೋಪಾಲ್ ಘಟನೆಯ ಬಳಿಕ ದಿವ್ಯಾ ದುಬೆಯನ್ನು ಪಂಜಾಗೂಡ ಪೊಲೀಸರ ವಶಕ್ಕೆ ಒಪ್ಪಿಸಿದರು. ಪಂಜಾಗೂಡ ಠಾಣೆಯ ಇನ್ಸ್‌ಪೆಕ್ಟರ್ ತಿರುಪತಿ ರಾವ್ ಅವರು ಮಧ್ಯಾಹ್ನ 3 ಗಂಟೆಯ ವೇಳೆಗೆ ದಿವ್ಯಾ ದುಬೆಯನ್ನು ಬಂಧಿಸಿದರು.

ಐಪಿಸಿ ಸೆಕ್ಷನ್ 332 (ಸರಕಾರಿ ಅಧಿಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ) ಮತ್ತು 353 (ಕರ್ತವ್ಯನಿರತ ಸರಕಾರಿ ಉದ್ಯೋಗಿಯ ಮೇಲೆ ಹಲ್ಲೆ ನಡೆಸಿದ ಆಪಾದನೆ) ಅನುಸಾರ ದಿವ್ಯಾ ದುಬೆ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ಇಂದು (ಗುರುವಾರ) ನ್ಯಾಯಾಲಯದಲ್ಲಿ ಹಾಜರುಪಡಿಸುವುದಾಗಿ ಇನ್ಸ್‌ಪೆಕ್ಟರ್ ತಿರುಪತಿ ರಾವ್ ಹೇಳಿದ್ದಾರೆ. ಈ ಘಟನೆಯ ನೀತಿಪಾಠ ಏನು ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 32 year old Divya Dutta Dubey sales manager with Marigold, Green Park Hotel, Ameerpet, had parked the Indica car in a “no parking” area at 12.30 pm and was challaned Rs 200 by the Panjagutta traffic police. Irritated by the fine action by police she scratched traffic sub-inspector on his face, leaving his cheek and neck bleeding.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more