ಟೆಕ್ಕಿ ಶಬಾನಾ ವರದಕ್ಷಿಣೆ ಕಿರುಕುಳಕ್ಕೆ ಬಲಿ?

ಬೆಂಗಳೂರು, ಜು 2: ಸಾಫ್ಟ್ ವೇರ್ ಇಂಜಿನಿಯರ್ ಶೇಖ್ ಶಬಾನಾ ಆತ್ಮಹತ್ಯೆಯಿಂದ ಸತ್ತಿಲ್ಲ. ವರದಕ್ಷಿಣೆ ಕಿರುಕುಳಕ್ಕೆ ಬಲಿಯಾಗಿದ್ದಾಳೆ ಎಂಬ ಸುದ್ದಿ ಹೊರ ಬಿದ್ದಿದೆ. ಶನಿವಾರ ತಡರಾತ್ರಿ ಭೈಯಪ್ಪನಹಳ್ಳಿ ನಿವಾಸದಲ್ಲಿ ಶಬಾನಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಶಬಾನಾ ಅವರ ತಾಯಿ, ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಆರೋಪಿಸಿದ್ದಾರೆ.

ನವವಿವಾಹಿತೆ, ಟೆಕ್ಕಿ ಶಬಾನಾ ನಾಗವಾರಪಾಳ್ಯದ ನಿವಾಸದಲ್ಲಿ ಸೀಲಿಂಗ್ ಫ್ಯಾನಿಗೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದರು. ಶಬಾನಾ ಪತಿ ಶೇಖ್ ಸಾದನಿ ಬಾಷಾ ಕೂಡಾ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು, ಇಬ್ಬರು 9 ತಿಂಗಳ ಹಿಂದೆ ಮದುವೆಯಾಗಿದ್ದರು.

ಆದರೆ, ಶಬಾನಾ ತಾಯಿ ಪೊಲೀಸರಿಗೆ ನೀಡಿರುವ ಹೇಳಿಕೆಯನ್ನು ಅಳಿಯ ಶೇಖ್ ನನ್ನು ಆರೋಪಿಯನ್ನಾಗಿ ಮಾಡಲಾಗಿದೆ. ವರದಕ್ಷಿಣೆ ಕೊಡಲಿಲ್ಲ ಎಂಬ ಕಾರಣಕ್ಕೆ ಶಬಾನಾಳನ್ನು ಕೊಂದಿದ್ದಾನೆ ಎಂದು ದೂರಲಾಗಿದೆ.

ಶಬಾನಾಳಿಗೆ ಮದುವೆ ಸಂದರ್ಭದಲ್ಲಿ ಹಾಕಿದ್ದ ಆಭರಣ, ಒಡವೆ ವಸ್ತ್ರಗಳು ಈಗ ಮಾಯವಾಗಿದೆ. ಎಲ್ಲವನ್ನು ಅಡ ಇಟ್ಟು ದುಡ್ಡು ಪಡೆದಿರುವ ಶೇಖ್, ದುರಾಸೆಗೆ ನನ್ನ ಮಗಳು ಬಲಿಯಾಗಿದ್ದಾಳೆ. ಸದಾ ಕಾಲ ನನ್ನ ಮಗಳನ್ನು ಹಿಂಸಿಸುತ್ತಿದ್ದ ಎಂದು ಶಬಾನಾಳ ತಾಯಿ ಹೇಳಿಕೆ ನೀಡಿದ್ದಾರೆ.

ಘಟನೆ ಹಿನ್ನೆಲೆ:
ನೆಲ್ಲೂರು ಮೂಲದ ಶೇಕ್ ಶಬಾನಾ ಹಾಗೂ ಸಮ್ ದಾನಿ ಪಾಷಾ ಮದುವೆಯಾದ ಬಳಿಕ ನಾಗವಾರಪಾಳ್ಯಕ್ಕೆ ಬಂದು ಫ್ಲೈ ಓವರ್ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿದ್ದರು.

ವೈಟ್ ಫೀಲ್ಡ್ ಬಳಿಯ ಸಾಫ್ಟ್ ವೇರ್ ಕಂಪನಿಯಲ್ಲಿ ಶೇಕ್ ಶಬಾನಾ ಉದ್ಯೋಗಿಯಾಗಿದ್ದರು. ಹಲವು ಬಾರಿ 'ವರ್ಕ್ ಫ್ರಮ್ ಹೋಮ್' ಸೌಲಭ್ಯದ ಮೂಲಕ ಕಾರ್ಯ ನಿರ್ವಹಿಸುತ್ತಿದರು.

ಸಮ್ ದಾನಿ ಪಾಷಾ ಕೂಡಾ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು, ಸಂಬಳದ ಹಣವನ್ನು ದುಂದು ವೆಚ್ಚ ಮಾಡುತ್ತಿದ್ದ. ಪತ್ನಿಯ ಚಿನ್ನಾಭರಣವನ್ನು ಅಡವಿಟ್ಟು ಸಾಲ ಪಡೆದು ಖರ್ಚು ಮಾಡುತ್ತಿದ್ದ. ಇದನ್ನು ಪ್ರಶ್ನಿಸಿದ ಪತ್ನಿ ಶಬಾನಾ ಮೇಲೆ ಹಲ್ಲೆ ಮಾಡಿದ್ದ.

ಈ ವೀಕೆಂಡ್ ಅಡವಿಟ್ಟ ಚಿನ್ನಾಭರಣಗಳನ್ನು ಬಿಡಿಸಿಕೊಂಡು ಬರುವಂತೆ ಪತಿಗೆ ಶಬಾನಾ ಒತ್ತಾಯಿಸಿದ್ದಾಳೆ. ಎಂದಿನಂತೆ ಮಾಮೂಲಿ ಜಗಳದಂತೆ ಹೆಂಡತಿಯನ್ನು ಗದರಿಸಿದ್ದಾನೆ. ಹೆಚ್ಚಿನ ಹಣವನ್ನು ನಿನ್ನ ತವರಿನಿಂದ ತೆಗೆದುಕೊಂಡು ಬಾ ಎಂದು ಹೇಳಿ ಪಾಷಾ ಹೊರ ನಡೆದಿದ್ದಾನೆ. ಆದರೆ, ತೀವ್ರವಾಗಿ ಮನನೊಂದ ಶಬಾನಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಅಳಿಯ ಮತ್ತು ಮಗಳ ನಡುವೆ ಮನಸ್ತಾಪ ಸಾಮಾನ್ಯವಾಗಿದ್ದರು. ಪಾಷಾ ದುರಾಸೆ ವ್ಯಕ್ತಿಯಾಗಿದ್ದ. ವರದಕ್ಷಿಣೆ ಹಣಕ್ಕಾಗಿ ಸದಾ ಪೀಡಿಸುತ್ತಿದ್ದ. ಅವನ ಕಾಟ ತಾಳಲಾರದೆ ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಶಬಾನಾ ತಾಯಿ ದೂರು ನೀಡಿದ್ದಾರೆ. ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದ ಭೈಯಪ್ಪನ ಹಳ್ಳಿ ಪೊಲೀಸರು ಈಗ ವರದಕ್ಷಿಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+