ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೈಲರ್ ಲಕ್ಷ್ಮಿನಾರಾಯಣ ಸಸ್ಪೆಂಡ್ ಆದೇಶ ರದ್ದು

By Mahesh
|
Google Oneindia Kannada News

HC gives relief to Jailer Lakshminarayana
ಬೆಂಗಳೂರು, ಜು.2: ಮೋಸ್ಟ್ ವಾಂಟೆಂಡ್ ಕ್ರಿಮಿನಲ್ ಮಸೂದ್ ನನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಅಕ್ರಮವಾಗಿ ಬಿಡುಗಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿದ್ದ ಜೈಲರ್ ಲಕ್ಷ್ಮಿನಾರಾಯಣಗೆ ರಿಲೀಫ್ ಸಿಕ್ಕಿದೆ. ಜೈಲರ್ ಲಕ್ಷ್ಮಿನಾರಾಯಣ ಅವರ ಅಮಾನತು ಆದೇಶವನ್ನು ರದ್ದುಗೊಳಿಸಿ ಸೋಮವಾರ (ಜು.2) ಹೈಕೋರ್ಟ್ ಆದೇಶ ಹೊರಡಿಸಿದೆ.

ಸೋಮವಾರ (ಏ.23) ಸರ್ಕಾರ ಆದೇಶ ಹೊರಡಿಸಿ, ಮುಖ್ಯ ಜೈಲು ಸೂಪರ್ ರಿಂಟೆಂಡ್ ಟಿಎಚ್ ಲಕ್ಷ್ಮಿನಾರಾಯಣ ಹಾಗೂ ಅವರ ಸಹಾಯಕಿ ಡಾ. ಅನಿತಾ ಅವರನ್ನು ಅಮಾನತುಗೊಳಿಸಿತ್ತು. ಅಮಾನತು ಆದೇಶದ ಪ್ರಶ್ನಿಸಿದ ಈ ಇಬ್ಬರು Karnataka Administrative Tribunal (KAT) ಗೆ ಮನವಿ ಸಲ್ಲಿಸಿದ್ದರು. ಸರ್ಕಾರದ ಅಮಾನತು

ಆದೇಶ ರದ್ದು ಕೋರಿ ಲಕ್ಷ್ಮೀನಾರಾಯಣ್ ಅವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾ ಎನ್ ಕುಮಾರ್ ಹಾಗೂ ನ್ಯಾ ಎಚ್ ಎಸ್ ಕೆಂಪಣ್ಣ ಅವರಿದ್ದ ವಿಭಾಗೀಯ ಪೀಠ ಅಮಾನತು ಆದೇಶವನ್ನು ಹಿಂಪಡೆಯುವಂತೆ ಸರ್ಕಾರಕ್ಕೆ ನಿರ್ದೇಶಿದರು.

ಆದರೆ, ಈ ನಡುವೆ ಲಕ್ಷ್ಮಿನಾರಾಯಣ ಅವರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿತ್ತು. ಪ್ರಕರಣದ ವಿಚಾರಣೆಗಾಗಿ ಲಕ್ಷ್ಮಿನಾರಾಯಣ ಅವರನ್ನು ಬಂಧಿಸಲು ಪೊಲೀಸರು ಮುಂದಾದರು. ಈ ಸುದ್ದಿ ತಿಳಿದ ಲಕ್ಷ್ಮಿನಾರಾಯಣ ಅವರು ನಾಪತ್ತೆಯಾಗಿದ್ದರು.

ಮಸೂದ್ ನನ್ನು ಅಕ್ರಮವಾಗಿ ಜೈಲಿನಿಂದ ತಪ್ಪಿಸಿಕೊಳ್ಳಲು ಸಹಕರಿಸಿ, ಕರ್ತವ್ಯ ಲೋಪ ಎಸೆಗಿದ್ದಾರೆ ಎಂದು ಆರ್ ಟಿಐ ಕಾರ್ಯಕರ್ತ ಎ ಆರ್ ಅಶೋಕ್ ಕುಮಾರ್ ಅಡಿಗ ಅವರು ಆರೋಪಿಸಿದ ಮೇಲೆ ಈ ಪ್ರಕರಣ ಬೆಳಕಿಗೆ ಬಂದಿತ್ತು.

ಏನಿದು ಪ್ರಕರಣ: ಡಿಸೆಂಬರ್ 2011ರಲ್ಲಿ ಜೈಲ್ ಸೂಪರಿಂಟೆಂಡ್ ಟಿಎಚ್ ಲಕ್ಷ್ಮಿನಾರಾಯಣ ಹಾಗೂ ಅವರ ಸಹಾಯಕಿ ಡಾ. ಅನಿತಾ ಅವರು ಮಸೂದ್ ನನ್ನು ಅಕ್ರಮವಾಗಿ ಜೈಲಿನಿಂದ ತಪ್ಪಿಸಿಕೊಳ್ಳಲು ಸಹಕರಿಸಿ, ಕರ್ತವ್ಯ ಲೋಪ ಎಸೆಗಿದ್ದಾರೆ ಎಂದು ಆರ್ ಟಿಐ ಕಾರ್ಯಕರ್ತ ಎ ಆರ್ ಅಶೋಕ್ ಕುಮಾರ್ ಅಡಿಗ ಅವರು ಆರೋಪಿಸಿದ್ದರು.

ಮುಂಬೈನ ಸೈಯದ್ ಮಹಮ್ಮದ್ ಜಾಮದಾರ್ ಎಂಭುವರ ಮಗ ಎಸ್ ಎಂ ಮಸೂದ್ ಡಿ.27, 2011 ರಂದು ಜೈಲಿನಿಂದ ತಪ್ಪಿಸಿಕೊಂಡಿದ್ದ ಪ್ರಕರಣದ ಬಗ್ಗೆ ಐಜಿಪಿ(ಬಂದೀಖಾನೆ)ಎಸ್ ರವಿ ಅವರ ನೇತೃತ್ವದಲ್ಲಿ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು.

ವರದಿ ಪ್ರಕಾರ ಲಕ್ಷ್ಮಿನಾರಾಯಣ ಹಾಗೂ ಸಹಾಯಕ ಸೂಪರಿಂಟೆಂಡ್ ಡಾ ಅನಿತಾ ಅವರು ವಿಚಾರಾಧೀನ ಖೈದಿಯಾಗಿದ್ದ ಮಸೂದ್ ನನ್ನು ಬಿಡುಗಡೆ ಮಾಡುವಾಗ ಕೋರ್ಟಿನ ಅನುಮತಿ ಪತ್ರವಾಗಲಿ, ಬಂದೀಖಾನೆ ಸಚಿವಾಲಯದ ಪತ್ರವಾಗಲಿ ಆಧಾರವಾಗಿಟ್ಟುಕೊಂಡಿರಲಿಲ್ಲ. [ಇದನ್ನು ಓದಿ: ಯಡ್ಡಿ ಔಟ್, ಜೈಲರ್ ಬ್ಯಾಕ್ ಟು ಪರಪ್ಪನ ಅಗ್ರಹಾರ]

ವಕೀಲನ ಪತ್ರ ಬಿಡುಗಡೆ ಮಾಡಿತು: ಖೈದಿ ನಂ 5782 ಮಸೂದ್ ನನ್ನು ಬಿಡುಗಡೆ ಮಾಡಲು ಕೋರ್ಟ್ ಜಾಮೀನು ಪತ್ರ ಕಾರಣವಲ್ಲ. ಚೆನ್ನೈನ ವಕೀಲ ಎಫ್ ಅರೀಫ್ ನವಾಜ್ ಅವರು ಬರೆದ ಪತ್ರ ಕಾರಣ ಎಂದು ಅಡಿಗ ಆರೋಪಿಸಿದ್ದಾರೆ.

ಮುಂಬೈ, ದೆಹಲಿ, ಜೈಪುರದಲ್ಲಿ ವಿವಿಧ ಪ್ರಕರಣಕ್ಕೆ ಸಂಬಂಧಿಸಿದಂತೆ ಮಸೂದ್ ಬೇಕಾಗಿದ್ದಾನೆ. COFEPOSA ಕಾಯಿದೆ ಅಡಿ ಪ್ರಕರಣ, 50ಕ್ಕೂ ಅಧಿಕ ಚೆಕ್ ಬೌನ್ಸ್ ಪ್ರಕರಣ, ವಂಚನೆ ಪ್ರಕರಣಗಳು ಮಸೂದ್ ಮೇಲಿದೆ.

ಚೆನ್ನೈ ವಕೀಲ ಆರೀಫ್ ಸಲ್ಲಿಸಿದ ಪತ್ರದ ಜೊತೆ ಯಾವುದೇ ಜಾಮೀನು ಪತ್ರ ಇರಲಿಲ್ಲ. ಮಸೂದ್ ಬಿಡುಗಡೆ ನಂತರ ಪರಪ್ಪನ ಅಗ್ರಹಾರ ಜೈಲಿಗೆ ದೇಶದ ವಿವಿಧ ಕೋರ್ಟ್ ಗಳಿಂದ 8ಕ್ಕೂ ಅಧಿಕ ಸಮನ್ಸ್ ಬಂದಿತ್ತು.

English summary
High court gives relief to Jailer Lakshminarayana by revoking his suspension. Earlier Karnataka government suspended Chief jail superintendent TH Lakshminarayana and assistant superintendent Dr Anitha for dereliction of duty and allegedly releasing most wanted criminal Masood from Parappana Agraha Jail
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X