• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೋರ್ಚುಗಲ್ ಕ್ಲಬ್ ಗೆ ಸೇರಿದ ಫುಟ್ಬಾಲ್ ತಾರೆ ಸುನಿಲ್

By Mahesh
|
Google Oneindia Kannada News
ನವದೆಹಲಿ, ಜು.5: ಭಾರತ ರಾಷ್ಟ್ರೀಯ ಫುಟ್ಬಾಲ್ ತಂಡದ ನಾಯಕ , ಸ್ಟ್ರೈಕರ್ ಸುನಿಲ್ ಛೆತ್ರಿ ಸಂತಸದಿಂದ ಕುಣಿಯುವ ಸುದ್ದಿ ಸಿಕ್ಕಿದೆ. ಸುನಿಲ್ ರನ್ನು ಪೋರ್ಚುಗಲ್ ನ ಪ್ರತಿಷ್ಠಿತ ಕ್ಲಬ್ ಆದ Clube de Portugal ತನ್ನ 'ಬಿ' ತಂಡಕ್ಕೆ ಆಯ್ಕೆ ಮಾಡಿದೆ.

ಜೀವಮಾನದಲ್ಲಿ ಒಮ್ಮೆ ಸಿಗಬಹುದಾದ ಅವಕಾಶ ಛೆತ್ರಿಗೆ ಲಭಿಸಿದೆ. ವಿಶ್ವದ ಅಗ್ರಮಾನ್ಯ ಫುಟ್ಬಾಲ್ ರಾಷ್ಟ್ರ ಪೋರ್ಚುಗಲ್ ನಲ್ಲಿ ಸುನಿಲ್ ಆಡಲಿದ್ದಾರೆ. ಪೋರ್ಚುಗಲ್ ನ ಫುಟ್ಬಾಲ್ ಕ್ಲಬ್ ಸ್ಪೋರ್ಟಿಂಗ್ ಲಿಸ್ಬನ್ ತಮ್ಮ ವಿದೇಶಿ ಆಟಗಾರನಾಗಿ ಭಾರತದ ಸ್ಟ್ರೈಕರ್ ಸುನಿಲ್ ಛೆತ್ರಿ ಅವರನ್ನು ಆಯ್ಕೆ ಮಾಡಿಕೊಂಡಿದೆ ಎಂದು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್(AIFF) ಅಧ್ಯಕ್ಷ ಪ್ರಫುಲ್ ಪಟೇಲ್ ಹೇಳಿದ್ದಾರೆ.

ಇದು ನನಗೆ ದೊಡ್ಡ ಗೌರವ. ಯುರೋಪಿನ ಅತ್ಯಂತ ಪ್ರತಿಷ್ಠಿತ ಕ್ಲಬ್ ಗಳಲ್ಲಿ ಒಂದಾಗಿರುವ ಸ್ಪೋರ್ಟಿಂಗ್ ಲಿಸ್ಬನ್ ನೊಂದಿಗೆ ಆಡುವುದು ನನ್ನ ಜೀವಮಾನದ ಸಂಭ್ರಮದ ಕ್ಷಣ. ನಾನು ಈ ದಿನಕ್ಕಾಗಿ ಕಾಯುತ್ತಿದ್ದೆ. ಈಗ ಕನಸು ನನಸಾಗಿದೆ. ನನ್ನ ರಾಷ್ಟ್ರ ಫುಟ್ಬಾಲ್ ಪಟ್ಟಿಯಲ್ಲಿ 165ನೇ ಸ್ಥಾನದಲ್ಲಿದೆ. ಪೋರ್ಚುಗಲ್ ತಂಡ 5ನೇ ಸ್ಥಾನದಲ್ಲಿದೆ ಎಂಬ ಅರಿವಿದೆ ಎಂದು ಸುನಿಲ್ ಹೇಳಿದ್ದಾರೆ.

'ಸಿಕ್ಕಿರುವ ಈ ಸುವರ್ಣ ಅವಕಾಶವನ್ನು ಬಳಸಿಕೊಂಡು ಭಾರತಕ್ಕೆ ಕೀರ್ತಿ ತರಲು ಪ್ರಯತ್ನಿಸುತ್ತೇನೆ' ಎಂದು ಛೆತ್ರಿ ತಿಳಿಸಿದರು.

ಛೆತ್ರಿ ಇದಕ್ಕೆ ಮೊದಲು ಕವೆಂಟ್ರಿ, ಕ್ವೀನ್ಸ್ ಪಾರ್ಕ್ ರೇಂಜರ್ಸ್ ಮತ್ತು ಗ್ಲಾಸ್ಗೋ ರೇಂಜರ್ಸ್ ಪರವಾಗಿ ಆಡಿದ್ದರು. ಆದರೆ ಇದರಲ್ಲಿ ಅವರಿಗೆ ಹೆಚ್ಚಿನ ಯಶಸ್ಸು ಸಿಕ್ಕಿರಲಿಲ್ಲ. ಮಾರ್ಚ್ 2010ರಲ್ಲಿ ಯುಎಸ್ಎ ನಲ್ಲಿನ ಕಾನ್ಸಾಸ್ ಸಿಟಿ ವಿಜಾರ್ಡ್ಸ್ ಕ್ಲಬ್ ಪರ ಆಡಿದ ಅನುಭವ ಪಡೆದಿದ್ದಾರೆ.

2011-12ರಲ್ಲಿ ಮೋಹನ್ ಬಗಾನ್ ಪರ ಆಡಿರುವ ಸುನಿಲ್ ಗೆ ಈಗ ಅದ್ಭುತ ಅವಕಾಶ ದೊರೆತಿದೆ. ಪೋರ್ಚುಗಲ್ ನ ತಾರೆಗಳಾದ ಕ್ರಿಶ್ಚಿಯಾನೋ ರೊನಾಲ್ಡೊ, ನಾನಿ ಆಡಿದ ಕ್ಲಬ್ ಗೆ ಸುನಿಲ್ ಪ್ರವೇಶಿಸುತ್ತಿದ್ದಾರೆ. ಹಳೆ ಹುಲಿ ಲೂಯಿಸ್ ಫಿಗೋ ಆಡಿದ ಕ್ಲಬ್ ಇದಾಗಿದೆ. ಅಲ್ಲದೆ ಯುರೋ 2012ರ 23 ಮಂದಿ ಆಟಗಾರರ ತಂಡಲ್ಲಿ 11 ಜನ ಇದೇ ಸ್ಫೋರ್ಟಿಂಗ್ ಲಿಸ್ಬನ್ ಕ್ಲಬ್ ನ ಸದಸ್ಯರು ಎಂದರೆ ಕ್ಲಬ್ ನ ಸಮರ್ಥವನ್ನು ಊಹಿಸಬಹುದು.

ಸುನಿಲ್ 2 ವರ್ಷದ ಒಪ್ಪಂದಕ್ಕೆ ಸಹಿ ಹಾಕಬೇಕಿದೆ. 'ಸುನಿಲ್ ಪ್ರತಿಭಾವಂತ ಆಟಗಾರ, ಬಿ, ಸಿ, ಡಿ ತಂಡ ಎನ್ನುವುದಕ್ಕಿಂತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಮನ್ನಣೆ ದೊರೆಕಿದ್ದು ಒಳ್ಳೆ ಬೆಳೆವಣಿಗೆ' ಎಂದು ಭಾರತದ ಮಾಜಿ ನಾಯಕ ಭೈಚುಂಗ್ ಭೂತಿಯಾ ಅಭಿಪ್ರಾಯಪಟ್ಟಿದ್ದಾರೆ. ವಿಜಯನ್, ಭೈಚುಂಗ್ ಭೂತಿಯಾ ನಂತರ ಭಾರತೀಯ ಫುಟ್ಬಾಲ್ ನಲ್ಲಿ ಕ್ರೇಜ್ ಹುಟ್ಟಿಸಿರುವ ಆಟಗಾರ ಸುನಿಲ್ ಗೆ ಒನ್ ಇಂಡಿಯಾ ತಂಡ ಶುಭ ಹಾರೈಸುತ್ತದೆ.

English summary
Indian football captain and ace Indian striker Sunil Chhetri has been roped in by top Portuguese club Sporting Clube de Portugal. Chhetri, 27, will play for the club's reserve team
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X