ಬೀದರ್: ಸದಸ್ಯರಿಗೆ ಚಪ್ಪಲಿ ತೋರಿಸಿದ ನಗರಸಭಾಧ್ಯಕ್ಷೆ

ಬೆಳಗ್ಗೆ 11 ಗಂಟೆಗೆ ಸಭೆಯು ಆರಂಭವಾಯಿತು. ವಿಧಾನ ಪರಿಷತ್ತಿಗೆ ನೂತನವಾಗಿ ಆಯ್ಕೆಯಾದ ರಘುನಾಥರಾವ್ ಮಲ್ಕಾಪುರೆ ಅವರನ್ನು ಸನ್ಮಾನಿಸಿದ ಬಳಿಕ ಅಧ್ಯಕ್ಷೆ ಶ್ರೀದೇವಿ ಕರಂಜಿ ಈಗ ಬಜೆಟ್ ಮಂಡನೆಯಾಗಲಿದೆ ಎಂದು ಪ್ರಕಟಿಸುತ್ತಿದ್ದಂತೆ ಈ ಬೆಳವಣಿಗೆ ನಡೆಯಿತು.
ಜೆಡಿಎಸ್ ಸದಸ್ಯರಾದ ಮಾರ್ಕಸ್ ಉಪಾಧ್ಯಾಯ, ಮನೋಹರ ದಂಡೆ ಮತ್ತು ಶಿವಕುಮಾರ ಭಾವಿಕಟ್ಟಿ ಬಜೆಟ್ ಮಂಡನೆಗೆ ತಕರಾರು ತೆಗೆದರು. 'ನಮಗೆ ಬಜೆಟ್‌ನ ಪೂರ್ಣ ಮಾಹಿತಿ ಇಲ್ಲ. ತರಾತುರಿಯಲ್ಲಿ ಬಜೆಟ್ ಮಂಡಿಸಬೇಡಿ' ಎಂದು ಎದ್ದು ನಿಂತರು. ಈಗಾಗಲೇ ನಿಗದಿ ಪಡಿಸಿರುವಂತೆ ಬಜೆಟ್ ಮಂಡನೆಯಾಗಲಿದೆ ಎಂದು ಅಧ್ಯಕ್ಷೆ ಪ್ರತಿಕ್ರಿಯಿಸಿದರು.
ತಕರಾರು ತೆಗೆದಿದ್ದ ಜೆಡಿಎಸ್ ಸದಸ್ಯರು ಕೂಡಲೇ ಅಧ್ಯಕ್ಷರ ಪೀಠದ ಎದುರಿಗೆ ಧಾವಿಸಿ ಏರಿದ ದನಿಯಲ್ಲಿ ವಾಗ್ವಾದಕ್ಕೆ ನಿಂತರು. ವಾಗ್ವಾದ ತಾರಕಕ್ಕೇರುತ್ತಿದ್ದಂತೆ ಕಾಲಿನಲ್ಲಿದ್ದ ಚಪ್ಪಲಿಯನ್ನು ಬಲಗೈನಲ್ಲಿ ತೆಗೆದುಕೊಂಡ ಶ್ರೀದೇವಿ ಕರಂಜಿ ಅವರು ಸದಸ್ಯರಿಗೆ ಚಪ್ಪಲಿ ತೋರಿಸುತ್ತಾ ವಾಗ್ವಾದಕ್ಕೆ ನಿಂತರು. ಇದು ಸದಸ್ಯರನ್ನು ಇನ್ನಷ್ಟು ಕೆರಳಿಸಿತು.
ಅಧ್ಯಕ್ಷೆ ಚಪ್ಪಲಿಯನ್ನು ಕೈಗೆ ತೆಗೆದುಕೊಂಡ ಕ್ರಮವನ್ನು ಖಂಡಿಸಿದ ಸದಸ್ಯರು ಜಗಳಕ್ಕೆ ಮುಂದಾದರು. ಸಿಬ್ಬಂದಿ, ಇತರ ಸದಸ್ಯರು ಸಮಾಧಾನಪಡಿಸಲು ಮುನ್ನುಗ್ಗಿದಾಗ ಯಾರು ಏನು ಹೇಳುತ್ತಿದ್ದಾರೆ ಎಂದು ಕೇಳದ ಸ್ಥಿತಿ ನಿರ್ಮಾಣವಾಯಿತು.
ಬಜೆಟ್‌ಗೆ ಅನುಮೋದನೆ: ಗದ್ದಲದ ನಡುವೆ ನಗರಸಭೆಯ ಬಜೆಟ್ ಅನುಮೋದಿಸಲಾಯಿತು. ಬಜೆಟ್ ಅನುಮೋದನೆ ಆಯಿತು ಎಂಬುದನ್ನು ದೃಢಪಡಿಸಿದ ಆಯುಕ್ತ ರಾಮದಾಸ್, 'ಚರ್ಚೆ ಆಗಲಿಲ್ಲ. ಸದಸ್ಯರಿಗೆ ಒಂದು ವಾರದ ಹಿಂದೆಯೇ ಪ್ರತಿ ಕಳುಹಿಸಿರುತ್ತೇವೆ. ಹೀಗಾಗಿ, ಚರ್ಚೆ ಆಗಲಿಲ್ಲ. ಅನುಮೋದನೆ ಆಯಿತು' ಎಂದರು. ಆದರೆ, ಬಜೆಟ್ ಮಂಡನೆಯಾಯಿತು ಎಂಬುದು ಹೆಚ್ಚಿನ ಸದಸ್ಯರ ಗಮನಕ್ಕೆ ಬಾರಲಿಲ್ಲ. ಇತ್ತ, ಅಧ್ಯಕ್ಷೆ ಚಪ್ಪಲಿ ತೆಗೆದುಕೊಂಡ ಕಾರಣದಿಂದ ಮೂಡಿದ ಗೊಂದಲದ ವಾತಾವರಣದಿಂದಾಗಿ ಸಭೆಯನ್ನು ಮುಂದುವರಿಸಲಾಗಲಿಲ್ಲ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications