ಸದಾನಂದ ಗೌಡ, ಯಡಿಯೂರಪ್ಪ ಪುಂಡಾನೆಗಳು

ಈ ಮಧ್ಯೆ, ಸದಾನಂದ ಗೌಡ ಬಣ ಶಾಸಕಾಂಗ ಸಭೆಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದೆ. ಅಶೋಕಾ ಹೋಟೆಲಿನಲ್ಲಿ ಪಕ್ಷದ ವರಿಷ್ಠರು ಕಿವಿ ಹಿಂಡಿದ ಮೇಲೆ ಸೀದಾ ಕ್ಯಾಪಿಟಲ್ ಹೋಟೆಲಿನತ್ತ ಸದಾನಂದ ಬಣ ಬಿರುಸಿನ ಹೆಜ್ಜೆ ಹಾಕಿದೆ. ಆದ್ದರಿಂದ ಕೆಲವೇ ಕ್ಷಣಗಳಲ್ಲಿ ಸಭೆ ಆರಂಭವಾಗಲಿದೆ.
ಇದಕ್ಕೆಲ್ಲ ಕಾರಣೀಭೂತರಾಗಿರುವುದು ಪಕ್ಷದ ನಾಯಕರು. ಸದಾನಂದ ಗೌಡ ಮತ್ತು ಯಡಿಯೂರಪ್ಪ ಇಬ್ಬರೂ ಪುಂಡಾನೆಗಳು (rogues) ಎಂದು ಸಿದ್ದರಾಮಯ್ಯ ಪ್ರಕಟಿಸಿದ್ದಾರೆ. ರಾಜ್ಯದಲ್ಲಿ ಸರಕಾರವೇ ಇಲ್ಲ. ಆಡಳಿತ ಯಂತ್ರ ಕುಸಿದುಬಿದ್ದಿದೆ. ರಾಜ್ಯಪಾಲರು ವಿಧಾನಸಭೆಯನ್ನು ಬರಕಾಸ್ತುಗೊಳಿಸಿ, ಚುನಾವಣೆಗೆ ಅನುವು ಮಾಡಿಕೊಡಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಹಾಗೆ ನೋಡಿದರೆ ಬಿಜೆಪಿಯಲ್ಲಿ ಎಲ್ಲವೂ ಸುಖಾಂತ್ಯ ಕಾಣುತ್ತಿದೆ. ಇನ್ನಾದರೂ ನಾವು ನಮ್ಮ ಮನೆಯನ್ನು ಸರಿ ತಿದ್ದಿಕೊಳ್ಳೋಣ ಎಂದು ಸಿದ್ದರಾಮಯ್ಯ (ಮತ್ತು ಪರಮೇಶ್ವರ) ದೆಹಲಿಗೆ ಹೊರಟಿದ್ದರು. ಆದರೆ ಅವರನ್ನೇ ಬೆಚ್ಚಿಬೀಳಿಸುವಂತೆ ಬೆಂಗಳೂರಿನಲ್ಲಿ ಬಿಜೆಪಿ ನಾಯಕರು ಬೀದಿಜಗಳದಲ್ಲಿ ತೊಡಗಿದ್ದಾರೆ.












Click it and Unblock the Notifications