ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

JDS ಸಭೆಯಲ್ಲಿ 8ಸಾವಿರ ಹಿಂದುಗಳಿಗೆ ಮುಸ್ಲಿಂ ಟೋಪಿ

|
Google Oneindia Kannada News

Former MLC Abdul Ajeem resigns from JDS
ಬೆಂಗಳೂರು, ಜು 16: ಜೆಡಿಎಸ್ ಪಕ್ಷಕ್ಕೆ ನಿಯತ್ತಿನಿಂದ ಕೆಲಸ ಮಾಡುವವರು ಬೇಕಾಗಿಲ್ಲ. ಕುಮಾರಸ್ವಾಮಿಗೆ ನನ್ನ ಏಳಿಗೆ ನೋಡಿ ಸಹಿಸಲಾಗುತ್ತಿಲ್ಲ. ಸುಮಾರು ಎಂಟು ಸಾವಿರ ಹಿಂದೂಗಳಿಗೆ ಮುಸ್ಲಿಂ ಟೋಪಿ ಹಾಕಿ ಸಮಾವೇಶಕ್ಕೆ ಕರೆತರಲಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅಬ್ದುಲ್ ಅಜೀಂ ವಿವಾದಕಾರಿ ಹೇಳಿಕೆ ನೀಡಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ಭಾನುವಾರ (ಜು 15) ನಡೆದ ಜಾತ್ಯಾತೀತ ಜನತಾದಳದ ಮುಸ್ಲಿಂ ಸಮಾವೇಶದ ಮುನ್ನ ಮಾಜಿ ಪ್ರಧಾನಿ ಮತ್ತು ಪಕ್ಷದ ರಾಷ್ಟ್ರಾಧ್ಯಕ್ಷ ದೇವೇಗೌಡ ಅವರಿಗೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಪತ್ರ ಸಲ್ಲಿಸಿ ಅಜೀಂ ಮಾತನಾಡುತ್ತಿದ್ದರು.

ಪೋಲೀಸ್ ಅಧಿಕಾರಿಯಾಗಿದ್ದ ನನ್ನನ್ನು ಮಾಜಿ ಪ್ರಧಾನಿ ಗೌಡರು ಗುರುತಿಸಿ ರಾಜಕೀಯಕ್ಕೆ ಕರೆತಂದು ಉತ್ತಮ ಕೆಲಸ ಮಾಡಲು ಅವಕಾಶ ಒದಗಿಸಿದರು. ಅದಕ್ಕಾಗಿ ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ.

ಮಾಜಿ ಸಿಎಂ ಕುಮಾರಸ್ವಾಮಿಗೆ ನನ್ನ ಬೆಳವಣಿಗೆ ನೋಡಿ ಸಹಿಸಲಾಗುತ್ತಿಲ್ಲ. ನನ್ನನ್ನು ತುಳಿಯಲು ಪ್ರಯತ್ನಿಸುತ್ತಿದ್ದಾರೆ. ಇದರಿಂದ ನೊಂದ ಮನಸ್ಸಿನಿಂದ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಅಜೀಂ ಹೇಳಿದ್ದಾರೆ.

ನಾನು ಜೆಡಿಎಸ್ ತೊರೆದರೂ ರಾಜಕೀಯ ಬಿಡುವುದಿಲ್ಲ. ಸ್ವತಂತ್ರವಾಗಿ ಸಮಾಜಸೇವೆ ಮುಂದುವರಿಸುತ್ತೇನೆ. ಸದ್ಯಕ್ಕೆ ಯಾವುದೇ ಪಕ್ಷಕ್ಕೆ ಸೇರದಿರಲು ನಿರ್ಧರಿಸಿದ್ದೇನೆ.

ಮುಂದಿನ ದಿನಗಳಲ್ಲಿ ಬೇರೆ ಪಕ್ಷ ಸೇರುವ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಅಜೀಂ ಹೇಳಿದ್ದಾರೆ.

ಕಳೆದ ಜೂನ್ ಎರಡರಂದು ಅಜೀಂ ಪಕ್ಷದ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಎಂಎಲ್ಸಿ ಚುನಾವಣೆಗೆ ಕುಮಾರಸ್ವಾಮಿ ರಾಮನಗರ ಕ್ಷೇತ್ರದಿಂದ ಅಫ್ಸರ್ ಆಗಾ ಅವರಿಗೆ ಟಿಕೆಟ್ ನೀಡಿದ ನಂತರ ಕುಮಾರಸ್ವಾಮಿ ಮತ್ತು ಅಜೀಂ ನಡುವೆ ಭಿನ್ನಮತ ತಲೆದೋರಿತ್ತು.

ಎರಡನೇ ಬಾರಿಗೆ ತನ್ನನ್ನು ಮುಂದುವರಿಸುವಂತೆ ಅಜೀಂ ಕೋರಿಕೆಯನ್ನು ಎಚ್ಡಿಕೆ ನಿರಾಕರಿಸಿದ್ದರು.

ಜೆಡಿಎಸ್ ಈ ಆಯೋಜಿಸಿದ್ದ ಮುಸ್ಲಿಂ ವಿಶೇಷ ಸಮಾವೇಶದಲ್ಲಿ ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಂದ ಲಕ್ಷಾಂತರ ಮಂದಿ ಭಾಗವಹಿಸಿದ್ದರು.

English summary
Former MLC Abdul Ajeem resigns from JDS primary membership. Rift between Ajeem and former CM H D Kumaraswamy started when JDS decided to field Afsar Agha from Ramanagar for MLC election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X