• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜ್ಯಪಾಲರ ನಿರಂತರ ಸಂಪರ್ಕದಲ್ಲಿ ಯಡಿಯೂರಪ್ಪ

By Srinath
|
ಬೆಂಗಳೂರು, ಜುಲೈ 2: ರಾಷ್ಟ್ರಪತಿ ಚುನಾವಣೆ ಎಂಬುದು ಬಿಜೆಪಿ ಭಿನ್ನ'ಮತದ' ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪಗೆ ವರವಾಗಿ ಪರಿಣಮಿಸಿದೆ ಎನ್ನಬಹುದು. ಪ್ರಣಬ್ ದಾ ಅವರನ್ನೇ ಮುಂದಿನ ರಾಷ್ಟ್ರಪತಿಯನ್ನಾಗಿ ಆಯ್ಕೆ ಮಾಡಬೇಕೆಂದು ಕಾಂಗ್ರೆಸ್ ಬಯಸುತ್ತಿರುವುದನ್ನು ಯಡಿಯೂರಪ್ಪ ಮಂತ್ರದಂಡವನ್ನಾಗಿ ಬಳಸಿಕೊಳ್ಳುವ ಸಾಧ್ಯತೆಗಳು ನಿಚ್ಚಳವಾಗಿವೆ.

ಜುಲೈ 5ರ ಗಡುವಿನೊಳಗೆ ನಾಯಕತ್ವ ಬದಲಾವಣೆಗೆ ವರಿಷ್ಠರು ಒಪ್ಪದೇ ಇದ್ದಲ್ಲಿ ಮತ್ತೆ ಕಾಯುವ ರಗಣೆ ಬೇಡ. ಆ ತಾಳ್ಮೆ ನನಗೂ ಇಲ್ಲ ರಾಜ್ಯದ ಜನತೆಗೂ ಇಲ್ಲ. ನಮ್ಮದು ಅಂತಿಮ ಹೋರಾಟ ಎಂದು ಯಡಿಯೂರಪ್ಪ ಬಣ ಈಗಾಗಲೇ ಘೋಷಿಸಿಯಾಗಿದೆ.

ತಾಜಾ ವರದಿಗಳ ಪ್ರಕಾರ ಕಳೆದ ವಾರ ರಾಜೀನಾಮೆ ಸಲ್ಲಿಸಿದ್ದ ಎಲ್ಲ 9 ಸಚಿವರು ಬಿಜೆಪಿ ಕೇಂದ್ರ ವರಿಷ್ಠರ ಸೂಚನೆಯ ಮೇರೆಗೆ ತಮ್ಮ ರಾಜೀನಾಮೆಯನ್ನು ವಾಪಸ್ ತೆಗೆದುಕೊಂಡಿದ್ದಾರೆ. ಇಂದು ಮಧ್ಯಾಹ್ನ ಯಡಿಯೂರಪ್ಪ ಬಣದ ಕೆಲ ಹಿರಿಯ ನಾಯಕರು ಇಂದು ಮಧ್ಯಾಹ್ನ ದೆಹಲಿಗೆ ತೆರಳಲಿದ್ದಾರೆ.

ಅಲ್ಲಿ ನಿತಿನ್ ಗಡ್ಕರಿ ಅವರ ಪುತ್ರ ಸಾರಂಗ್ ಅವರ ಮದುವೆ ಆರತಕ್ಷತೆಯಲ್ಲಿ ಪಾಲ್ಗೊಂಡು ಹಾಗೆಯೇ ವರಿಷ್ಠರನ್ನೂ ಭೇಟಿ ಮಾಡುವುದಾಗಿ ಸಚಿವ ಜಗದೀಶ್ ಶೆಟ್ಟರ್ ಅವರು ಸುದ್ದಿಗೋಷ್ಠಿಯಲ್ಲಿ ಇದೀಗ ತಾನೇ ಪ್ರಕಟಿಸಿದ್ದಾರೆ.

ಪರ್ಯಾಯ ಸಭೆ: ಪರಿಸ್ಥಿತಿ ಹೀಗಿರುವಾಗ ಒಂದು ವೇಳೆ ವರಿಷ್ಠರು ತಮ್ಮ ಬೇಡಿಕೆಗೆ ವರಿಷ್ಠರು ಸೊಪ್ಪು ಹಾಕದೆ ಈ ಹಿಂದಿನ ನಡೆಯನ್ನೇ ಮತ್ತೆ ತುಳಿದರೆ ಡೌಟೇ ಬೇಡ ಸೀದಾ ರಾಜ್ಯಪಾಲರ ಬಳಿ ಹೋಗೋಣ. ಅದಕ್ಕೂ ಮುನ್ನ ನಮ್ಮದೇ ಪರ್ಯಾಯ ಶಾಸಕಾಂಗ ಸಭೆ ಕರೆದು, ನಾಯಕನನ್ನು (ಜಗದೀಶ್ ಶೆಟ್ಟರ್) ಆರಿಸಿಟ್ಟುಕೊಂಡಿರೋಣ ಎಂದು ಯಡಿಯೂರಪ್ಪ ಅವರು ತಮ್ಮ ಮುಂದಿನ ನಡೆಯ ಬಗ್ಗೆ ಆಪ್ತರ ಬಳಿ ನಿಗೂಢವಾಗಿ ಹೇಳಿದ್ದಾರೆ ಎಂದು ಮೂಲಗಳು ಹೇಳಿವೆ.

ಯಡಿಯೂರಪ್ಪ ಅವರು ಇಷ್ಟು ಆತ್ಮವಿಶ್ವಾಸದೊಂದಿಗೆ ರಾಜಭವನದತ್ತ ಹೆಜ್ಜೆ ಹಾಗುವ ಮಾತನ್ನು ಹೇಗೆ ಹೇಳಿದರು ಎಂಬುದರ ಬೆನ್ನುಹತ್ತಿದಾಗ... ಯಡಿಯೂರಪ್ಪ ಅವರು ಇತ್ತೀಚೆಗೆ ಮೇಲಿಂದ ಮೇಮೆ ಮೂರ್ನಾಲ್ಕು ಬಾರಿ ರಾಜಭವನದೊಳಕ್ಕೆ entry ಹಾಕಿದ್ದರು ಎಂಬ ಕುತೂಹಲಕಾರಿ ಮಾಹಿತಿ ಬಯಲಾಗಿದೆ. ಆದರೆ ಯಡಿಯೂರಪ್ಪಜೀ ಇದನ್ನು ತಮ್ಮ ಬಣದವರಿಗೇ ಹೇಳಿಲ್ಲ.

ಯಾಕಪಾ ಹೀಗೆ ಎಂದು ಕೆದಕಿದಾಗ ಯಡಿಯೂರಪ್ಪ ಅವರು ನಾಯಕತ್ವ ಬದಲಾವಣೆಯ ನೆಪದಲ್ಲಿ ಸಿಬಿಐ ಬಂಧನದ ಭೀತಿವಾದದಿಂದ ಪಾರಾಗಲು ಯತ್ನಿಸುತ್ತಿರುವುದು ಸುಳ್ಳೇನೂ ಅಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಅತ್ತ ಕಾಂಗ್ರೆಸ್ ಅಧಿನಾಯಕಿ ಯಡಿಯೂರಪ್ಪ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಅವರನ್ನು ಸಿಬಿಐ ಇಕ್ಕಳದಿಂದ ಪಾರು ಮಾಡಲು ಕಂಕಣಬದ್ಧರಾಗಿರುವುದೂ ಸುಳ್ಳೇನೂ ಅಲ್ಲ. ಹಾಗಾಗಿಯೇ ಯಡಿಯೂರಪ್ಪಜೀ ಕಳೆದ ತಿಂಗಳು 20ರಂದು (ಹೈಕೋರ್ಟ್ ಜಾಮೀನು ಮಾಡುವ ಮುನ್ನಾ ದಿನ) ಸೀದಾ ರಾಜಭನವದೊಳಕ್ಕೆ ನುಸುಳಿದವರೆ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ತದನಂತರ ಜಾಮೀನು ಮಂಜೂರಾದ ಮಾರನೆಯ ದಿನವೂ ಮತ್ತೆ ರಾಜಭವನದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಹಾಗೆಯೇ ನಾಲ್ಕನೆಯ ಬಾರಿ ಜೂನ್ 28ರಂದು ಮಧ್ಯಾಹ್ನ ಸುಮಾರು 2 ಗಂಟೆ ಕಾಲ ಭಾರದ್ವಾಜ್ ಎದುರು ಕುಳಿತಿದ್ದರು ಎಂದು ಮೂಲಗಳು ರಾಜಭವನದ ಗೋಡೆಗಳು ಪಿಸುಗುಟ್ಟಿವೆ.

ಹೀಗೆ ರಾಜ್ಯಪಾಲ ಭಾರದ್ವಾಜರನ್ನು ನಾಲ್ಕು ಭೇಟಿಯಾದಾಗಲೂ ಯಡಿಯೂರಪ್ಪಜೀ ಪಠಿಸಿರುವುದು ಒಂದೇ ಮಂತ್ರ - ನಿಮ್ಮ ದಿಲ್ಲಿ ಮೇಡಂ ಹತ್ರ ಎಲ್ಲ ಮಾತ್ನಾಡಿದ್ದೇನೆ. ಪರಿಸ್ಥಿತಿ ನೋಡಿಕೊಂಡು ರಾಜ್ಯಪಾಲರಾಗಿ ಯಾವುದೇ ಕ್ಷಣದಲ್ಲೂ ನಮ್ಮ ಪರವಾದಂತಹ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಭಾರದ್ವಾಜರಿಗೆ ತಿಳಿಯ ಹೇಳಿದ್ದಾರೆ.

ಹಾಗಾಗಿಯೇ ಮೊನ್ನೆ ಸದಾನಂದ ಗೌಡರು (ಜುಲೈ 9ರಂದು) ವಿಧಾನಮಂಡಲದ ಅಧಿವೇಶನ ಕರೆಯಲು ಅವಕಾಶ ಕೋರಿ ರಾಜ್ಯಪಾಲ ಭಾರದ್ವಾಜರನ್ನು ಭೇಟಿಯಾದಾಗ ರಾಜ್ಯಪಾಲರು ಹೆಚ್ಚು ಮಾತನಾಡದೆ ಹತ್ತೇ ನಿಮಿಷದಲ್ಲಿ ಸದಾನಂದರನ್ನು ವಾಪಸು ಕಳಿಸಿದರು ಎಂಬುದು ಗುಟ್ಟೇನೂ ಅಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಬಿಜೆಪಿ ಬಿಕ್ಕಟ್ಟು ಸುದ್ದಿಗಳುView All

English summary
Karnataka BJP crisis: BJP leader BS Yeddyurappa is in constant touch with the Governor HR Bhardwaj say Raj Bhvan sources.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more