'ಸ್ವಯಂಕೃಷಿ' ವೀರ ಬಾಬು ಹೈದರಾಬಾದಿನಲ್ಲಿ ಬಂಧನ

ಬರಗೆಟ್ಟ ಶಿಡ್ಲಘಟ್ಟದ ಈ ಖದೀಮ ನೂರಾರು ಜನರ ವಿಶಾಲ ಹಣೆಗೆ ಕೋಟ್ಯಂತರ ರೂಪಾಯಿ ಉಂಡೆನಾಮ ತಿಕ್ಕಿ ಪರಾರಿಯಾಗಿದ್ದ ನಿರ್ದೇಶಕ, ನಿರ್ಮಾಪಕ ಹಾಗೂ ನಾಯಕ ನಟ ಎನ್. ವೀರೇಂದ್ರಬಾಬು ಮೇಲೆ ಹತ್ತಾರು ಕೇಸುಗಳು ಬಿದ್ದಿದ್ದವು. ಮೇ ತಿಂಗಳಲ್ಲಿ ತಮ್ಮೆಲ್ಲ ಸಂಸ್ಥೆಗಳಿಗೂ ದೊಡ್ಡ ಬೀಗ ಜಡಿದು ಬಾಬು ಪರಾರಿಯಾಗಿದ್ದ.
ಮೂರು ತಿಂಗಳ ಬಳಿಕ ಶೋಕಿಲಾಲಾ ವೀರೇಂದ್ರಬಾಬು ಮತ್ತು ಆತನ ಪಾಲುದಾರ ಅದೇ ಶಿಡ್ಲಘಟ್ಟದ ಎಂ ಮುರಳಿನನ್ನು ದೇವನಹಳ್ಳಿ ಪೊಲೀಸರು ಪಕ್ಕದ ಹೈದರಾಬಾದಿನಲ್ಲಿ ಬಂಧಿಸಿ, ಗುರುವಾರ ನಗರಕ್ಕೆ ಕರೆತಂದಿದ್ದಾರೆ.
ಮೂರು ತಿಂಗಳ ನಂತರ ಬಂಧನ: ಬಂಧನಕ್ಕೆ ಒತ್ತಡ ಹೆಚ್ಚಿದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಪೊಲೀಸರು ಕಣ್ಣಿಗೆ ಎಣ್ಣೆಹಾಕಿಕೊಂಡು ಹುಡುಕುತ್ತಿದ್ದರು. ನಿನ್ನೆಯೇ (ಬುಧವಾರ) ಈ ವಂಚಕ ಜೋಡಿಯನ್ನು ಹೈದರಾಬಾದಿನಲ್ಲಿ ಬಂಧಿಸಲಾಗಿಯಿತು. ಇಂದು ದೇವನಹಳ್ಳಿಯ ನ್ಯಾಯಾಲಯಕ್ಕೆ ಅವರನ್ನು ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ 'ಸ್ವಯಂಕೃಷಿ' ಕಂಪನಿಗಳಿಂದ ಮೋಸ ಹೋದ ನೂರಾರು ಮಂದಿ ದೇವನಹಳ್ಳಿಯ ಪೊಲೀಸ್ ಠಾಣೆಯ ಎದುರು ಜಮಾಯಿಸಿದ್ದಾರೆ. ಅಲ್ಪಾವಧಿಯಲ್ಲಿ ಜನರಿಂದ ಕೋಟ್ಯಂತರ ರುಪಾಯಿ ಠೇವಣಿ ಎತ್ತಿದ್ದ ಬಾಬುವಿನ ಸ್ವಯಂಕೃಷಿಯು ವಿನಿವಿಂಕ್, ಗುರು ಟೀಕ್ ಸಾಲಿಗೆ ಸೇರಿದೆ. ಬುದ್ಧಿಯಿಲ್ಲದ ನಮ್ಮ ಜನಕ್ಕೆ ಮತ್ತೆ ಅದೇ ಎಚ್ಚರಿಕೆಯ ಮಾತನ್ನು ಹೇಳುವುದಾದರೆ ಮೋಸ ಹೋಗೋಕ್ಕೆ ಜನ ಇರುವವರೆಗೂ ...












Click it and Unblock the Notifications