• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲ್ಯಾಪ್‌ಟಾಪ್‌ ಬದಲು ಇಟ್ಟಿಗೆ: ಯಾಮಾರಿದ ಟೆಕ್ಕಿ

By Srinath
|
bangalore-techie-sunilkumar-duped-of-iphone-laptop
ಬೆಂಗಳೂರು‌, ಜುಲೈ 14: 'ಮೋಸ ಹೋಗುವವರು ಇರೋವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ' ಎಂಬ ಕಹಿ ಸತ್ಯವನ್ನು ಮತ್ತೊಮ್ಮೆ ಹೇಳಬೇಕಾಗಿದೆ. ಈ ಪ್ರಕರಣದಲ್ಲಿ ಮೋಸ ಹೋಗಿರುವವರು ಒಬ್ಬ ಟೆಕ್ಕಿ ಅಂದರೆ ಸಾಫ್ಟ್ ವೇರ್ ಇಂಜಿನಿಯರ್. ಈ ಟೆಕ್ಕಿಗಳು professionally ನಿಜಕ್ಕೂ ಪ್ರಕಾಂಡ ಪಂಡಿತರೇ ಇರಬಹುದು ಆದರೆ ಬದುಕಿನ ಬಗ್ಗೆ ಹೇಳೋಣವೆಂದರೆ ತುಸು ದಡ್ಡರೇ ಅನ್ನಬಹುದು. ಸುಲಭವಾಗಿ ಯಾಮಾರುವುದು, ಅಪರಾಧಗಳಲ್ಲಿ ತೊಡಗುವವರು ಇವರಲ್ಲಿ ಬಹಳಷ್ಟು ಮಂದಿ.

ನಿನ್ನೆಯೂ ಹೀಗೇ ಆಗಿದೆ: ಲ್ಯಾಪ್‌ಟಾಪ್‌ ಮತ್ತು ಐಫೋನ್ ಅಗ್ಗವಾಗಿ ಸಿಗುತ್ತದೆ ಎಂದು ಸುನೀಲ್ ಕುಮಾರ್ ಎಂಬ ಸಾಫ್ಟ್ ವೇರ್ ಇಂಜಿನಿಯರೊಬ್ಬರು 30 ಸಾವಿರ ರುಪಾಯಿ ಕಳೆದುಕೊಂಡಿದ್ದಾರೆ. ಜೆಪಿ ನಗರದಲ್ಲಿ ಬುಧವಾರ ಈ ಪ್ರಸಂಗ ನಡೆದಿದೆ.

ಏನಾಯಿತೆಂದರೆ ಜೆಪಿ ನಗರದ ಮೂರನೆಯ ಹಂತದಲ್ಲಿ ಐನಾತಿ ಆಸಾಮಿಯೊಬ್ಬ ಸುನೀಲ್ ಅವರನ್ನು ಭೇಟಿಯಾಗಿದ್ದಾರೆ. 'ಆ ಆಸಾಮಿ ಇವರಿಗೆ ಹೇಳಿದ್ದು ಇಷ್ಟೇ: ನೋಡಿ ಸಾರ್, ನನ್ನ ಬಳಿ 38 ಸಾವಿರ ರೂಪಾಯಿಯ ಐಫೋನು ಮತ್ತು 45 ಸಾವಿರ ರೂಪಾಯಿಯ ಲ್ಯಾಪ್‌ಟಾಪ್‌ ಇದೆ. ಆದರೆ ಇವೆರಡನ್ನೂ ನಿಮಗೇ ಅಂತ ಕೇವಲ 30 ಸಾವಿರ ರೂಪಾಯಿಗೆ ಕೊಡಬೇಕು ಅಂದ್ಕೊಂಡಿದ್ದೀನಿ. ಬೇಡ ಅನ್ನಬೇಡಿ. ದಯವಿಟ್ಟು ತಗೋಳಿ' ಎಂದು ಪುಸಲಾಯಿಸಿದ್ದಾನೆ. ಅಷ್ಟೇ ...

face valueನಲ್ಲಿ ಆತನನ್ನು ನಂಬಿದ ಟೆಕ್ಕಿ ಸುನೀಲ್ (26), 'ಹೌದಾ. ಹಾಗಾದ್ರೆ. ಇಲ್ಲೇ ATM ನಿಂದ ಅಷ್ಟೂ ದುಡ್ಡನ್ನು ತರುವೆ' ಅಂತ ಹೇಳಿದ್ದೂ ಅಲ್ಲದೆ ಈದಾ ಸಮೀಪದ ATMಗೆ ಹೋಗಿ ಒಂದಷ್ಟು ಹಣ ಡ್ರಾ ಮಾಡಿ, ಅದರ ಜತೆಗೆ ಜೇಬಿನಲ್ಲಿದ್ದಿದ್ದನ್ನೂ ಸೇರಿಸಿ, ಕಷ್ಟಪಟ್ಟು ದುಡಿದಿದ್ದ 30 ಸಾವಿರ ರುಪಾಯಿಯನ್ನು ಆ ಆಸಾಮಿ ಕೈಗೆ ಕೊಟ್ಟಿದ್ದಾರೆ.

ಅವನೋ 'ಸರಿಯಾದ ಮಿಕವೇ ತನ್ನ ಬಲೆಗೆ ಬಿದ್ದಿದೆ' ಎಂಬ ಸುಳಿವರಿತು ಟೆಕ್ಕಿ ಸುನೀಲನನ್ನು ಮತ್ತಷ್ಟು ಪುಸಲಾಯಿಸಿದ್ದಾನೆ. ಟೆಕ್ಕಿ ಸುನೀಲ್ 83 ಸಾವಿರ ರುಪಾಯಿ ಬೆಲೆ ಬಾಳುವ gadgets ಅನಾಯಾಸವಾಗಿ ಸಿಗುತ್ತಿದೆಯೆಂದು ಒಳಗೊಳಗೇ ಸಂತಸಪಡುತ್ತಾ, ಹೆಚ್ಚು cross question ಮಾಡದೆ ಹಣ ನೀಡಿ, ಬಣ್ಣ ಬಣ್ಣದ ಬ್ಯಾಗನ್ನು ಪಡೆದು ಮನೆ ಕಡೆ ಖುಷಿಯಿಂದ ಹೆಜ್ಜೆ ಹಾಕಿದ್ದಾನೆ. ಅಷ್ಟೇ... ಇನ್ನೇನು ಮನೆಯೊಳಕ್ಕೆ ಹೆಜ್ಜೆ ಹಾಕಬೇಕು ಅಂತಿದ್ದ ಟೆಕ್ಕಿ ಸುನೀಲ್ ಗೆ ಯಾಕೋ ಅನುಮಾನ ಬಂದಿದೆ.

ಮನೆ ಮುಂದೆ ನಿಂತು ಬ್ಯಾಗನ್ನು ಬಿಚ್ಚಿ ನೋಡಿದ್ದಾನೆ. ಒಳಗೆ ಲ್ಯಾಪ್‌ಟಾಪೂ ಇಲ್ಲ; ಐಫೋನು ಇಲ್ಲ. ಬದಲಿಗೆ ಚೆಂದದ ಇಟ್ಟಿಗೆಯೊಂದು ಕಿಸಕ್ಕಂತ ನಕ್ಕಿದೆ. ಸುನಿಲನಿಗೆ ಎದೆ ಧಸಕ್ಕೆಂದಿದೆ. ವಾಸ್ತವಕ್ಕೆ ಮರಳಿದವನೇ ಎದ್ನೋ ಬಿದ್ನೋ ಎಂದು ATM ಕೇಂದ್ರದತ್ತ ಓಡಿದ್ದಾರೆ. ಹೋಗುವಷ್ಟೊತ್ತಿಗೆ ಅಲ್ಲೇನಿದೆ!? ವಂಚಕ ಅಲ್ಲಿಂದ ಕಾಲ್ಕಿತ್ತು ಬೇರೊಂದು ಮಿಕದ ಬೇಟೆಯಲ್ಲಿ ತೊಡಗಿದೆ. ಟೆಕ್ಕಿ ಸುನೀಲ್ ಹ್ಯಾಪ್ ಮೋರೆ ಹಾಕಿಕೊಂಡು ಜೆಪಿ ನಗರ ಪೊಲೀಸ್ ಠಾಣೆಗೆ ಹೋಗಿದ್ದಾರೆ. ದೂರು ದಾಖಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಕಳ್ಳತನ ಸುದ್ದಿಗಳುView All

English summary
A 26 year old techie Sunil Kumar was duped of Iphone Laptop for brick in JP Nagar, Bangalore on July 11th.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more